Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಲ್ತಾನ್ ರಾಣಿ ಅನುಷ್ಕಾ ಶರ್ಮಾರ ಫ್ಯಾಷನ್ ಝಲಕ್...
ಬಾಲಿವುಡ್ ಅಂಗಳದಲ್ಲಿ ಫ್ಯಾಷನ್ ಪಾಠಕ್ಕೆ ಕೊರತೆ ಎಂದಿಗೂ ಉಂಟಾಗುವುದಿಲ್ಲ. ತಮ್ಮ ಹೊಸ ಸಿನಿಮಾಗಳ ಪ್ರಚಾರ ಸಮಯದಲ್ಲಿ ಬಾಲಿವುಡ್ ಬೆಡಗಿಯರು ಅಂದಚೆಂದಕ್ಕೆ ಕೊಡುವ ಮಹತ್ವದಿಂದಲೇ ನಾವು ಸಾಕಷ್ಟು ಫ್ಯಾಷನ್ ಮಹತ್ವವವನ್ನು ಅರಿತುಕೊಳ್ಳಬಹುದಾಗಿದೆ. ಸರಳವಾಗಿ ಅಲಂಕರಿಸಿಕೊಂಡು ಎದ್ದುಗಾಣುವಂತೆ ಕಾಣುವುದು ಹೇಗೆ ಎಂಬ ಸೂತ್ರವನ್ನು ನಾವು ಬೆಡಗಿಯರಿಂದ ಕಲಿತುಕೊಳ್ಳಬಹುದಾಗಿದೆ.
ಸಿನಿಗೃಹಕ್ಕೆ ಇನ್ನೇನು ಕಾಲಿಡಲಿರುವ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮ ನಟಿಸಿರುವ ದಬಾಂಗ್ ಬಿಡುಗಡೆಗೆ ಮುನ್ನವೇ ಭರ್ಜರಿ ಕುತೂಹಲವನ್ನು ಅಭಿಮಾನಿಗಳಲ್ಲಿ ಕೆರಳಿಸಿದೆ. ಸುಲ್ತಾನ್ ಟ್ರೇಲರ್ ನೋಡಿದವರಂತೂ ಸಲ್ಲು ಮತ್ತು ಅನುಷ್ಕಾರ ನಟನೆಗೆ ಮಾರು ಹೋಗಿರುವುದಂತೂ ಖಂಡಿತ.

ಅಂತೆಯೇ ಚಿತ್ರದ ಬಿಡುಗಡೆಗಾಗಿ ತುದಿಗಾಲಲ್ಲಿ ನಿಂತಿರುವುದೂ ನಿಜ. ಚಿತ್ರದ ಬಿಡುಗಡೆಗೆ ಮುನ್ನ ನಟ ನಟಿಯರು ಪ್ರಮೋಷನ್ ಕಾರ್ಯವನ್ನು ಮಾಡಲೇಬೇಕಾಗಿದ್ದು ಅನುಷ್ಕಾ ಮತ್ತು ಸಲ್ಮಾನ್ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಗೆ ಬಗೆಯ ದಿರಿಸುಗಳಲ್ಲಿ ಮಿಂಚುತ್ತಾ ಭರ್ಜರಿಯಾಗಿಯೇ ಚಿತ್ರದ ಪ್ರಮೋಷನ್ ಕಾರ್ಯವನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಪ್ರಮೋಷನ್ ಭಾಗವಾಗಿ ಅನುಷ್ಕಾ ನಮ್ಮನ್ನು ಮೋಡಿ ಮಾಡಿದ್ದು ತಮ್ಮ ಸರಳ ದಿರಿಸಿನಿಂದ. ಡೀಪ್ ಆಗಿರುವ ಕಂದು ಬಣ್ಣದ ಅನಾರ್ಕಲಿ ದಿರಿಸನ್ನು ಅನುಷ್ಕಾಗಿ ವಿನ್ಯಾಪಡಿಸಿದವರು ಲೇಬಲ್ ರಿಂಪಲ್ ಮತ್ತು ಹರ್ ಪ್ರೀತ್ ನರೂಲಾ ಆಗಿದ್ದಾರೆ. ಅನಾರ್ಕಲಿಯು ಅನುಷ್ಕಾರ ಸಪೂರ ದೇಹಕ್ಕೆ ಹೇಳಿಮಾಡಿಸಿಂತಿದ್ದು ಶಿಫಾನ್ ದುಪ್ಪಟ್ಟಾದೊಂದಿಗೆ ಕಣ್ಮನಸೆಳೆಯುವಂತಿದೆ. ಇಶಾರ್ಯಾದ ಚಿನ್ನದ ಕಿವಿಯಾಭರಣವನ್ನು ಅನುಷ್ಕಾ ಈ ದಿರಿಸಿಗೆ ತೊಟ್ಟಿದ್ದು, ಫಿಜಿ ಗೋಬ್ಲೆಟ್ನ ಪಾದರಕ್ಷೆಗಳನ್ನು ತೊಟ್ಟಿದ್ದಾರೆ.
ಅನುಷ್ಕಾ ತಮ್ಮ ಕೇಶಶೈಲಿಯನ್ನು ಬದಿಗೆ ಹೆಣೆದುಕೊಂಡಂತೆ ಮಾಡಿಕೊಂಡಿದ್ದು ಆಕೆಯ ನೋಟವನ್ನು ಇದು ಇನ್ನಷ್ಟು ಆಕರ್ಷಕವಾಗಿಸಿದೆ. ಕಣ್ಣಿಗೆ ಕಣ್ಗಪ್ಪು ತುಟಿಗೆ ಗುಲಾಬಿ ಬಣ್ಣದ ಲಿಪ್ಸ್ಟಿಕ್ ಅನ್ನು ಇವರು ಹಚ್ಚಿಕೊಂಡಿದ್ದು ಹಿತಮಿತವಾದ ಅಲಂಕಾರ ಸುಲ್ತಾನ್ ಒಡತಿಯ ರಂಗನ್ನು ಇನ್ನಷ್ಟು ಇಮ್ಮಡಿಸಿದೆ



Click it and Unblock the Notifications
