Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
Year Ender 2024: ಈ ವರ್ಷ ಜನರ ಗಮನ ಸೆಳೆದಿರುವ ವೈರಲ್ ಬ್ಯೂಟಿ ಟ್ರೆಂಡ್‌ಗಳು!
2024ನೇ ವರ್ಷ ಮುಗಿಯುತ್ತಾ ಬಂದಿದೆ. ಹಾಗೆ 2025ನ್ನು ಬರಮಾಡಿಕೊಳ್ಳಲಿದ್ದೇವೆ. ಇನ್ನು 2024ನೇ ವರ್ಷದಲ್ಲಿ ಏನೆಲ್ಲಾ ನಡೆದಿದೆ ಎಂಬುದನ್ನು ಒಂದು ಸುತ್ತು ನೆನಪು ಮಾಡಿಕೊಳ್ಳುವ ಸಮಯವಿದು. ಅದರಲ್ಲೂ 2024ರಲ್ಲಿ ಬ್ಯೂಟಿ ಕ್ಷೇತ್ರದಲ್ಲಿ ನಡೆದಿರುವ ಅತೀ ದೊಡ್ಡ ವಿಚಾರಗಳನ್ನು ನಾವಿಂದು ಮತ್ತೆ ನೆನಪು ಮಾಡಿಕೊಳ್ಳೋಣ.
ಸೌಂದರ್ಯ ಕ್ಷೇತ್ರ ಯಾವಾಗಲು ಚುರುಕಿನ ಬೆಳವಣಿಗೆ ಹೊಂದಿರುತ್ತೆ. ಅಲ್ಲಿ ಹೊಸ ಹೊಸ ಟ್ರೆಂಡ್, ಹೊಸ ವಿಚಾರಗಳು ಬಹುಬೇಗ ಹುಟ್ಟಿಕೊಳ್ಳುತ್ತವೆ. ಹಾಗೆ ಹಲವು ರೀತಿಯ ಬದಲಾವಣೆಗಳ ನೋಡಬಹುದು. ಹಾಗಾದ್ರೆ 2024ರಲ್ಲಿ ಜನರ ಗಮನ ಸೆಳೆದಿರುವ ವೈರಲ್ ಬ್ಯೂಟಿ ಟ್ರೆಂಡ್‌ಗಳು ಯಾವುದು? ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದ ಬ್ಯೂಟಿ ಟ್ರೆಂಡ್‌ಗಳು ಯಾವುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪುರುಷರಲ್ಲೂ ಕಾಸ್ಮೆಟಿಕ್ ಬಳಕೆ
ಈಗ ಪುರುಷರು ಸಾಂಪ್ರದಾಯಿಕ ಸೌಂದರ್ಯ ವರ್ಧಕಗಳ ಬಳಕೆಯ ಬದಲಾಗಿದೆ. ಹೊಸ ಹೊಸ ವಿಧಾನಗಳ ಮೂಲಕ ಕಾಸ್ಮೆಟಿಕ್ ಬಳಕೆ ಹಚ್ಚಾಗಿರುವುದು ನೋಡಬಹುದು. ಅದರಲ್ಲೂ ಪುರುಷರು ತಮ್ಮ ಕೂದಲಿನ ಅಂದ ಹೆಚ್ಚಿಸುವ ಸಲುವಾಗಿ ಕೂದಲು ಕಸಿ ಮತ್ತು ಪ್ಲೇಟ್‌ಲೆಟ್ ಭರಿತ ಪ್ಲಾಸ್ಮಾ (ಪಿಆರ್‌ಪಿ) ಚಿಕಿತ್ಸೆಯಂತಹ ಸುಧಾರಿತ ಸೌಂದರ್ಯವರ್ಧಕ ವಿಧಾನಗಳ ಬಳಕೆಯತ್ತ ಅವರು ಗಮನ ಹರಿಸಿರುವುದು ನೋಡಬಹುದು.
ಲಿಕ್ವಿಡ್ ಫೇಸ್‌ಲಿಫ್ಟ್‌ಗಳ ಬಳಕೆ
ಶಸ್ತ್ರ ಚಿಕಿತ್ಸಾ ವಿಧಾನ ಬಳಸದೆ ಫೇಸ್‌ಲಿಫ್ಟ್ ಮಾಡುವ ವಿಧಾನಗಳು ಹೆಚ್ಚಾಗಿದೆ. ಮೊದಲು ಸಾಂಪ್ರದಾಯಿಕ ವಿಧಾನದ ಕಡೆಗೆ ಹೆಚ್ಚು ಒಲವಿತ್ತು. ಅದರಲ್ಲೂ ನಟ, ನಟಿಯರು, ಉದ್ಯಮಿಗಳು, ಖ್ಯಾತ ವ್ಯಕ್ತಿಗಳು ಈ ರೀತಿಯ ಲಿಕ್ವಿಡ್ ಫೇಸ್‌ಲಿಫ್ಟ್ ಕಡೆಗೆ ಒಳವು ತೋರಿಸಿದ್ದಾರೆ. ಲಿಕ್ವಿಡ್ ಫೇಸ್‌ಲಿಫ್ಟ್ ಎನ್ನುವುದು ಶಸ್ತ್ರಚಿಕಿತ್ಸೆಯಲ್ಲದ ಕಾಸ್ಮೆಟಿಕ್ ವಿಧಾನವಾಗಿದ್ದು ಅದು ಮುಖದ ಪೂರ್ಣತೆಯನ್ನು ಪುನಃಸ್ಥಾಪಿಸಲು ಮತ್ತು ಹೆಚ್ಚು ಕಾಂತಿಯುತವಾಗಿ ಕಾಣಿಸಿಕೊಳ್ಳಲು ನೀಡುವ ಲಸಿಕೆಯಾಗಿದೆ.
ನ್ಯಾಚುರಲ್ ಬ್ಯೂಟಿಗೆ ಆದ್ಯತೆ
ಈ ವರ್ಷ ಸೌಂದರ್ಯ ವಲಯವು ನೈಸರ್ಗಿಕವಾಗಿ ಸುಂದರ ತ್ವಚೆ ಪಡೆಯುವುದು, ಅದರ ಟ್ರಿಕ್ಸ್‌ಗಳತ್ತ ಹೆಚ್ಚು ಒಲವು ಹೊಂದಿರುವುದನ್ನು ನೋಡಬಹುದು, ಹೀಗಾಗಿ ಹಲವು ರೀತಿಯ ನ್ಯಾಚುರಲ್ ಬ್ಯೂಟಿ ಟ್ರೆಂಡ್‌ಗಳು ಈ ವರ್ಷ ವೈರಲ್ ಆಗಿದ್ದವು. ಅದರಲ್ಲೂ ತುಟಿಗಳ ಗಾತ್ರ ಹೆಚ್ಚಿಸುವುದು, ಗಲ್ಲದ ಕೊಬ್ಬು ಕರಗಿಸುವುದು, ಕುತ್ತಿಗೆಯ ಕಲೆ ಹಾಗು ಶೇಖರಣೆಯಾದ ಕೊಬ್ಬನ್ನು ಕರಗಿಸುವಂತಹ ನೈಸರ್ಗಿಕ ವಿಧಾನಗಳನ್ನು ಜನರು ಹೆಚ್ಚಾಗಿ ಅನುಸರಿಸಿದ್ದಾರೆ ಎಂದು ವರದಿಯಾಗಿದೆ.
ಹೈ-ಇಂಟೆನ್ಸಿಟಿ ಫೋಕಸ್ಡ್ ಅಲ್ಟ್ರಾಸೌಂಡ್
ಈ ವರ್ಷ ಸೌಂದರ್ಯಕ್ಕಾಗಿ ಜನರು ಹೈ-ಇಂಟೆನ್ಸಿಟಿ ಫೋಕಸ್ಡ್ ಅಲ್ಟ್ರಾಸೌಂಡ್ ವಿಧಾನದ ಮೊರೆ ಹೋಗಿದ್ದಾರೆ. ದುಂಡುಮುಖದ ಅಥವಾ ದುಂಡಗಿನ ಮುಖಗಳನ್ನು ಹೊಂದಿರುವ ವ್ಯಕ್ತಿಗಳು HIFU (ಹೈ-ಇಂಟೆನ್ಸಿಟಿ ಫೋಕಸ್ಡ್ ಅಲ್ಟ್ರಾಸೌಂಡ್) ಮತ್ತು ರೇಡಿಯೊಫ್ರೀಕ್ವೆನ್ಸಿ ಚಿಕಿತ್ಸೆಗಳಿಗೆ ಮೊರೆ ಹೋಗಿದ್ದಾರೆ. ಈ ವರ್ಷದ ಬಹುಮುಖ್ಯ ಟ್ರೆಂಡ್ ಇದಾಗಿತ್ತು.
ಹೈಟೆಕ್ ತ್ವಚೆ ಸೌಂದರ್ಯ ಹೆಚ್ಚಿಸುವ ಸಾಧನಗಳು
ಎಲ್‌ಇಡಿ ಮಾಸ್ಕ್‌ಗಳು, ಮೈಕ್ರೊಕರೆಂಟ್ ಉಪಕರಣಗಳು ಮತ್ತು ರೇಡಿಯೊಫ್ರೀಕ್ವೆನ್ಸಿ ಸಾಧನಗಳಂತಹ ಮನೆಯಲ್ಲಿರುವ ಗ್ಯಾಜೆಟ್‌ಗಳು ಹೆಚ್ಚು ಜನಪ್ರಿಯವಾದವು. ಮುಖ್ಯವಾಗಿ ಮೊಡವೆಗಳು, ಕಪ್ಪು ಕಲೆಗಳು, ಹಳೆಯ ಕಲೆಗಳ ನಿವಾರಣೆಗಾಗಿ ಹಲವು ಗ್ಯಾಜೆಟ್‌ಗಳ ಬಳಸುವುದು ಈ ವರ್ಷ ಹೆಚ್ಚಾಗಿತ್ತು.



Click it and Unblock the Notifications