Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ವಿದೇಶಿ ನಿಯತಕಾಲಿಕೆಯಲ್ಲಿ ಮಿಂಚು ಹರಿಸಿದ ಪ್ರಿಯಾಂಕಾ..!
ಬಾಲಿವುಡ್ ಅಂಗಳದಲ್ಲಿ ಈಗೀಗ ಸಿನಿ ತಾರೆಯರು ಹೆಚ್ಚು ಪ್ರಖ್ಯಾತಿಯನ್ನು ಗಳಿಸಿಕೊಳ್ಳುತ್ತಿದ್ದಾರೆ. ತಾವು ಅಭಿನಯಿಸುತ್ತಿರುವ ಸಿನಿಮಾಗಳಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ ಹೀಗೆ ಸಿನಿ ತಾರೆಯರ ದಂಡು ವಿದೇಶಿ ನೆಲದಲ್ಲೂ ತಮ್ಮ ಪ್ರತಿಭೆಯನ್ನು ಪಣಕ್ಕಿಟ್ಟು ಸೈ ಅನ್ನಿಸಿಕೊಂಡಿದ್ದು ಈಗ ಇದೇ ಹಾದಿಯಲ್ಲಿ ಮಿಂಚುತ್ತಿರುವ ಮಿಸ್ ವರ್ಲ್ಡ್ ಪ್ರಿಯಾಂಕಾ ಚೋಪ್ರಾ ವಿದೇಶಿ ನೆಲೆದ ಟೆಲಿ ಸೀರಿಯಲ್‌ನಲ್ಲಿ ತಮ್ಮ ಹೆಸರನ್ನು ಖ್ಯಾತಿಗೊಳಿಸುತ್ತಾ ಅವರ ಮನದಲ್ಲಿ ನೆಲೆಗೊಳ್ಳುವ ಪ್ರಯತ್ನದಲ್ಲಿದ್ದಾರೆ.
ಅಮೇರಿಕಾನ್ ಶೋವಾದ ಅಲೆಕ್ಸ್ ಇನ್ ಕ್ವಾಂಟಿಕೊದಲ್ಲಿನ ತಮ್ಮ ಪಾತ್ರದಲ್ಲಿ ಪ್ರಿಯಾಂಕಾ ಜನಮನ್ನಣೆಯನ್ನು ಗಳಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ತಾರೆಯಾಗಿ ಖ್ಯಾತಿಗಳಿಸಿಕೊಳ್ಳುತ್ತಿರುವ ಈ ಬೆಡಗಿ, ಇಲ್ಲೂ ಕೂಡ ಅಪಾರ ಮಟ್ಟದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಅವರ ಖ್ಯಾತಿಯ ಕಿರೀಟಕ್ಕೆ ಇನ್ನೊಂದು ಗರಿ ಎಂಬಂತೆ ಅಮೇರಿಕಾದ ಮತ್ತು ಕ್ಯಾನೆಡಾದ ನಿಯತಕಾಲಿಕೆಗಳ ಮುಖಪುಟದಲ್ಲಿ ಪ್ರಿಯಾಂಕಾ ಈಗ ಮಿಂಚುತ್ತಿದ್ದಾರೆ.
ಈಗ ಇನ್ನೊಂದು ಅಂತಾರಾಷ್ಟ್ರೀಯ ನಿಯತಕಾಲಿಕೆ ನ್ಯೂ ಯೂನಲ್ಲಿ ಮುದ್ದಾಗಿ ತಮ್ಮ ಸೌಂದರ್ಯವನ್ನು ಬಿಚ್ಚಿಟ್ಟಿದ್ದಾರೆ. ಕಪ್ಪು ಕಾಕ್‌ಟೈಲ್ ದಿರಿಸಿನಲ್ಲಿ ಮುಖಪುಟದ ಅಂದದ ಬೆಡಗಿಯ ನೋಟವನ್ನು ನಿಮಗೆ ಕಣ್ತುಂಬಿಕೊಳ್ಳಬಹುದಾಗಿದ್ದು, ದಿರಿಸಿನ ಸೌಂದರ್ಯದಲ್ಲಿ ಮಿಂಚುತ್ತಿರುವ ಬೆಡಗಿ ಪ್ರಿಯಾಂಕಾರನ್ನು ಬಣ್ಣಿಸಲು ಪದಗಳ ವರ್ಣನೆ ಸಾಲದಾಗಿದೆ...

ಸೊಬಗು
ಇದಕ್ಕಿಂತಲೂ ಇನ್ನಷ್ಟು ಸುಂದರಿಯಾಗಿ ಪ್ರಿಯಾಂಕಾ ಕಾಣಲು ಸಾಧ್ಯವೇ? ಪ್ರಿಯಾಂಕಾರ ಸೌಂದರ್ಯ ರಾಶಿಯನ್ನು ಕಣ್ತುಂಬಿಕೊಳ್ಳಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ಇಂದೇ ನಿಯತಕಾಲಿಕೆಯ ಪ್ರತಿಯನ್ನು ಖರೀದಿಸಿ

ಸರಳತೆಯ ನೋಟ
ಸರಳ ಸುಂದರ ನೋಟವನ್ನು ಪಿಗ್ಗಿ ಈ ನಿಯತಕಾಲಿಕೆಯ ಮುಖಪುಟದಲ್ಲಿ ಹೊರಹೊಮ್ಮಿಸುತ್ತಿದ್ದು ಆಕೆಯ ಗಾಢ ತುಟಿಬಣ್ಣ ಒಂದು ರೀತಿಯ ಭಿನ್ನ ಸೌಂದರ್ಯವನ್ನು ಪ್ರಿಯಾಂಕಾರಿಗೆ ನೀಡಿದೆ.

ಕಪ್ಪು ಕಾಕ್‌ಟೈಲ್ ದಿರಿಸು
ಕಪ್ಪು ಬಣ್ಣದ ಕಾಕ್‌ಟೈಲ್ ದಿರಿಸಿನಲ್ಲಿ ಸುರಸುಂದರಿಯಾಗಿ ಕಾಣುತ್ತಿರುವ ಪ್ರಿಯಾಂಕಾ ದಿರಿಸಿನ ಸೊಂಟದ ಭಾಗದಲ್ಲಿ ಕಟ್ ಔಟ್ ಅನ್ನು ಹೊಂದಿದ್ದಾರೆ.

ಪ್ರಿಯಾಂಕಾರ ಸೌಂದರ್ಯ ಶಕ್ತಿ
ಬಿಳಿ ಬಣ್ಣದ ಬಾತ್ ರೋಬ್‌ನಲ್ಲಿ ಸೌಂದರ್ಯ ದೇವತೆಯಾಗಿ ಕಂಗೊಳಿಸುತ್ತಿರುವ ಪ್ರಿಯಾಂಕಾ ದಿಟ್ಟ ಬೆಡಗಿ ಎಂದೆನಿಸಿದ್ದಾರೆ.ಸೌಂದರ್ಯ ಮತ್ತು ಧೈರ್ಯ ಆಕೆಗೆ ಸ್ಫೂರ್ತಿಯಾಗಿದೆ.



Click it and Unblock the Notifications
