Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಕೇರಳ ಶೈಲಿಯ ಸೀರೆಗೆ ಫಿದಾ ಆದ ನಟಿಮಣಿಯರು...
ಸೀರೆಯಲ್ಲಿ ಹುಡುಗಿಯರ ಕಂಡರೆ ನಿಲ್ಲಲ್ಲ ಟೆಂಪರೇಚರ್ ಎಂಬ ಸಿನಿಮಾ ಹಾಡನ್ನು ನೀವು ಕೇಳಿರುತ್ತೀರಿ ತಾನೇ? ಸ್ತ್ರೀ ಯಾವುದೇ ಬಗೆಯ ಆಧುನಿಕ ವಸ್ತ್ರಗಳನ್ನು ಧರಿಸಿ ಸುಂದರಿಯಾಗಿ ಕಂಡರೂ ಸೀರೆ ಆಕೆಗೆ ನೀಡುವ ಚೆಲುವು ಮಾತ್ರ ವರ್ಣಿಸಲೂ ಸಾಧ್ಯವಿಲ್ಲದ್ದು. ನೀವು ಉಡುವ ಸೀರೆ ಯಾವುದೇ ಬಗೆಯದ್ದಾಗಿರಲಿ ಅದನ್ನು ಉಡುವ ವಿಧಾನ ಆಧುನಿಕವಾಗಿದ್ದರೆ ನಿಮ್ಮನ್ನು ನೋಡುವವರು ಬೆಕ್ಕಸಬೆರಗಾಗಿ ಸ್ತಬ್ಧರಾಗಿಬಿಡುತ್ತಾರೆ.
ಮಹಿಳೆಯು ಹೆಚ್ಚು ಮೆಚ್ಚುವ ಸೀರೆ ರೇಷ್ಮೆಯಾಗಿದ್ದು ಒಮ್ಮೆಯಾದರೂ ರೇಷ್ಮೆ ಸೀರೆಯನ್ನು ಉಟ್ಟು ಮೆರೆಯಬೇಕು ಎಂಬ ಹೆಬ್ಬಯಕೆ ಆಕೆಯ ಮನದಲ್ಲಿ ಇರುತ್ತದೆ. ಆದರೆ ರೇಷ್ಮೆಗಿಂತಲೂ ಅತ್ಯಂತ ಶ್ರೀಮಂತವಾಗಿರುವ ಸೀರೆಯ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಕೇರಳ ಸೀರೆ ತನ್ನ ವಿಶಿಷ್ಟತೆ ಮತ್ತು ಸೊಬಗಿನಿಂದ ಹೆಚ್ಚಿನ ಮಹಿಳೆಯರನ್ನು ತನ್ನತ್ತ ಸೆಳೆದುಕೊಂಡಿದೆ. ಸೆಲೆಬ್ರಿಟಿಗಳೂ ಕೂಡ ಈ ಸೀರೆಯ ಹುಚ್ಚು ಅಭಿಮಾನಿಗಳಾಗಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಅವರು ಉಟ್ಟಿರುವ ಕೇರಳ ಸೀರೆಯ ಸೌಂದರ್ಯವನ್ನು ಇಲ್ಲಿ ತೋರಿಸುತ್ತಿದ್ದೇವೆ.

ದೀಪಿಕಾ ಪಡುಕೋಣೆ
ಬಿಳಿ ಮತ್ತು ಚಿನ್ನ ಬಣ್ಣ ಮಿಶ್ರಿತವಾಗಿರುವ ಕೇರಳ ಸೀರೆಯನ್ನು ದೀಪಿಕಾ ಕೇನ್ಸ್ 2016 ರಲ್ಲಿ ಉಟ್ಟು ಸಂಭ್ರಮಿಸಿದ್ದಾರೆ. ರೋಹಿತ್ ಬಾಲ್ ಈ ಸೀರೆಯನ್ನು ವಿನ್ಯಾಸಪಡಿಸಿದ್ದಾರೆ. ಸೀರೆಗೆ ತೋಳಿಲ್ಲದ ಸ್ಲೀವ್ ರವಿಕೆಯನ್ನು ಆಕೆ ತೊಟ್ಟಿದ್ದು ದೀಪಿಕಾ ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಎಂಬುದನ್ನು ನೀವೇ ನೋಡಿ

ರಾಣಿ ಮುಖರ್ಜಿ
ಸುಂದರವಾದ ಕೇರಳ ಸೀರೆಯಲ್ಲಿ ರಾಣಿ ನಮ್ಮ ಮನವನ್ನು ಕದ್ದಿದ್ದಾರೆ. ಮಲ್ಲಿಗೆ ಮತ್ತು ಚಿನ್ನದ ಚೈನ್ ಅನ್ನು ಧರಿಸಿ ಆಕೆ ಇನ್ನಷ್ಟು ಸುಂದರವಾಗಿ ಕೇರಳ ಸೀರೆಯಲ್ಲಿ ಮಿಂಚುತ್ತಿದ್ದಾರೆ.

ಕಂಗನಾ ರಾಣಾವತ್
ಸುಂದರವಾದ ಕೇರಳ ಸೀರೆಯ ಮೆರುಗಿನಲ್ಲಿ ಕಂಗನಾ ಕೂಡ ನಮ್ಮನ್ನು ಮೋಡಿ ಮಾಡಿದ್ದಾರೆ. ಕಂಗನಾ ಈ ಸೀರೆಗೂ ತೋಳಿಲ್ಲದ ರವಿಕೆಯನ್ನು ಧರಿಸಿ ಚಿನ್ನದ ಜುಮುಕಿಯನ್ನು ತೊಟ್ಟಿದ್ದಾರೆ. ಆಕೆ ತಮ್ಮ ಗುಂಗುರು ಕೂದಲನ್ನು ಮುಕ್ತವಾಗಿ ಬಿಟ್ಟಿದ್ದು ಸೀರೆಗೆ ಹೊಸ ಮೆರುಗನ್ನು ಇದು ತಂದಿದೆ.

ಆಸೀನ್
ಕೇರಳ ಸೀರೆಯಲ್ಲಿ ಅಸೀನ್ ಮಿಂಚಿದ್ದು ಅಸೀನ್ ಹುಟ್ಟೂರು ಕೂಡ ಕೇರಳವಾಗಿದೆ. ಈ ಸೀರೆಯನ್ನು ಹೇಗೆ ಉಟ್ಟುಕೊಳ್ಳಬೇಕು ಎಂಬುದನ್ನು ಅಸೀನ್ ಚೆನ್ನಾಗಿ ಅರಿತುಕೊಂಡಿದ್ದಾರೆ ಎಂಬುದನ್ನು ಫೋಟೋ ನೋಡಿಯೇ ಗಮನಿಸಬಹುದಾಗಿದೆ. ಸೀರೆಗೆ ಒಪ್ಪುವ ಮಲ್ಲಿಗೆ ದಂಡೆಯನ್ನು ತನ್ನ ತುರುಬಿನ ಸುತ್ತ ಅಲಂಕರಿಸಿ ಬಳೆಯನ್ನು ಧರಿಸಿ ಸೀರೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಾರೆ,

ಐಶ್ವರ್ಯಾ ರೈ
ವಿನ್ಯಾಸಗಳಿಂದ ಶ್ರೀಮಂತವಾಗಿರುವ ಸುಂದರ ಕೇರಳ ಸೀರೆಯಲ್ಲಿ ಐಶ್ವರ್ಯಾ ಕೂಡ ಮಿಂಚಿದ್ದಾರೆ. ಚಿನ್ನದ ನೆಕ್ಲೇಸ್ ಮತ್ತು ಕಿವಿಯಾಭರಣವನ್ನು ಐಶ್ ಸೀರೆಗೆ ಮ್ಯಾಚಿಂಗ್ ಆಗಿ ಆಕೆ ಧರಿಸಿಕೊಂಡಿದ್ದು ಚಿನ್ನದ ಬಣ್ಣದ ಪರ್ಸ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ.

ಐಶಾದಲ್ಲಿ ಸೋನಂ ಕೇರಳ ಸೀರೆ ಲುಕ್
ಐಶಾ ಸಿನಿಮಾದಲ್ಲಿ ಸೋನಂ ಕೇರಳ ಸೀರೆಯನ್ನುಟ್ಟು ಕಂಗೊಳಿಸಿದ್ದಾರೆ. ಸೀರೆಗೆ ಮ್ಯಾಚಿಂಗ್ ಆಗಿ ಎಂಬ್ರಾಯಿಡರಿ ರವಿಕೆಯನ್ನು ಅವರು ತೊಟ್ಟುಕೊಂಡಿದ್ದು ಚಿನ್ನದ ಬಳೆ, ಜುಮುಕಿಗಳನ್ನು ತೊಟ್ಟುಕೊಂಡಿದ್ದಾರೆ. ತುರುಬಿಗೆ ಮಲ್ಲಿಗೆಯನ್ನು ಮುಡಿದುಕೊಂಡು ಆಕೆ ಕಂಗೊಳಿಸಿದ್ದಾರೆ.

ಶಿಲ್ಪಾ ಶೆಟ್ಟಿ
ಇತರ ಸೆಲೆಬ್ರಿಟಿಗಳಂತೆಯೇ, ಶಿಲ್ಪಾ ಕಪ್ಪು ರವಿಕೆಯೊಂದಿಗೆ ಕೇರಳ ಸೀರೆಯನ್ನು ಉಟ್ಟಿದ್ದಾರೆ. ಬಿಳಿ ಬಣ್ಣ ಮುತ್ತಿನ ನೆಕ್ಲೇಸ್ ಅನ್ನು ಸೀರೆಗೆ ಮ್ಯಾಚಿಂಗ್ ಆಗಿ ಶಿಲ್ಪಾ ತೊಟ್ಟುಕೊಂಡಿದ್ದಾರೆ.



Click it and Unblock the Notifications
