Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆಣ್ಮಕ್ಳೇ ಅಲರ್ಟ್! ನೀವು ಜಡೆ ಹೆಣೆದುಕೊಳ್ಳಲ್ವಾ.. ನಿಮ್ಮ ಕೂದಲು ಹಾಳಾಗುತ್ತೆ! ರೀಸನ್ ಏನು ಗೊತ್ತಾ?
ಜಡೆ ಹೆಣೆದುಕೊಳ್ಳದವರಿಗೆ ಎಚ್ಚರಿಕೆ ಇದು. ನಿಮ್ಮ ಕೂದಲು ಶೀಘ್ರದಲ್ಲೇ ಹಾಳಾಗಬಹುದು. ಆದರೆ, ಜಡೆ ಹೆಣೆದುಕೊಳ್ಳುವುದು (Braiding Hair) ನಿಮ್ಮ ಕೂದಲಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಹೌದು, ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಸಾಮಾನ್ಯವಾಗಿ ತಮ್ಮ ಕೂದಲನ್ನು ಸಡಿಲವಾಗಿ ಬಿಟ್ಟು ತಿರುಗಾಡುತ್ತಾರೆ. ಫ್ಯಾಷನ್ ಹೆಸರಿನಲ್ಲಿ ವಿವಿಧ ರೀತಿಯ ಕೇಶ ವಿನ್ಯಾಸಗಳನ್ನು ಅನುಸರಿಸುತ್ತಾರೆ. ಆದರೆ, ಕೂದಲು ಹೆಣೆದುಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಬಹುತೇಕ ಜನರು ಕೂದಲು ಹೆಣೆದುಕೊಳ್ಳುವುದು ಕೇವಲ ಅಲಂಕಾರಕ್ಕಾಗಿ ಎಂದು ಭಾವಿಸುತ್ತಾರೆ. ಹಾಗಿದ್ರೆ, ಕೂದಲು ಹೆಣೆದುಕೊಳ್ಳುವುದರ ಮಹತ್ವ ಏನು? ತಿಳಿಯೋಣ ಬನ್ನಿ.
ಕೂದಲನ್ನು ಚೆಂದವಾಗಿ ಜಡೆ ಹೆಣೆದುಕೊಳ್ಳುವುದು ಕೇವಲ ಅಲಂಕಾರಕ್ಕಾಗಿ ಅಲ್ಲ. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಕೂದಲು ಬಿಟ್ಟುಕೊಂಡಿದ್ದರೆ ಹಿರಿಯರು ಬೈಯ್ಯುವುದು ಸಾಮಾನ್ಯ. ಲಕ್ಷಣವಾಗಿ ಜಡೆ ಹೆಣೆದುಕೋ ಎಂದು ಬುದ್ದಿ ಹೇಳುತ್ತಾರೆ. ಆದರೆ, ಇದರ ಹಿಂದೆ ತಿಳಿಯದೇ ಇರದ ಲಾಭಗಳಿವೆ. ಜಡೆ ಹೆಣೆದುಕೊಳ್ಳುವುದರಿಂದ ಅಥವಾ ಹಾಕುವುದರಿಂದ ದೇಹ ಆರೋಗ್ಯವಾಗಿರುತ್ತದೆ ಎಂದರೆ ನೀವು ನಂಬಲೇಬೇಕು. ಜಡೆ ಹೆಣೆದುಕೊಳ್ಳುವುರಿಂದ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳಿವೆ (Hair Braiding Benefits) ಎಂಬುದನ್ನು ನೀವು ತಿಳಿಯಲೇಬೇಕು.

ಜಡೆ ಅಥವಾ ಕೂದಲು ಹೆಣೆದುಕೊಳ್ಳುವುದರ ಮಹತ್ವ
ಒಂದು ಕಾಲದಲ್ಲಿ ಹುಡುಗಿಯರು ಅಂದವಾಗಿ ಜಡೆ ಹೆಣೆದುಕೊಳ್ಳುತ್ತಿದ್ದರು. ಜೊತೆಗೆ ಹತ್ತು ಮೊಳ ಮಲ್ಲಿಗೆಯನ್ನು ಮುಡಿದು, ಎಷ್ಟೊಂದು ಸಾಂಪ್ರದಾಯಿಕವಾಗಿ ಇರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಈ ದೃಶ್ಯ ದೇವಾಲಯಗಳಲ್ಲಿ, ಹಳ್ಳಿಗಳಲ್ಲಿ ಮತ್ತು ಮದುವೆಗಳಲ್ಲಿಯೂ ಕಾಣಸಿಗುವುದಿಲ್ಲ. ಯಾಕೆಂದರೆ, ಇದು ಬದಲಾದ ಕಾಲ. ಇಂದಿನ ಯುವತಿಯರು ಫ್ಯಾಷನ್ಗಾಗಿ ಕೂದಲನ್ನು ಬಿಟ್ಟುಕೊಂಡು ತಿರುಗಾಡುತ್ತಾರೆ. ಆದರೆ, ಕೂದಲು ಹೆಣೆದುಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ. ಕೇವಲ ಅಲಂಕಾರ ಮಾತ್ರವಲ್ಲ, ಪ್ರತಿದಿನ ಕೂದಲು ಹೆಣೆದುಕೊಳ್ಳುವುದರಿಂದ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಸ್ವತಃ ಆರೋಗ್ಯ ತಜ್ಞರು ಹೇಳಿದ್ದಾರೆ.
ಕೂದಲು ಹೆಣೆದುಕೊಳ್ಳುವುದರಿಂದ ಏನು ಪ್ರಯೋಜನ?
ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ
ಜಡೆ ಅಥವಾ ಕೂದಲು ಹೆಣೆದುಕೊಳ್ಳುವುದರಿಂದ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ. ಇದರ ಜೊತೆಗೆ ದೇಹವು ಆರೋಗ್ಯವಾಗಿರುತ್ತದೆ. ಪ್ರತಿದಿನ ಜಡೆ ಹಾಕುವುದರಿಂದ ಕೂದಲು ತನ್ನ ನೈಸರ್ಗಿಕ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ. ಈ ರೀತಿ ಜಡೆ ಹಾಕುವುದು ವಾತಾವರಣದಲ್ಲಿನ ಬದಲಾವಣೆಗಳಿಂದ ಕೂದಲನ್ನು ರಕ್ಷಿಸುತ್ತದೆ.
ನೆತ್ತಿಯ ಮೇಲಿನ ಶಿಲೀಂಧ್ರ ಸಮಸ್ಯೆಗಳು ಮಾಯ
ಆರೋಗ್ಯಕರವಾದ ಕೂದಲಿಗೆ, ಆರೋಗ್ಯಕರವಾದ ನೆತ್ತಿ ಇರುವುದು ಬಹಳ ಮುಖ್ಯ. ತಲೆ ಚರ್ಮವು ಒಣಗದಂತೆ ಇರಲು, ಪ್ರತಿದಿನ ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು. ಇದು ನೆತ್ತಿಯ ಮೇಲಿನ ಶಿಲೀಂಧ್ರ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಇದರಿಂದ ತುರಿಕೆ, ತಲೆಹೊಟ್ಟು ಸಮಸ್ಯೆ ಇರುವುದಿಲ್ಲ.
ಕೂದಲು ಉದುರುವುದನ್ನು ತಡೆಯುತ್ತದೆ
ಪ್ರತಿನಿತ್ಯ ವಾಯು ಮಾಲಿನ್ಯ, ಸೂರ್ಯನ ಕಿರಣಗಳು ಮತ್ತು ಅತಿಯಾದ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಕೂದಲು ಒಡೆಯುತ್ತದೆ ಮತ್ತು ಸೀಳು ಬಿಡುತ್ತದೆ. ಇದರಿಂದ ಕೂದಲು ಉದುರಲು ಪ್ರಾರಂಭವಾಗುತ್ತದೆ. ಪ್ರತಿದಿನ ಕೂದಲನ್ನು ವಿವಿಧ ರೀತಿಗಳಲ್ಲಿ ಸ್ಟೈಲಿಂಗ್ ಮಾಡುವುದರಿಂದ ಕೂದಲಿನ ತುದಿಗಳು ಹಾನಿಗೊಳಗಾಗುತ್ತವೆ. ಆದ್ದರಿಂದ ಕೂದಲನ್ನು ಚೆನ್ನಾಗಿ ಬಾಚಿ ಜಡೆ ಹಾಕುವುದು ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಇದು ಕೂದಲಿನ ಸೀಳುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.
ತುಂಬಾ ಬಿಗಿಯಾಗಿ ಜಡೆ ಹಾಕಬಾರದು
ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜಡೆ ಹಾಕುವುದು ಆರೋಗ್ಯಕರ ಕೂದಲನ್ನು ನಿರ್ವಹಿಸಲು ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಕೂದಲನ್ನು ಬಾಚಿ ಜಡೆ ಹಾಕುವುದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಆದರೆ, ತುಂಬಾ ಬಿಗಿಯಾಗಿ ಜಡೆ ಹಾಕಬಾರದು. ಸಡಿಲವಾಗಿ ಆರಾಮದಾಯಕವಾಗಿ ಹಾಕಿಕೊಳ್ಳುವುದು ಒಳ್ಳೆಯದು.
ಇನ್ನು ಕೇಶ ವಿನ್ಯಾಸವು ಕೂದಲ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕೂದಲು ಉದುರುವುದರಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ. ಕೂದಲು ಸಿಕ್ಕಾಗುವಂತೆ ಮಾಡುವ ಕೇಶ ವಿನ್ಯಾಸವು ಕೂದಲನ್ನು ಹಾಳು ಮಾಡುತ್ತವೆ. ಹೀಗಾಗಿ, ಸಾಧ್ಯವಾದಷ್ಟು ಜಡೆ ಹೆಣೆದುಕೊಳ್ಳುವುದು ಕೂದಲ ಆರೋಗ್ಯವನ್ನು ಕಾಪಾಡುತ್ತವೆ. ಇದರೊಂದಿಗೆ ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.



Click it and Unblock the Notifications











