Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನೀಲಿ ಗೌನ್ನಲ್ಲಿ ಮಿರಿ-ಮಿರಿ ಮಿಂಚಿದ ಐಶ್ವರ್ಯಾ ರೈ
ಐಶ್ವರ್ಯಾ ರೈ ಬಚ್ಚನ್ ಪ್ರಸ್ತುತ ಬಾಲಿವುಡ್ನಲ್ಲಿ ತಮ್ಮ ಝಲಕ್ ಅನ್ನು ಹರಿಸುತ್ತಿರುವ ಬೆಡಗಿಯಾಗಿದ್ದಾರೆ. ಹೆಣ್ಣು ಮಗುವಿನ ತಾಯಿಯಾಗಿದ್ದರೂ ಐಶ್ ತಮ್ಮ ಸೌಂದರ್ಯವನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಹೆಸರಾಂತ ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಎಂದೆನಿಸಿದ್ದಾರೆ. ಪ್ರಸ್ತುತ ಚಿತ್ರ ಯೇ ದಿಲ್ ಹೇ ಮುಷ್ಕಿಲ್ನಲ್ಲೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಇಂದಿಗೂ ತಾವು ಬಾಲಿವುಡ್ ರಾಣಿ ಎಂಬುದನ್ನು ಖಾತ್ರಿಪಡಿಸಿದ್ದಾರೆ.

ಪ್ರಸ್ತುತ ಐಶ್ ನೋಯ್ಡಾದಲ್ಲಿ ನಡೆದ ಲಾಂಗಿನಸ್ ಸ್ಟೋರ್ ಲಾಂಚ್ನಲ್ಲಿ ಐಶ್ ಇನ್ನೂ ಮುದ್ದಾಗಿ ಕಾಣುತ್ತಿದ್ದರು. ಇದಕ್ಕಾಗಿ ಐಶ್ ಆರಿಸಿಕೊಂಡಿದ್ದ ದಿರಿಸು ನೀಲಿ ಬಣ್ಣದ ಸೊಫೆಸ್ಟಿಕೇಟೆಡ್ ಗೌನ್ ಆಗಿದ್ದು ಇದನ್ನು ವಿನ್ಯಾಸಪಡಿಸಿದವರು ಮನೀಶ್ ಮಲ್ಹೋತ್ರಾ ಆಗಿದ್ದಾರೆ. ಗೌನ್ ನಿಜಕ್ಕೂ ಐಶ್ರನ್ನು ಇನ್ನಷ್ಟು ಸುಂದರಿಯಾಗಿಸಿದ್ದು ಅವರು ಹದಿಹರೆಯದವರಂತೆ ನಳನಳಿಸುತ್ತಿದ್ದರು.
ನೆಲಕ್ಕೆ ತಾಗುತ್ತಿದ್ದ ಗೌನ್ ನಡುವಿನಲ್ಲಿ ಫ್ಲೋರಲ್ ಸೊಂಟದ ಬೆಲ್ಟ್ ಅನ್ನು ಒಳಗೊಂಡಿತ್ತು. ಗೌನ್ ಕ್ಯಾಪ್ ಸ್ಲೀಬ್ ಅನ್ನು ಹೊಂದಿದ್ದು ಐಶ್ರನ್ನು ಬೊಂಬೆಯಂತೆ ಕಂಗೊಳಿಸುವಂತೆ ಮಾಡಿದೆ. ಸರಳವಾದ ಅಲಂಕಾರದಲ್ಲಿ ಐಶ್ ನಮ್ಮ ಮನಗೆದ್ದಿದ್ದು ಆಕೆಯ ಸೌಂದರ್ಯ ಪ್ರಜ್ಞೆ ಅಚ್ಚರಿ ಮೂಡಿಸುವಂತಿದೆ.



Click it and Unblock the Notifications


