Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ದೇವಲೋಕದ ಚೆಲುವೆ ಐಶ್ವರ್ಯಗೆ ಸರಿಸಾಟಿ ಯಾರು?
ಕರಾವಳಿಯ ಕುಡಿಗಳು ಬಾಲಿವುಡ್ ಅಂಗಳದಲ್ಲಿ ತಮ್ಮ ಹೆಸರನ್ನು ಭದ್ರವಾಗಿ ಮೂಡಿಸಿಕೊಂಡಿವರು. ಭಿನ್ನ ಭಿನ್ನ ಪಾತ್ರಗಳಲ್ಲಿ ನಟಿಸಿ ತಮ್ಮ ನಟನಾ ಕೌಶಲ್ಯವನ್ನು ಮೆರೆದವರು. ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ ಹೀಗೆ ಕರಾವಳಿಯ ಈ ತಾರಾ ರತ್ನಗಳು ಬಾಲಿವುಡ್‌ನಲ್ಲಿ ಬೀಗಿದವರು. ಇಂತಹುದೇ ಒಂದು ಅನರ್ಘ್ಯ ರತ್ನ ಐಶ್ವರ್ಯಾ ರೈ. ವಿಶ್ವ ಸುಂದರಿ ಪಟ್ಟದೊಂದಿಗೆ ತಮ್ಮ ಹೆಸರನ್ನು ಇಡೀಯ ವಿಶ್ವದಲ್ಲೇ ಪಸರಿಸಿದವರು.

ಮಾಡೆಲಿಂಗ್ ಕ್ಷೇತ್ರದಿಂದ ಹಿಡಿದು ಸಿನಿ ಕ್ಷೇತ್ರದವರೆಗೂ ಐಶ್ ಸಲೀಸಾಗಿ ಪಳಗಿದವರು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹಾಲಿವುಡ್‌ನಲ್ಲೂ ತಮ್ಮ ಝಲಕ್ ತೋರಿದ್ದಾರೆ. ಬಚ್ಚನ್ ಕುಟುಂಬದ ಸೊಸೆ ಐಶ್ ಮುದ್ದಾದ ಮಗುವಿನ ತಾಯಿಯೂ ಹೌದು. ಆದರೂ ಆಕೆಯ ಅಂದಚೆಂದಕ್ಕೆ ಎಳ್ಳಷ್ಟೂ ಕುಂದು ಉಂಟಾಗಿಲ್ಲ. ಇಂದಿಗೂ ಬಾಲಿವುಡ್‌ನಲ್ಲಿ ತಮ್ಮ ನಟನೆಯಿಂದ ಸೈ ಅನ್ನಿಸಿಕೊಂಡಿದ್ದಾರೆ. ಕಪ್ಪು ಬಣ್ಣವನ್ನೇ ಹೆಚ್ಚು ಇಷ್ಟಪಡುವ ಐಶ್ ಈ ಬಾರಿ ದೀಪಾವಳಿಗೆ ತಮ್ಮ ಪತಿಯೊಂದಿಗೆ ಕೊಂಚ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲೇ ಆಯೋಜಿಸಿದ್ದ ಭರ್ಜರಿ ದೀಪಾವಳಿ ಪಾರ್ಟಿಯಲ್ಲಿ ಐಶ್ ಕಣ್ಣುಕುಕ್ಕುವ ಸೊಬಗಿನಿಂದ ಮೈಮರೆಸುವಂತಿದ್ದಾರೆ.
ಮನೀಶ್ ಮಲ್ಹೋತ್ರಾ ಗೌನ್‌ನಲ್ಲಿ ಐಶ್ ಸುರಸುಂದರಿಯಾಗಿದ್ದಾರೆ. ವಜ್ರದ ಮತ್ತು ಎಮರಾಲ್ಡ್ ಆಭರಣಗಳೊಂದಿಗೆ ಐಶ್ ಗೌನ್‌ನಲ್ಲಿ ಮಿಂಚಿದ್ದಾರೆ. ಇನ್ನು ಐಶ್‌ರೊಂದಿಗೆ ಪತಿ ಅಭಿಷೇಕ್ ಕೂಡ ಮಿಂಚಿನ ನೋಟವನ್ನು ಹರಿಸಿದ್ದಾರೆ. ಹಳದಿ ಬಣ್ಣದ ಹೊಳೆಯುವ ಕುರ್ತಾವನ್ನು ಅಭಿ ಧರಿಸಿದ್ದು ಪತ್ನಿಗೆ ಸಾಥ್ ನೀಡಿದ್ದಾರೆ. ಐಶ್ ಧರಿಸಿರುವ ದಿರಿಸು ಕೊಂಚ ತೂಕದ್ದಾಗಿದ್ದರೂ ಎಂದಿನಂತೆಯೇ ಸುಂದರಿಯಾಗಿಯೇ ಕಾಣುತ್ತಿದ್ದಾರೆ. ನಿಮ್ಮ ಅಭಿಪ್ರಾಯವೂ ಇದೇ ಆಗಿದೆಯೇ?
Read in English - Aishwarya Rai Donning An Intricate Manish Malhotra Gown At Her Diwali Party



Click it and Unblock the Notifications

