Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಭಿಮಾನಿಗಳ ನಿದ್ದೆ ಕದ್ದ ಅನುಷ್ಕಾ ಕಿಲ್ಲರ್ ಲುಕ್‌ನಲ್ಲಿ!

ಬಾಲಿವುಡ್‌ನಲ್ಲಿ ಸಾಧನೆಯತ್ತ ಮುನ್ನುಗ್ಗುತ್ತಿರುವ ನಟಿ ಅನುಷ್ಕಾ ತಮ್ಮ ನಟನೆಯಿಂದ ಮಾತ್ರವಲ್ಲದೆ ಫ್ಯಾಶನ್ ಪ್ರಿಯತೆಯಿಂದಲೂ ತಮ್ಮ ಅಭಿಮಾನಿಗಳ ಮನಗೆದ್ದವರು ವಿರಾಟ್ ಕೊಹ್ಲಿ ಕೈಹಿಡಿದ ಮೇಲಂತೂ ತಮ್ಮ ಇಮೇಜ್ ಅನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಈ ಬೆಡಗಿ ತಮ್ಮದೇ ಹೆಸರನ್ನು ಬಾಲಿವುಡ್‌ನಲ್ಲಿ ಶಾಶ್ವತವಾಗಿಸಿದ್ದಾರೆ. ಅವರು ನಟಿಸಿದ ಯಾವುದೇ ಚಿತ್ರ ಕೂಡ ಅಭಿಮಾನಿಗಳಿಗೆ ರಸದೌತಣವನ್ನು ನೀಡಿದ್ದು ಫುಲ್ ಪೈಸಾ ವಸೂಲ್ ಮಾಡಿದೆ.
ಈಗ ಸದ್ಯದಲ್ಲಿ ನಟಿ ಸೂಯಿ ದಾಗ್ ಚಿತ್ರದಲ್ಲಿ ಬ್ಯುಸಿಯಾಗಿದ್ದು ಸಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. 'ಎನ್‌ಎಚ್ 10'ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದ ಅನುಷ್ಕಾ ತಮ್ಮ ಕಲಾ ನೈಪುಣ್ಯತೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಕೂಡ ಅನುಷ್ಕಾ ಮುಂದೆಯೇ ಇದ್ದು ಫೆಮಿನಾ ನಿಯತಕಾಲಿಕೆಯ ಇತ್ತೀಚಿನ ಆವೃತ್ತಿಯಲ್ಲಿ ಕವರ್ ಗರ್ಲ್ ಆಗಿ ಮಿಂಚಿದ್ದಾರೆ. ಕುರ್ಚಿಯಲ್ಲಿ ಕುಳಿತುಕೊಂಡು ಉಗುರು ಕಚ್ಚಿಕೊಂಡಿರುವ ಫೋಟೋ ಈ ನಿಯತಕಾಲಿಕೆಯ ಕವರ್ ಫೋಟೋದಲ್ಲಿದೆ.
ಈ ಫೋಟೋದಲ್ಲಿ ಸಾಕಷ್ಟು ಮುದ್ದಾಗಿಯೇ ಕಾಣುತ್ತಿರುವ ಅನುಷ್ಕಾ ಏನೋ ಆಲೋಚಿಸುತ್ತಿರುವಂತಿದ್ದರೂ ಸ್ಟೈಲ್‌ನಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಆಕೆಯ ದಿರಿಸು ಕೂಡ ನಮಗೆ ಮೆಚ್ಚುಗೆಯಾಗಿದ್ದು ಆಕೆಯ ಮೂಡ್‌ಗೆ ಹೊಂದುವಂತಿದೆ. ಅಮಿತ್ ಅಗರ್‌ವಾಲ್ ಹಾಫ್ ಶೋಲ್ಡರ್ ಬ್ಲೌಸ್ ಅನ್ನು ಅನುಷ್ಕಾ ಧರಿಸಿದ್ದು ನಿಜಕ್ಕೂ ಮುದ್ದಾಗಿ ಕಾಣುತ್ತಿದ್ದಾರೆ. ಡೆನೀಮ್ ಅನ್ನು ಟಾಪ್‌ಗೆ ಹೊಂದಿಕೆಯಾಗಿ ಅನುಷ್ಕಾ ಧರಿಸಿದ್ದಾರೆ. ಆಕೆಯ ಸ್ವತಂತ್ರ ಕೂದಲು ಆಕೆಯ ಈ ಅವತಾರಕ್ಕೆ ಕಿಲ್ಲಿಂಗ್ ಲುಕ್ ಅನ್ನು ನೀಡಿದೆ. ನಿಜಕ್ಕೂ ಅನುಷ್ಕಾ ನೀವು ಯಾವಾಗಲೂ ಮುದ್ದಾಗಿಯೇ ಕಾಣುತ್ತೀರಿ.



Click it and Unblock the Notifications

