Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಹೋಳಿಯಾಟದ ಮುನ್ನ ಹಾಗೂ ನಂತರ ಈ ಟಿಪ್ಸ್ ಅನುಸರಿಸಿದರೆ ಬಣ್ಣದಿಂದ ತ್ವಚೆ, ಕೂದಲಿಗೆ ಹಾನಿಯಾಗಲ್ಲ
ಬಣ್ಣಗಳ ಹಬ್ಬ ಹೋಳಿ, ಹೋಳಿ ಹಬ್ಬದಂದು ಬಣ್ಣಗಳನ್ನು ಎರಚುವ ಮೂಲಕ ಹೋಳಿ ಹಬ್ಬದ ಶುಭಾಶಯ ಕೋರುತ್ತೇವೆ, ಹೋಳಿಯ ಬಣ್ಣದಂತೆ ನಿಮ್ಮ ಬದುಕು ಸುಂದರವಾಗಿರಲಿ, ಸಂತೋಷ, ಸಮೃದ್ಧಿ ತುಂಬಿ ತುಳುಕುವಂತೆ ಆಗಲಿ ಎಂಬುವುದೇ ನಮ್ಮ ಆರೈಕೆ.
ಹೋಳಿ ಹಬ್ಬದಂದು ನಾವು ಬಣ್ಣಗಳನ್ನು ಎರಚಿ ಆಡುವಾಗ ತ್ವಚೆ ಬಗ್ಗೆ ಜಾಗ್ರತೆವಹಿಸಬೇಕು, ಅದರಲ್ಲೂ ತುಂಬಾ ಸೆನ್ಸಿಟಿವ್ ತ್ವಚೆಯವರು ಈ ಹೋಳಿ ಹಬ್ಬದಂದು ತುಂಬಾನೇ ಜಾಗ್ರತೆವಹಿಸಬೇಕು. ನೀವು ಸಾವಯವ ಬಣ್ಣದಿಂದ ಆಡಿದರೂ ಬೇರೆಯವರು ನಿಮ್ಮ ಮೇಲೆ ಎರಚುವ ಬಣ್ಣ ಯಾವ ಗುಣಮಟ್ಟದ್ದು ಹೇಳಲು ಸಾಧ್ಯವಿಲ್ಲ, ಆದ್ದರಿಂದ ತ್ವಚೆಯ ಬಗ್ಗೆ ಜಾಗ್ರತೆವಹಿಸಬೇಕು. ಇನ್ನು ಹೋಳಿ ಬಣ್ಣ ತೊಳೆದಾಗ ಹೋಗದಿದ್ದರೆ ಮಾರನೇಯ ದಿನ ಆಫೀಸ್ ಅಥವಾ ಕಾಲೇಜಿಗೆ ಹೋಗುವಾಗ ಬಣ್ಣ ಹೋಗದಿದ್ದರೆ ಒಂಥರಾ ಮುಜುಗರವಾಗುವುದು.

ಹೋಳಿಗೆ ಮೊದಲು ಹಾಗೂ ಹೋಳಿಯ ನಂತರ ತ್ವಚೆ ಆರೈಕೆ ಹೀಗೆ ಮಾಡಿ, ಯಾವ ಅಲರ್ಜಿ ಉಂಟಾಗುವುದಿಲ್ಲ, ಅಲ್ಲದೆ ನೀವು ಹೋಳಿಗೆ ಮೊದಲು ತ್ವಚೆಯನ್ನು ಈ ರೀತಿ ಆರೈಕೆ ಮಾಡಿದರೆ ಬಣ್ಣ ತೊಳೆಯಲು ಕೂಡ ಸುಲಭವಾಗುವುದು ನೋಡಿ:
ದೇಹಕ್ಕೆ ಎಣ್ಣೆ ಮಸಾಜ್ ಮಾಡಿ
ಹೋಳಿ ಆಡುವ ಮುನ್ನ ದೇಹಕ್ಕೆ ಎಣ್ಣೆ ಮಸಾಜ್ ಮಾಡಿ, ಇದರಿಂದ ತ್ವಚೆ ಬಣ್ಣವನ್ನು ಹೀರಿಕೊಳ್ಳುವುದು ಕಡಿಮೆಯಾಗುವುದು, ಅಲ್ಲದೆ ಈ ರೀತಿ ಎಣ್ಣೆ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ಬಣ್ಣ ಕೂಡ ಬೇಗ ತೊಳಿಯಬಹುದು, ಅದರೆ ಎಣ್ಣೆ ಹಚ್ಚುವುದು ಒಳ್ಳೆಯದು.
ಕೂದಲಿಗೂ ಎಣ್ಣೆ ಹಚ್ಚಿ
ನೀವು ಹೋಳಿಯಾಡುವಾಗ ಕೂದಲಿಗೆ ಎಣ್ಣೆ ಹಾಕಿ ಸ್ಕಾರ್ಪ್ ಕಟ್ಟುವುದು ಒಳ್ಳೆಯದು, ಕೆಲವೊಂದು ರಾಸಾಯನಿಕಗಳು ಕೂದಲನ್ನು ಒರಟಾಗಿಸುತ್ತದೆ, ಅದೇ ಕೂದಲಿಗೆ ಎಣ್ಣೆ ಹಚ್ಚಿದರೆ ಕೂದಲಿಗೆ ರಾಸಾಯನಿಕ ಬಣ್ಣಗಳು ಅಂಟಿಕೊಳ್ಳುವುದಿಲ್ಲ, ಹೋಳಿ ಆಟದ ಬಳಿಕ ಶ್ಯಾಂಪೂ ಹಚ್ಚಿ ತೊಳೆದರೆ ಸಾಕು ಕೂದಲು ಚೆನ್ನಾಗಿ ಇರುತ್ತದೆ.
ಸನ್‌ಸ್ಕ್ರೀನ್ ಬಳಸಿ
ನೀವು ಹೋಳಿಯಾಡಲು ಹೋಗುವ ಮುನ್ನ ಸನ್‌ಸ್ಕ್ರೀನ್ ಬಳಸಿ. SPF 30 ಇರುವ ಸನ್‌ಸ್ಕ್ರೀನ್ ಬಳಸಿ, ಇನ್ನು ಆಲ್ಕೋಹಾಲ್ ಫ್ರೀ ಸನ್‌ಸ್ಕ್ರೀನ್ ಬಳಸಬೇಕು.
ತುಂಬು ತೋಳಿನ ಸಡಿಲ ಬಟ್ಟೆ ಧರಿಸಿ
ಹೋಳಿಯಾಡಲು ತುಂಬು ತೋಳಿನ ಸಡಿಲ ಬಟ್ಟೆ ಧರಿಸಿ. ಇದರಿಂದ ಮೈಗೆ ಬಣ್ಣ ಮೆತ್ತಿಕೊಳ್ಳುವುದು ಕಡಿಮೆಯಾಗುವುದು. ಮೈ ಮೇಲೆ ನೀರು ಬಿದ್ದಾಗ ಬಟ್ಟೆ ಬೇಗನೆ ಒಣಗುವಂತೆ ಇರಲಿ, ಇಲ್ಲದಿದ್ದರೆ ಬಣ್ಣವೆಲ್ಲಾ ಮೈಗೆ ಅಂಟಿಕೊಳ್ಳುವುದು.
ನೀರು ಕುಡಿಯಿರಿ
ಈ ದಿನ ಬಿಸಿಲಿನಲ್ಲಿ ಆಟ ಆಡುತ್ತೀರಿ, ಸಾಕಷ್ಟು ನೀರು ಕುಡಿಯಿರಿ, ಜ್ಯೂಸ್, ಕಲ್ಲಂಗಡಿ ಹಣ್ಣು ಇವುಗಳನ್ನು ಸೇವಿಸಿ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತುಂಬಾನೇ ಸುಸ್ತುಯಾಗುವುದು.
ಹೋಳಿ ಬಣ್ಣ ತೆಗೆಯುವುದು ಹೇಗೆ?
ನೀವು ಹೋಳಿಯಾಟ ಆಡಿದ ತಕ್ಷಣವೇ ಸ್ನಾನ ಮಾಡಿದರೆ ಒಳ್ಳೆಯದು. ತುಂಬಾ ಹೊತ್ತು ಬಣ್ಣ ಮೆತ್ತಿದ ಬಟ್ಟೆಯಲ್ಲಿ ಇದ್ದರೆ ಚರ್ಮಕ್ಕೆ ಅಂಟಿಕೊಳ್ಳುವುದು. ಆದ್ದರಿಂದ ಬಂದ ತಕ್ಷಣ ನೀರು ಹಾಕಿ, ನಂತರ ಹಳೆಯ ಬಟ್ಟೆಯಿಂದ ಮೈ ಒರೆಸಿ, ಮೈಗೆ ಎಣ್ಣೆ ಹಚ್ಚಿ, ಅದಾಗಿ 10 ನಿಮಿಷ ಬಿಟ್ಟು ಸೋಪು ಹಚ್ಚಿ ಮೈ ತೊಳೆಯಿರಿ, ಹೀಗೆ ಮಾಡಿದರೆ ಬಣ್ಣ ಸಂಪೂರ್ಣ ತೊಳೆದು ಹೋಗುವುದು.
ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ
ಚೆನ್ನಾಗಿ ಎಣ್ಣೆ ಹಚ್ಚಿ ಶ್ಯಾಂಪೂ ಹಚ್ಚಿ ತೊಳೆದ ಬಳಿಕ ಕಂಡೀಷನರ್ ಹಾಕಿ. ಹೋಳಿ ಆಟವಾಡಿದ ಒಂದೆರಡು ದಿನದಲ್ಲಿಯೇ ಹೇರ್ ಮಾಸ್ಕ್ ಬಳಸಿ.
ಸ್ನಾನದ ನಂತರ ಮೈಗೆ ಮಾಯಿಶ್ಚರೈಸರ್ ಹಚ್ಚಿ
ಈ ರೀತಿ ಮಾಡುವುದರಿಂದ ಮೈ ತ್ವಚೆ ಚೆನ್ನಾಗಿರುತ್ತದೆ, ರಾಸಾಯನಿಕ ತಾಗಿ ತ್ವಚೆ ಡ್ರೈಯಾಗುವುದನ್ನು ತಡೆಗಟ್ಟಬಹುದು.



Click it and Unblock the Notifications
