Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Womens Day Special : ಇಳಕಲ್ ಸೀರೆಯನ್ನು ಹೆಣ್ಮಕ್ಕಳು ತುಂಬಾ ಇಷ್ಟಪಡಲು ಈ ವಿಶೇಷತೆಗಳೇ ಕಾರಣ
ಹೆಂಗಳೆಯರ ಅಚ್ಚುಮೆಚ್ಚಿನ ಉಡುಪು ಸೀರೆ. ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ ಅದರಲ್ಲೂ ಸೀರೆಯುಟ್ಟ ಹೆಣ್ಣುಮಕ್ಕಳನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು. ತಲತಲಾಂತರಗಳಿಂದ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿರುವ ಈ ಸೀರೆಗೆ ಕರ್ನಾಟಕದಲ್ಲೂ ಒಂದು ಅಭೂತಪೂರ್ವ ಇತಿಹಾಸವಿದೆ.

ಭೌಗೋಳಿಕ ಟಾಗ್ ಹೊಂದಿರುವ ಪ್ರತಿಷ್ಠಿತ ಇಳಕಲ್ ಸೀರೆಗಳು ತಯಾರಾಗೋದು ತಮ್ಮ ಕರ್ನಾಟಕದಲ್ಲಿ. ಇಳಕಲ್ ಸೀರೆಗಳು ನಮ್ಮ ನಾಡಿನ ಹೆಮ್ಮೆ. ಅಷ್ಟಕ್ಕು ಇಳಕಲ್ ಸೀರೆಗಳು ಯಾವ ಕಾರಣಕ್ಕೆ ಇಷ್ಟೊಂದು ಪ್ರಸಿದ್ಧಿ ಪಡೆದಿರೋದು? ಇದರ ವಿಶೇಷತೆಗಳು ಏನು ಅನ್ನೋದನ್ನ ಹೇಳ್ತೀವಿ.
ವಿಶೇಷ ವಿನ್ಯಾಸ ಹೊಂದಿರುವ ಇಳಕಲ್ ಸೀರೆಗಳು
ಕರ್ನಾಟಕದ ಬಾಗಲಕೋಟೆ ಜೆಲ್ಲೆಯಲ್ಲಿರುವ ಸಣ್ಣನಗರವೇ ಇಳಕಲ್. ಈ ಇಳಕಲ್ ನಗರ ಕೈಮಗ್ಗದ ಸೀರೆಗಳಿಗೆ ಹೆಸರುವಾಸಿ. ಈ ನಗರದಿಂದಾನೇ ಇಲ್ಲಿನ ಸೀರೆಗಳಿಗೆ ಇಳಕಲ್ ಎಂಬ ಹೆಸರು ಬಂದಿದೆ. ಇಳಕಲ್ ಸೀರೆಯು ಭಾರತದಲ್ಲಿ ತಯಾರಾಗುವ ಇತರ ಸೀರೆಗಳ ಯಾವುದೇ ನೇಯ್ಗೆಗಿಂತ ಭಿನ್ನವಾಗಿದೆ. ಇದು ಅದರ ಉದ್ದ, ವಿನ್ಯಾಸ ಮತ್ತು ಸಂಯೋಜನೆಯಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಒಂದು ಶುದ್ಧ ರೇಷ್ಮೆ ಇಳಕಲ್ ಸೀರೆಯನ್ನು ಪೂರ್ಣಗೊಳಿಸಲು ಸುಮಾರು ಒಂದು ವಾರ ತಗುಲುತ್ತದೆ. ಇಲ್ಲಿ ಹಲವಾರು ಜೋಡಿ ಕೈಗಳು ಶ್ರಮದಿಂದಾಗಿ ಇಳಕಲ್ ಸೀರೆಗಳು ತಯಾರಾಗುತ್ತವೆ.
ಈ ಪರಂಪರೆಯ ಕೈಮಗ್ಗ ಉತ್ಪನ್ನವು ಹತ್ತಿ ಮತ್ತು ಕೃತಕ ರೇಷ್ಮೆ, ಹತ್ತಿ-ರೇಷ್ಮೆ-ಕೃತಕ ರೇಷ್ಮೆ ಮತ್ತು ಶುದ್ಧ ರೇಷ್ಮೆಯ ಸಂಯೋಜನೆಯನ್ನು ಒಳಗೊಂಡಂತೆ ನೂಲಿನ ಶ್ರೇಣಿಯಲ್ಲಿ ಲಭ್ಯವಿದೆ. ಇಳಕಲ್ ಸೀರೆಗಳನ್ನು ಉತ್ಪಾದಿಸುವ ರೀತಿಯೇ ವಿಶಿಷ್ಟವಾಗಿದೆ. ಹೀಗೆ ತಯಾರಾದ ಇಳಕಲ್ ಸೀರೆಗಳು ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶಗಳಿಗೂ ರಫ್ತಾಗುತ್ತದೆ.
ಇಳಕಲ್ ಸೀರೆಗಳ ವಿಶೇಷತೆಗಳೇನು?
* ಇಳಕಲ್ ಸೀರೆಗಳನ್ನು ಅತ್ಯುತ್ತಮ ಸಾಂಪ್ರದಾಯಿಕ ರೇಷ್ಮೆ ಸೀರೆ ಎಂದು ಕರೆಯಲಾಗುತ್ತದೆ.
* ಇಳಕಲ್ ರೇಷ್ಮೆ ಸೀರೆಗಳು ಸಂಪೂರ್ಣವಾಗಿ ಸಾಂಪ್ರದಾಯಿಕ ಸೀರೆಯಾಗಿದೆ. ಇದರ ಸರಳ ಮತ್ತು ಸಾಂಪ್ರದಾಯಿಕ ವಿನ್ಯಾಸಗಳು ಪ್ರತಿ ಮಹಿಳೆಗೆ ಸಂಪೂರ್ಣ ಭಾರತೀಯ ಸಾಂಪ್ರದಾಯಿಕ ಲುಕ್ ನೀಡುತ್ತದೆ.
* ಈ ಸೀರೆಯನ್ನು ನಕಲಿ ಅಥವಾ ಕಡಿಮೆ ಗುಣಮಟ್ಟದ ವಸ್ತುಗಳಿಂದ ತಯಾರಿಸುವುದಿಲ್ಲ. ಬದಲಾಗಿ ಈ ಸೀರೆಯನ್ನು ಹತ್ತಿ, ಹತ್ತಿ ಮತ್ತು ರೇಷ್ಮೆಯ ಮಿಶ್ರಣ, ಅಥವಾ ಶುದ್ಧ ರೇಷ್ಮೆಯಿಂದ ತಯಾರಿಸಲಾಗುತ್ತದೆ.
* ಇಳಕಲ್ ಸೀರೆಯ ವಿಶಿಷ್ಟ ವೈಶಿಷ್ಟ್ಯವೆಂದರೆ ಅದರ ಪಲ್ಲು. ಅದರ ಪಲ್ಲುವಿನಲ್ಲಿ ವ್ಯತಿರಿಕ್ತ ಬಣ್ಣವನ್ನು ಸೇರಿಸಲಾಗುತ್ತದೆ. ಇದು ಶುದ್ಧ ರೇಷ್ಮೆಯಲ್ಲಿ ನೇಯ್ದ ಪರ್ಯಾಯ ಪಟ್ಟೆಗಳನ್ನು ಒಳಗೊಂಡಿರುತ್ತದೆ.
* ಸಾಂಪ್ರದಾಯಿಕವಾಗಿ ಬಳಸುವ ಬಣ್ಣಗಳೆಂದರೆ ದಾಳಿಂಬೆ ಕೆಂಪು, ನವಿಲು ಹಸಿರು ಮತ್ತು ಸಾಂಪ್ರದಾಯಿಕ ಲುಕ್‌ಗಾಗಿ ಗಿಳಿ ಹಸಿರು ಬಣ್ಣವನ್ನು ಬಳಸಲಾಗುತ್ತದೆ. ಇಲ್ಲಿ ವಧುವಿನ ಸೀರೆಯನ್ನು ನಿರ್ದಿಷ್ಟ ಬಣ್ಣದ ಉಡುಗೆಗಳಿಂದ ಮಾಡಲಾಗುತ್ತದೆ. ಮತ್ತು ಇದನ್ನು ಗಿರಿ ಕುಮುಕುಮ್ ಎಂದು ಕರೆಯಲಾಗುತ್ತದೆ.
* ಇಳಕಲ್ ಸೀರೆಗಳ ಬಾರ್ಡರ್‌ಗಳಲ್ಲಿ ನಾವು ಬೇರೆ ಬೇರೆ ವಿನ್ಯಾಸಗಳನ್ನು ನೋಡಬಹುದು. ಅದರಲ್ಲಿ ಮುಖ್ಯವಾಗಿ ಭೂಮಿ ಬಾರ್ಡರ್ ಸೀರೆಗಳು, ಗುಳೇದಗುಡ್ಡ ಖಾನ ಸೀರೆಗಳು ಮತ್ತು ರಾಮದುರ್ಗ ಸೀರೆಗಳು ಇತ್ಯಾದಿ. ಇಳಕಲ್ ಸೀರೆಗಳ ವಿಶಿಷ್ಟ ಲಕ್ಷಣವೆಂದರೆ ಇದರಲ್ಲಿ ಕಸೂತಿಯ ಬಳಕೆ ಮಾಡಲಾಗುತ್ತದೆ. ಕಸೂತಿಯಲ್ಲಿ ಬಳಸಲಾಗುವ ವಿನ್ಯಾಸಗಳೆಂದರೆ ಪಲ್ಲಕ್ಕಿಗಳು, ಆನೆಗಳು ಮತ್ತು ಕಮಲಗಳಂತಹ ಸಾಂಪ್ರದಾಯಿಕ ಪ್ಯಾಟರ್ನ್‌ಗಳನ್ನು ಕಾಣಬಹುದು.
* ಇತ್ತೀಚಿಗೆ ಇಳಕಲ್ ಸೀರೆಗಳು ಹೊಸ ಟ್ರೆಂಡ್ ಅಥವಾ ಹೊಸ ಫ್ಯಾಷನ್ ಆಗುತ್ತಿವೆ. ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಮಿಶ್ರಣದ ಅದ್ಭುತ ಮತ್ತು ಸೊಗಸಾದ ನೋಟವನ್ನು ನೀಡುವ ಪಾಶ್ಚಾತ್ಯ ಉಡುಪುಗಳನ್ನು ತಯಾರಿಸಲು ಈ ಸೀರೆಗಳನ್ನು ಬಳಸಲಾಗುತ್ತಿದೆ. ಫ್ಯಾಶನ್ ಶೋಗಳಲ್ಲಿ ಇವುಗಳನ್ನು ವಿಶಿಷ್ಟವಾದ ಲುಕ್‌ಗಾಗಿ ಬಳಕೆ ಮಾಡುತ್ತಾರೆ.
ಒಟ್ಟಿನಲ್ಲಿ ನಮ್ಮ ನಾಡಿನಲ್ಲೇ ತಯಾರಾದ ಸೀರೆಗಳು ದೇಶ-ವಿದೇಶಗಳಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ. ನೀವೇನಾದರೂ ಬಾಗಲಕೋಟೆಗೆ ಭೇಟಿ ಕೊಟ್ರೆ ಇಳಕಲ್ ಸೀರೆಗಳನ್ನು ಖರೀದಿಸೋದನ್ನ ಮರೀಬೇಡಿ.



Click it and Unblock the Notifications
