Latest Updates
-
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್
ಏನ್ ಚಂದಾನೇ ಕಾಜಲ್, ನಿನ್ನ ಉಡುಗೆ-ತೊಡುಗೆ!
ಇಂದು ಹಿಂದಿ ಚಿತ್ರ ದೋ ಲಫ್ಜೋಂ ಕೀ ಕಹಾನಿ ಬಿಡುಗಡೆಯಾಗಿದೆ. ಇದರ ತಾರಾಗಣದಲ್ಲಿ ಪ್ರಮುಖರಾಗಿರುವ ಕಾಜಲ್ ಅಗ್ರವಾಲ್ ಮತ್ತು ರಣದೀಪ್ ಹೂಡಾರವರ ಪಾಲಿಗೆ ಇಂದು ಮಹತ್ವದ ದಿನವೂ ಆಗಿದೆ. ಇದು ನಿಮಗೂ ಏಕೆ ಮಹತ್ವದ ದಿನವಾಗಬಾರದು? ಈ ಮಹತ್ವದ ದಿನದಂದು ಕಾಜಲ್ ರವರ ವಿನ್ಯಾಸದ ಬಂಢಾರದಿಂದ ಆಯ್ದ ಐದು ವಿನ್ಯಾಸಗಳಲ್ಲೊಂದನ್ನು ತೊಡುವ ಮೂಲಕ ಇನ್ನಷ್ಟು ಸುಂದರವಾಗಿಸಬಹುದು. ಬನ್ನಿ, ನಿಮ್ಮ ಆಯ್ಕೆ ಯಾವುದು ಎಂದು ಖಚಿತಪಡಿಸಿ:

ಡೆನಿಂ ಉಡುಗೆ
ವಸ್ತ್ರವಿನ್ಯಾಸಕಿ ಶಾಹೀನ್ ಮನ್ನಾನ್ ರವರು ವಿನ್ಯಾಸಗೊಳಿಸಿದ ಈ ಡೆನಿಮ್ ಹೇಗಿದೆ? ಕಾಜಲ್ ರಂತೂ ಈ ವಸ್ತ್ರದಲ್ಲಿ ಅತಿ ಸುಂದರರಾಗಿ, ಕಿರಿಯರಾಗಿ ಕಾಣಿಸುತ್ತಿದ್ದರು. ಈ ಕಡುನೀಲಿ ವಸ್ತ್ರದ ಮೇಲಿರುವ ಸ್ಕೂಟರುಗಳು, ತೊಟ್ಟ ಬಿಳಿಯ ಶೂ ನಿಮಗೆ ಏನನ್ನು ಪ್ರತಿಬಿಂಬಿಸುತ್ತಿದೆ? ನಮಗಂತೂ ತುಳುಕುವ ಯೌವನ ಕಾಣುತ್ತಿದೆ.
ಮೋನೋಕ್ರೋಂ ಜಂಪ್ ಸೂಟ್
ತಮ್ಮ ಚಿತ್ರದ ಚಿತ್ರೀಕರಣದ ಸಮಯದಲ್ಲಿ ವ್ಯಸ್ತರಾಗಿದ್ದ ಕಾಜಲ್ ನಡುವೆ ವಿಶ್ರಾಂತಿಗಾಗಿ ಈ ಜಂಪ್ ಸೂಟ್ ಧರಿಸಿದ್ದರು. ಗಾಢ ನೀಲಿ ಹಸಿರು ಮಿಶ್ರಿತ ಒಂದೇ ಬಣ್ಣದ ಈ ನೀಳ ಉಡುಗೆ ಇಡಿಯ ದೇಹವನ್ನು ಸಡಿಲವಾಗಿ ಆವರಿಸಿದ್ದರೂ ತೊಟ್ಟ ಗ್ಲಾಡಿಯೇಟರ್ ಕಂದು ಪಾದರಕ್ಷೆ ಮಾತ್ರ ಭಿನ್ನವಾಗಿತ್ತು.
ಮೈತುಂಬಾ ಪ್ರಿಂಟುಗಳೇ ಪ್ರಿಂಟುಗಳು
ಇಡಿಯ ತೋಳಿನ ಈ ಕಪ್ಪು ಉಡುಗೆಯಲ್ಲಿ ಬಿಳಿಯ ಚಿಟ್ಟೆಯಂತಹ ವಿನ್ಯಾಸ ಇಡಿಯ ವಸ್ತ್ರವನ್ನು ಆವರಿಸಿದ್ದು ಇದರೊಂದಿಗೆ ಇದೇ ವಿನ್ಯಾಸಕ್ಕೊಪ್ಪುವ ಕೈಗಡಿಯಾರ ಅವರ ಸೌಂದರ್ಯವನ್ನು ವೈಭವೀಕರಿಸಿದೆ.
ಮಿಲಿಟರಿ ಹಸಿರು ಉಡುಗೆ
ಇನ್ನೋರ್ವ ವಸ್ತ್ರ ವಿನ್ಯಾಸಕಿ ಸುಮನ್ ರವರು ವಿನ್ಯಾಸಗೊಳಿಸಿದ ಲೋಲಾ ಎಂಬ ಹಣೆಪಟ್ಟಿಯ ಒಂದು ಯಶಸ್ವೀ ಮಾದರಿಯ ಉಡುಗೆಯನ್ನು ಕಾಜಲ್ ತಮ್ಮ ಚಿತ್ರದ ಪ್ರಚಾರದಲ್ಲಿ ತೊಟ್ಟಿದ್ದಾರೆ. ಈ ವಸ್ತ್ರವೂ ಗಾಢ ಹಸಿರುಬಣ್ಣದ, ಬೇರಾವ ಬಣ್ಣದ ಮಿಶ್ರಣವಿಲ್ಲದ ಉಡುಗೆಯಾಗಿದ್ದು ಇದರೊಂದಿಗೆ ಬಿಳಿಯ ಪಾದರಕ್ಷೆ ತೊಟ್ಟು ತಮ್ಮ ಚಿತ್ರಕ್ಕೆ ಹೆಚ್ಚಿನ ಬೆಡುಗನ್ನು ನೀಡಿದ್ದಾರೆ.
ಕಾರ್ಯಕ್ರಮದ ಕಡೆಗೆ ಈ ವಿನ್ಯಾಸ ಸೂಕ್ತವೇ?
ಸಿನೇಮಾ ಮುಗಿದ ಬಳಿಕ ಅದೇ ಚಿತ್ರದ ಹಾಡೊಂದನ್ನು ಜನರು ಖಾಲಿಯಾಗುವವರೆಗೂ ಏಕೆ ಹಾಕುತ್ತಾರೆ ಗೊತ್ತೇ? ಇದರಿಂದ ಜನರ ಮನಸ್ಸಿನಲ್ಲಿ ಆ ಚಿತ್ರದ ಬಗ್ಗೆಯೇ ಯೋಚನೆಗಳು ಮೂಡುತ್ತಿರುತ್ತವೆ. ಜಾಹೀರಾತಿನಲ್ಲಿಯೂ ಈ ವಿಧಾನ ಅನುಸರಿಸಲಾಗುತ್ತದೆ. ಇದಕ್ಕೆ ಪ್ಯಾಕ್ ಷಾಟ್ ಎಂದು ಕರೆಯುತ್ತಾರೆ. ವಸ್ತ್ರ ವಿನ್ಯಾಸಕಾರರೂ ಹಾಗೇ ಕಡೆಗೆ ತೊಡುವ ಉಡುಗೆಗಳನ್ನು ಕಣ್ಣಿಗೆ ಥಟ್ಟನೆ ರಾಚುವಂತೆ ವಿನ್ಯಾಸಗೊಳಿಸುತ್ತಾರೆ. ಕಾಜಲ್‌ರ ಈ ಬಿಳಿ ಮತ್ತು ಕೆಂಪು ಅಂಚುಗಳ ಜಾಪಾನಿ ವಿನ್ಯಾಸ ಹೋಲುವ ಉಡುಗೆಯನ್ನೇ ಮೇರಾಕಿ ಪ್ರಾಜೆಕ್ಟ್ ವಿನ್ಯಾಸಗೊಳಿಸಿದೆ. ನಿಮಗೆ ಹೇಗೆನಿಸಿತು?



Click it and Unblock the Notifications


