Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
Year Ender 2024: ಈ ವರ್ಷ ತುಂಬಾ ಟ್ರೆಂಡ್ ಆದ ಲಂಗ ದಾವಣಿ ಲುಕ್
ಫ್ಯಾಷನ್ ಲೋಕದಲ್ಲಿ ಪ್ರತಿ ವರ್ಷವೂ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ,ಕೆಲವೊಂದು ಹಳೆಯ ಫ್ಯಾಷನ್ ಮತ್ತೆ ಟ್ರೆಂಡ್ ಆಗುವುದು . 2024ರಲ್ಲಿಯೂ ಅಷ್ಟೇ ಹೆಣ್ಮಕ್ಕಳು ಟ್ರೆಡಿಷನಲ್ ಲುಕ್‌ನಲ್ಲಿ ಕಂಗೊಳಿದ್ದು ಎಂದರೆ ಲಂಗ ದಾವಣಿಯಲ್ಲಿ. ಈ ಲಂಗ ದಾವಣಿ ಎಂಬುವುದು ತುಂಬಾ ಹಳೆಯ ಫ್ಯಾಷನ್ ಆಗಿತ್ತು, ಆದರೆ ಆ ಫ್ಯಾಷನ್ ಹೊಸ ಲುಕ್‌ನಲ್ಲಿ ಮತ್ತೆ ಟ್ರೆಂಡ್ ಆಗಿದೆ. ಚಿಕ್ಕ ಹೆಣ್ಮಕ್ಕಳಿಂದ ಹಿಡಿದು, ಕಾಲೇಜು ಕುವರಿಯರು, ಮಹಿಳೆಯರು ಎಲ್ಲರೂ ಈ ಟ್ರೆಂಡ್ ಫಾಲೋ ಮಾಡಿದ್ದಾರೆ.

ತುಂಬಾನೇ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚುತ್ತಿರುವ ಹೆಣ್ಮಕ್ಕಳು
ಈಗ ನೀವು ಯಾವುದೇ ಸಮಾರಂಭ, ಮದುವೆ ಸಮಾರಂಭದಲ್ಲಿ ಗಮನಿಸಿದರೆ ಹೆಣ್ಮಕ್ಕಳು ಲಂಗ ದಾವಣಿ ಲುಕ್‌ನಲ್ಲಿ ಮಿಂಚುತ್ತಿರುತ್ತಾರೆ. ಲಂಗ ಧಾವಿ ಧರಿಸಿ ಅದಕ್ಕೊಪ್ಪುವ ಅಲಂಕಾರ ಮಾಡಿ ಅತ್ತಿತ್ತ ಓಡಾಡುವ ರೂಪಸಿಗಳು ಸಮಾಂಭಕ್ಕೆ ವಿಶೇಷ ಕಳೆ.
ಘಾಗ್ರ ಬದಲಿಗೆ ಬಂತು ಲಂಗ ದಾವಣಿ
ಒಂದು ಕಾಲವಿತ್ತು ಲಂಗ ದಾವಣಿ ಓಲ್ಡ್ ಫ್ಯಾಷನ್, ಅದರ ಬದಲಿಗೆ ಘಾಗ್ರ ಧರಿಸುವುದು ಫ್ಯಾಷನ್ ಆಗಿತ್ತು, ಆದರೆ ಈಗ ಘಾಗ್ರ ಓಲ್ಡ್ ಫ್ಯಾಷನ್ ಆಗಿ ಲಂಗ ದಾವಣಿ ಹೊಸ ಟ್ರೆಂಡ್ ಆಗಿದೆ. ಮದುವೆಯಲ್ಲಿ , ಎಂಗೇಜ್ಮೆಂಟ್‌ನಲ್ಲಿ ಮದುಮಗಳು ಕೂಡ ಇದೇ ರೀತಿಯ ವಸ್ತ್ರಧಾರಣೆಯಲ್ಲಿ ಕಂಗೊಳಿಸುತ್ತಿದ್ದಾಳೆ.
ಮೆಹಂದಿ ಶಾಸ್ತ್ರದಲ್ಲಿಯೂ ಲಂಗ ದಾವಣಿ ವಸ್ತ್ರದ್ದೇ ಕಾರುಬಾರು
ತುಂಬಾ ಹೆಣ್ಮಕ್ಕಳು ಮೆಹಂದಿ ಶಾಸ್ತ್ರಕ್ಕೆ, ಸಂಗೀತ ಕಾರ್ಯದಲ್ಲಿ ಲಂಗದಾವಣಿ ಧರಿಸುತ್ತಿದ್ದರೆ. ಈ ಲಂಗ ದಾವಣಿ ವಿಸೇಷವೆಂದರೆ ಈ ಬಗೆಯ ಡ್ರೆಸ್ಸಿಂಗ್ ಎಲ್ಲರಿಗೂ ಚೆನ್ನಾಗಿ ಒಪ್ಪುತ್ತೆ ಅಲ್ಲದೆ ಅವರ ಸೌಂದರ್ಯವನ್ನು ಹೆಚ್ಚಿಸುತ್ತೆ.
ದಾವಣಿ ಡ್ರೆಸ್ಸಿಂಗ್ ಮೂಲಕ ಗಮನ ಸೆಳೆಯುತ್ತಿರುವ ಸೆಲೆಬ್ರಿಟಿಗಳು
ನೀವು ಸಾಕಷ್ಟು ಸೆಲೆಬ್ರಿಟಿಗಳನ್ನು ಗಮನಿಸಿರಬಹುದು ಅವರೆಲ್ಲಾ ಲಂಗ ದಾವಣಿಯಲ್ಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಬ್ಬಗಳು, ವ್ರತಗಳ ಈ ಸಂದರ್ಭದಲ್ಲಿ ಬಹುತೇಕ ಡ್ರೆಸ್ ಕೋಡ್.
ಹೊಸ ರೂಪದಲ್ಲಿ ಬದಲಾದ ಮನೆಯಲ್ಲಿದ್ದ ಹಳೆಯ ಸೀರೆಗಳು
ಕೆಲವೊಂದು ದುಬಾರಿ ಸೀರೆಗಳನ್ನು ಒಂದು ಅಥವಾ ಎರಡು ಫಂಕ್ಷನ್‌ಗೆ ಧರಿಸಿ ನಂತರ ಎಲ್ಲಾಕಡೆ ಇದೊಂದೇ ಸೀರೆ ಹಾಕಿಕೊಂಡು ಹೋಗಲು ಆಗುತ್ತಾ ಅಂತ ಬೀರುವಿನಲ್ಲಿ ಇಟ್ಟ ಸೀರೆ ಮತ್ತೆ ಮುಟ್ಟಿರುವುದಿಲ್ಲ. ಆದರೆ ಈ ಲಂಗ ದಾವಣಿ ಟ್ರೆಂಡ್ ಬಂದ ಮೇಲೆ ಅಂಥ ಸೀರೆಗಳು ಲಂಗ ದಾವಣಿಯಾಗಿ ಪರಿವರ್ತನೆಯಾಗಿದೆ, ಹೀಗಾಗಿ ಸಾಕಷ್ಟು ಸಮಯದಲ್ಲಿ ಹೊಸ ಬಟ್ಟೆ ಖರೀದಿಸಬೇಕಾಗಿಲ್ಲ, ಸೀರೆಯನ್ನು ಲಂಗ ದಾವಣಿಯಾಗಿ ಪರಿವರ್ತಿಸಿದರೆ ಸಾಕು.



Click it and Unblock the Notifications
