Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮುಖಕ್ಕೆ ಫೇಶಿಯಲ್‌ಗಿಂತಲೂ ಅಧಿಕ ಹೊಳಪು ನೀಡುವ 6 ಯೋಗಾಸನಗಳಿವು
ನಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಯೋಗದಲ್ಲಿ. ದೇಹ ಫಿಟ್ ಆಗಿರಬೇಕೆ? ಯೋಗ ಮಾಡಿದರೆ ಸಾಕು. ಮಾನಸಿಕ ಒತ್ತಡ ಕಡಿಮೆಯಾಗಬೇಕೆ? ಅದಕ್ಕೂ ಪರಿಹಾರ ಯೋಗದಲ್ಲಿದೆ. ಮುಖದ ಹೊಳಪು ಹೆಚ್ಚಬೇಕೆ? ಅದೂ ಕೂಡ ಯೋಗದಿಂದ ಸಾಧ್ಯ. ಆದ್ದರಿಂದಲೇ ಯೋಗಕ್ಕೆ ಪರ್ಯಾಯವಾದ ಮತ್ತೊಂದು ವ್ಯಾಯಾಮವಿಲ್ಲ.

ದಿನನಿತ್ಯ ಯೋಗ ಅಭ್ಯಾಸ ಮಾಡುವವರನ್ನು ಗಮನಿಸಿ ನೋಡಿ ಅವರ ಮುಖದಲ್ಲಿ ಒಂದು ಸ್ಪೆಷಲ್ ಕಳೆ ಇರುತ್ತದೆ, ಅಲ್ಲದೆ ದಿನಾ ಯೋಗ ಮಾಡುವವರು ವಯಸ್ಸು 50 ದಾಟಿದರೂ 30 ಹರೆಯದವರಂತೆ ಕಾಣುತ್ತಾರೆ, ಅದುವೇ ಯೋಗದ ಸ್ಪೆಷಾಲಿಟಿ.
ಇನ್ನೂ ಯೋಗದಲ್ಲಿ ಎಲ್ಲಾ ಬಗೆಯ ಯೋಗಾಸನಗಳು ತ್ವಚೆಗೆ ಒಳ್ಳೆಯದು, ನೀವು ಫೇಶಿಯಲ್ ಮಾಡಿಸಿದರೆ ಸಿಗುತ್ತೆ ಅಲ್ವಾ? ಅಂಥ ಹೊಳಪಿನ ತ್ವಚೆ ಬೇಕೆಂದರೆ ಈ ಬಗೆಯ ಯೋಗಾಸನಗಳನ್ನು ಅಭ್ಯಾಸ ಮಾಡಿ ನಿಮ್ಮ ತ್ವಚೆಯ ಕಾಂತಿಯೇ ಬದಲಾಗುವುದು.
1. ಧನುರ್ಸಾನ
ಧನುರ್ಸಾನದಲ್ಲಿ ಮುಖದ ಕಾಂತಿ ಹೆಚ್ಚಾಗುವುದು. ಈ ಭಂಗಿಯನ್ನು ದಿನನಿತ್ಯ ಅಭಾಸ ಮಾಡುವುದರಿಂದ ತ್ವಚೆ ಕಾಂತಿ ತುಂಬಾನೇ ಹೆಚ್ಚಾಗುವುದು. ಇದು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುತ್ತದೆ ಅಂದರೆ ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಅಲ್ಲದೆ ಈ ಆಸನ ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಮಹಿಳೆಯರ ಸಂತಾನೋತ್ಪತ್ತಿ ಅಂಗಾಂಗಗಳಿಗೂ ತುಂಬಾನೇ ಒಳ್ಳೆಯದು. ಅಲ್ಲದೆ ಚಯಪಚಯ ಕ್ರಿಯೆ ಉತ್ತಮವಾಗಿಸಿ ಹೊಟ್ಟೆಯ ಆರೋಗ್ಯ ವೃದ್ಧಿಸುತ್ತದೆ. ನೀವು ಧನುರ್ಸಾನವನ್ನು ದಿನಾ ಒಂದು ನಿಮಿಷ ಅಭ್ಯಾಸ ಮಾಡಿ.
2. ಪಶ್ಚಿಮೋತ್ತಾಸನ
ಈ ಭಂಗಿ ಕೂಡ ತ್ವಚೆ ಕಾಂತಿ ಹೆಚ್ಚಿಸುವಲ್ಲಿ ತುಂಬಾನೇ ಪರಿಣಾಮಕಾರಿ. ಇದು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಮಾನಸಿಕ ಒತ್ತಡವಿದ್ದಾಗ ಮೊಡವೆ, ಮುಖದಲ್ಲಿ ನೆರಿಗೆ ಬೀಳುವುದು ಈ ಬಗೆಯ ಸಮಸ್ಯೆ ಉಂಟಾಗುವುದು. ಈ ಪಶ್ಚಿಮೋತ್ತಾಸನ ಅಭ್ಯಾಸ ಮಾಡಿದಾಗ ಮನಸ್ಸು ಶಾಂತವಾಗುವುದು. ಇದು ಮಾನಸಿಕ ಒತ್ತಡ ಕಡಿಮೆ ಮಾಡುವುದು ಮಾತ್ರವಲ್ಲ ಇದು ರಕ್ತವನ್ನು ಶುದ್ಧೀಕರಿಸಲು ಸಹಕಾರಿ. ಅಲ್ಲದೆ ಮುಖದಲ್ಲಿ ಕಪ್ಪು ಕಲೆ ಬೀಳುವುದು, ಡಾರ್ಕ್ ಹೆಡ್ಸ್ ಈ ಬಗೆಯ ಸಮಸ್ಯೆ ತಡೆಗಟ್ಟಲು ಕೂಡ ತುಂಬಾನೇ ಸಹಕಾರಿ.
3. ಅದೋಮುಖ ಶ್ವಾನಾಸನ
ಈ ಆಸನ ಕೂಡ ಇಡೀ ದೇಹಕ್ಕೆ ಹಾಗೂ ತ್ವಚೆಗೆ ತುಂಬಾನೇ ಒಳ್ಳೆಯದು, ಇದು ದೇಹದಲ್ಲಿ ಉತ್ತಮ ರಕ್ತ ಸಂಚಾರಕ್ಕೆ ಸಹಕಾರಿ. ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿದ್ದರೆ ಅದರ ಪ್ರಭಾವ ತ್ವಚೆಯಲ್ಲಿ ಕಾಣುವುದು. ತ್ವಚೆ ಕಾಂತಿ ಕೂಡ ಉತ್ತಮವಾಗಿರುತ್ತದೆ.
4. ಮತ್ಸ್ಯಾಸನ
ಮತ್ಸ್ಯಾಸನ ಕೂಡ ಆರೋಗ್ಯಕ್ಕೆ ಹಾಗೂ ತ್ವಚೆ ಸೌಂದರ್ಯ ವೃದ್ಧಿಗೆ ತುಂಬಾ ಒಳ್ಳೆಯದು. ಮತ್ಸ್ಯಾಸನ ನಿಮ್ಮ ಥೈರಾಯ್ಡ್ ಗ್ರಂಥಿ ಚೆನ್ನಾಗಿ ಕಾರ್ಯನಿರ್ವಹಿಸಲು ಕೂಡ ತುಂಬಾನೇ ಸಹಕಾರಿ. ಮತ್ಸ್ಯಾಸನ ರಕ್ತಸಂಚಾರ ಉತ್ತಮಪಡಿಸುವುದರಿಂದ ಮುಖದ ಕಾಂತಿ ಹೆಚ್ಚಾಗುವುದು.
5. ಸರ್ವಾಂಗಾಸನ
ಸರ್ವಾಂಗಾಸನ ಕೂಡ ಶರೀರದಲ್ಲಿ ರಕ್ತ ಸಂಚಾರ ಉತ್ತಮವಾಗಿಸುವುದರಿಂದ ತ್ವಚೆ ಕಾಂತಿಯೂ ಹೆಚ್ಚಾಗುವುದು, ಇದರಿಂದ ತ್ವಚೆಯಲ್ಲಿ ತುಂಬಾನೇ ಹೆಚ್ಚಾಗುವುದು. ಆದರೆ ಈ ಆಸನ ಮಾಡುವ ಮುನ್ನ ಅಭ್ಯಾಸ ಮಾಡಬೇಕು. ನೀವು ಪರಿಣಿತರ ಬಳಿ ಅಭ್ಯಾಸ ಮಾಡಿದ ಬಳಿಕವಷ್ಟೇ ಈ ಆಸನ ಮಾಡಬೇಕು.
6. ಶವಾಸನ
ಇದೊಂದು ಸರಳವಾದ ಆಸನವಾದರೂ ತುಂಬಾ ಪವರ್‌ಫುಲ್ ಆಸನ. ನೀವು ಮೇಲೆ ಹೇಳಿದ ಪ್ರತಿಯೊಂದು ಆಸನ ಮಾಡಿದ ಮೇಲೂ ಶವಾಸನದಲ್ಲಿ ವಿಶ್ರಾಂತಿ ಪಡೆಯಿರಿ, ಇದರಿಂದ ಮಾನಸಿಕ ಒತ್ತಡ ಸಂಪೂರ್ಣ ಕಡಿಮೆಯಾಗುವುದು ಮುಖದ ಕಾಂತಿ ಹೆಚ್ಚಾಗುವುದು.
ಧ್ಯಾನ ಮಾಡಿ
ಈ ಆಸನಗಳನ್ನು ಮಾಡಿದ ಬಳಿಕ 10-15 ನಿಮಿಷ ಪ್ರಾಣಯಾಮ, ಧ್ಯಾನ ಮಾಡಿ. ಈ ಉಸಿರಾಟದ ವ್ಯಾಯಾಮ ನಿಮ್ಮೆಲ್ಲಾ ಒತ್ತಡವನ್ನು ಹೊರಹಾಕುವುದರಿಂದ ತ್ವಚೆ ಕಾಂತಿಗೆ ತುಂಬಾನೇ ಒಳ್ಳೆಯದು



Click it and Unblock the Notifications
