Latest Updates
-
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್!
ಕ್ವಾರೆಂಟೈನ್‌ನಲ್ಲಿ ಸಕತ್ ಟ್ರೆಂಡ್ ಆಗುತ್ತಿವೆ ಈ ನೇಲ್ ಆರ್ಟ್‌ಗಳು
ಕೋವಿಡ್ 19 ಹಾವಳಿ ತಡೆಗಟ್ಟಲು ಜನರು ತಮ್ಮ-ತಮ್ಮ ಮನೆಗಳಲ್ಲಿಯೇ ಇದ್ದಾರೆ. ಕೆಲವರು ಅಯ್ಯೋ ಸಮಯ ಕಳೆಯುವುದೇ ಕಷ್ಟವಾಗಿದೆ ಎಂದು ಪೇಚಾಡುತ್ತಿದ್ದರೆ, ಇನ್ನು ಕೆಲವರು ಈ ಸಮಯವನ್ನು ಕ್ರಿಯೇಟಿವ್ ಆಗಿ ಕಳೆಯಲು ಟ್ರೈ ಮಾಡ್ತಾ ಇದ್ದಾರೆ.

ಮೇಕಪ್‌ಗೂ ಹೆಣ್ಮಕ್ಕಳಿಗೂ ಬಿಟ್ಟಿರಲಾರದ ಸಂಬಂಧ. ಆದರೆ ಈ ಕ್ವಾರೆಂಟೈನ್‌ನಿಂದಾಗಿ ಮೇಕಪ್ ಮಾಡುವುದಕ್ಕೆ ಮನಸ್ಸಿಲ್ಲ ಅಂತ ಕೆಲವರು ಹೇಳಿದರೆ, ಮತ್ತೆ ಕೆಲವರು ಕ್ವಾರೆಂಟೈನ್ ಆದರೆ ಏನಂತೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವಾಗ, ಫ್ರೆಂಡ್ಸ್ ಜೊತೆ ವಿಡಿಯೋ ಚಾಟ್ ಮಾಡುವಾಗ ಆಕರ್ಷಕವಾಗಿ ಕಾಣಬೇಕೆಂದು ಮೇಕಪ್ ಮಾಡುತ್ತಿದ್ದಾರೆ.
ಇನ್ನು ಕೆಲವರು ಉಗುರುಗಳಿಗೆ ಚೆಂದದ ನೇಲ್ ಪಾಲಿಷ್ ಹಚ್ಚಿ, ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಸುಮ್ಮನೆ ಕೂತಾಗ ಈ ರೀತಿ ನೇಲ್ ಆರ್ಟ್ ಮಾಡುವುದರಿಂದ ಉಗುರುಗಳ ಅಂದ ಹೆಚ್ಚುವುದು ಮಾತ್ರವಲ್ಲ, ಮನಸ್ಸಿನ ಬೇಸರ ಕೂಡ ದೂರವಾಗುವುದು.
ಇಲ್ಲಿ ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆದ ಕೆಲ ಆಕರ್ಷಕ ನೇಲ್‌ಆರ್ಟ್ ಟ್ರೆಂಡ್ ನೀಡಿದ್ದೇವೆ, ಇವುಗಳನ್ನು ನೋಡುತ್ತಿದ್ದರೆ ನಿಮ್ಮ ಬೆರಳುಗಳನ್ನೂ ಹೀಗೆ ಅಲಂಕರಿಸಬೇಕು ಎಂದು ಅನಿಸದೆ ಇರಲ್ಲ ನೋಡಿ:

ಫ್ರೆಂಚ್ ಮ್ಯಾನಿಕ್ಯೂರ್
ಈ ನೇಲ್‌ಪಾಲಿಷ್ ಡಿಸೈನ್ ಎವರ್‌ಗ್ರೀನ್ ಡಿಸೈನ್ ಎಂದೇ ಹೇಳಬಹುದು. ಈ ನೇಲ್ ಪಾಲಿಷ್ ಹಚ್ಚುವ ಮುನ್ನ ಟ್ರಾನ್ಸ್‌ಫರಂಟ್ ನೇಲ್ ಪಾಲಿಷ್ ಹಚ್ಚಿ ಅದರ ಮೇಲೆ, ಉಗುರಿನಿಂದ ಸ್ವಲ್ಪ ಮೇಲ್ಭಾಗಕ್ಕೆ ಕಡು ಬಣ್ಣದ ನೇಲ್ ಪಾಲಿಷ್ ಹಚ್ಚುವುದು.

ಲೈಟ್ ಅಂಡ್ ಡಾರ್ಕ್ ಟ್ರೆಂಡ್
ಉಗುರುಗಳಿಗೆ ವೈಟ್, ಗ್ರೇ ಹೀಗ, ಬ್ಲೂ ಹೀಗೆ ಯಾವುದಾದರೂ ಬಣ್ಣದ ನೇಲ್ ಪಾಲಿಷ್ ಹಚ್ಚಬೇಕು. ನಂತರ ಕಿರು ಬೆರಳು ಹಾಗೂ ಉಂಗುರ ಬೆರಳಿಗೆ ಬೇರೆ ವಿನ್ಯಾಸ ಬಿಡಿಸುವುದು. ಈ ರೀತಿ ನೇಲ್ ಪಾಲಿಷ್ ಬೇರೆಯವರು ಹಚ್ಚಿಕೊಡಬೇಕಾಗುತ್ತದೆ. ಮನೆಯಲ್ಲಿ ಸಹೋದರಿಯರ ಜೊತೆ ಕೂತು ಈ ರೀತಿ ನೇಲ್‌ಆರ್ಟ್ ಮಾಡುವುದು ಮಜಾವಾಗಿರುತ್ತದೆ ಅಲ್ವಾ?

ಎನಿಮಲ್ ಪ್ರಿಂಟ್
ಇನ್ನು ಕೆಲವರು ಹುಲಿ ಪಟ್ಟೆ, ಜೀಬ್ರಾ ಪಟ್ಟೆ ಹೀಗೆ ಪ್ರಾಣಿಗಳ ಮೈ ಹೋಲುವ ರೀತಿ ನೇಲ್‌ಪಾಲಿಷ್ ವಿನ್ಯಾಸ ಬಿಡಿಸುತ್ತಿದ್ದಾರೆ. ಈ ರೀತಿ ನೇಲ್ ಪಾಲಿಷ್ ಫ್ಯಾಷನ್ ಪ್ರಿಯರ ಗಮನ ಕೂಡ ಸೆಳೆಯುತ್ತಿದೆ.

ಬ್ಲೂ ಮ್ಯಾಜಿಕ್
ಇನ್ನು ನಿಮ್ಮಲ್ಲಿ ಎರಡರಿಂದ-ಮೂರು ಶೇಡ್‌ನಲ್ಲಿ ಬ್ಲೂ ಬಣ್ಣದ ನೇಲ್ ಪಾಲಿಷ್ ಇದ್ದರೆ ಇದನ್ನು ಟ್ರೈ ಮಾಡಬಹುದು. ಇದು ಪಾರ್ಟಿಲುಕ್ ನೀಡುವ ನೇಲ್‌ಪಾಲಿಷ್ ಆದರೂ ಈಗ ಈ ರೀತಿಯ ನೇಲ್‌ಪಾಲಿಷ್ ತುಂಬಾ ಟ್ರೆಂಡ್ ಆಗುತ್ತಿದ್ದು ಟೀನೇಜ್‌ನವರು ಈ ವಿನ್ಯಾಸ ಹೆಚ್ಚು ಇಷ್ಟಪಡುತ್ತಿದ್ದಾರೆ.

ನ್ಯೂಡ್ ನೇಲ್ ಪಾಲಿಷ್
ನಾಲ್ಕೈದು ಬಣ್ಣದ ನೇಲ್ ಪಾಲಿಷ್ ಇದೆ ಎಂದಾದರೆ ಹೀಗೆ ಒಂದೊಂದು ಬೆರಳಿಗೆ ಒಂದೊಂದು ಬಣ್ಣ ಹಚ್ಚಿ. ಸದಾ ಡೀಸೆಂಟ್ ಲುಕ್ ನೀಡುವಂತೆ ನೇಲ್ ಪಾಲಿಷ್ ಹಚ್ಚುತ್ತಿದ್ದರೆ, ಈ ಸಮಯದಲ್ಲಿ ನೀವು ಈ ರೀತಿ ಹಚ್ಚಿ ನೋಡಿ.... ಇಷ್ಟವಗಬಹುದು.

ಉದ್ದ ಬೆಳೆದ ಉಗುರುಗಳಿಗೆ ಅಂದದ ಲುಕ್
ಇನ್ನು ಕ್ವಾರೆಂಟೈನ್‌ನಿಂದಾಗಿ ಉಗುರುಗಳು ಉದ್ದದ್ದವಾಗಿ ಬೆಳೆದಿದ್ದರೆ ಅವುಗಳನ್ನು ಹೀಗೆ ನಿಮಗಿಷ್ಟ ಬಂದ ರೀತಿಯಲ್ಲಿ ಆಕರ್ಷಕ ವಿನ್ಯಾಸಗಳನ್ನು ಮಾಡಿ ಖುಷಿ ಪಡಬಹುದು. ಉದ್ದ ಉಗುರುಗಳನ್ನು ಬೆಳೆಸುವಯದಾದರೆ ಅದರ ಶುಚಿತ್ವ ಕಡೆಗೆ ಹೆಚ್ಚಿನ ಗಮನ ನೀಡಿ. ಕೈಗಳನ್ನು ಸೋಪ್ ಹಚ್ಚಿ ಆಗಾಗ ತೊಳೆಯಿರಿ, ಕೈಯಲ್ಲಿ ಕೀಟಾಣುಗಳು ಇರದಂತೆ ನೋಡಿಕೊಳ್ಳಿ.



Click it and Unblock the Notifications