Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಸೈಮಾ ಅವಾರ್ಡ್ 2021: ಈ ಫಂಕ್ಷನ್‌ನಲ್ಲಿ ಸೌತ್ ನಟಿಯರ ಆಕರ್ಷಕ ಲುಕ್
ದಕ್ಷಿಣ ಭಾರತದ ಚಿತ್ರೋದ್ಯಮದ ಪ್ರತಿಷ್ಠಿತ ಸೈಮಾ ಅವಾರ್ಡ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆಯಿತು. ಅನೇಕ ತಾರೆಯರು ಈ ಸಮಾರಂಭದಲ್ಲಿ ಭಾಗವಹಿಸಿ ಈ ಫಂಕ್ಷನ್ ಮತ್ತಷ್ಟು ಕಲರ್ ಫುಲ್ ಮಾಡಿದ್ದಾರೆ.
ಚಿತ್ರದ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ ಪ್ರತಿಭೆಗಳನ್ನು ಗುರುತಿಸಿ ಈ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು. ಈ ರೆಡ್ ಕಾರ್ಪೆಟ್‌ನಲ್ಲಿ ಆಕರ್ಷಕ ಉಡುಗೆಗಳನ್ನು ತೊಟ್ಟು ನಟಿ ಮಣಿಯರು ಗಮನ ಸೆಳೆದಿದ್ದಾರೆ. ಕನ್ನಡದ ರಚಿತಾ ರಾಮ್, ರಶ್ಮಿಕಾ ಮಂದಣ್ಣ, ಸುಹಾಸನಿ ಹೀಗೆ ಹಿರಿಯ-ಕಿರಿಯ ನಟಿಯರು ಕಲರ್‌ಫುಲ್ ಆಗಿ ಡ್ರೆಸ್ಸಿಂಗ್ ಮಾಡಿ ಗಮನ ಸೆಳೆದರು. ಅದರ ಝಲಕ್ ಈ ಫೋಟೋಗಳಲ್ಲಿವೆ ನೋಡಿ:

ಕೀರ್ತಿ ಶೆಟ್ಟಿ
ಬ್ಯೂಟಿ ಫುಲ್ ನಟಿ, ತನ್ನ ನಗುವಿನಿಂದಲೇ ನೋಡುಗರನ್ನು ಕ್ಲೀನ್ ಬೌಲ್ಡ್ ಮಾಡುವ ಕೀರ್ತಿ ಶೆಟ್ಟಿ ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಕ್ರೀಮ್ ಬಣ್ಣದ ಗ್ರ್ಯಾಂಡ್ ಸೆಲ್ವಾರ್ ಲುಕ್ ಕಂಗೊಳಿಸಿದರು.

ಹಾಟ್ ಅಂಡ್ ಬ್ಯೂಟಿಫುಲ್ ಲುಕ್‌ನಲ್ಲಿ ಹರ್ಷಿಕಾ ಪೂಣಚ್ಚ
ಲಾಂಗ್ ಸ್ಲಿಟ್ ರೆಡ್ ಡ್ರೆಸ್ಸಿಂಗ್‌ಗೆ ಡೈಮಂಡ್ ನೆಕ್ಲೇಸ್ ಹಾಹೂಕಿವಿಯೋಲೆ ಧರಿಸಿ, ಕಡು ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಚ್ಚಿ ಸರಳವಾದ ಮೇಕಪ್‌ನಲ್ಲಿ ಹಾಟ್ ಆಗಿ ಕಂಗೊಳಿಸಿದ ಹರ್ಷಿಕಾ ಪೂಣಚ್ಚ.

ಬ್ಲ್ಯಾಕ್ ಅಂಡ್ ಬೋಲ್ಡ್ ಲುಕ್‌ನಲ್ಲಿ ಪೂಜಾ ಹೆಗಡೆ
ಸಿಂಗಲ್ ಸ್ಲೀವ್‌ನ ಬ್ಲ್ಯಾಕ್ ಸ್ಲಿಟ್ ಗೌನ್‌ನಲ್ಲಿ ಹಾಟ್ ಆಗಿ ಕಂಗೊಳಿಸಿದ ಪೂಜಾ ಹೆಗಡೆ . ಯಾವುದೇ ಆಭರಣ ಧರಿಸದೆ ಮಿನಿಮಮ್ ಮೇಕಪ್‌ನಲ್ಲಿ ಸಕತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ ಅಲ್ವಾ.

ಬ್ಲೂ ಸೀರೆಯಲ್ಲಿ ಕಂಗೊಳಿಸಿದ ಸುಹಾಸನಿ
ಬ್ಲೂ ಸೀರೆಗೆ ಮುತ್ತು ಹಾಗೂ ಡೈಮಂಡ್ ಮಿಶ್ರಿತ ಜ್ಯೂವೆಲರಿ ಸೆಟ್ ಹಾಕಿ, ಸೀರೆಗೊಪ್ಪುವ ಬಣ್ಣದ ನೀಲಿ ಬಣ್ಣದ ಬಿಂದಿಯಲ್ಲಿ ಕಂಗೊಳಿಸಿದ ಸುಹಾಸನಿ.

ಎಲ್ಲೋ-ಗೋಲ್ಡನ್ ಲುಕ್‌ನಲ್ಲಿ ರೇವತಿ
ಸೌತ್ ಇಂಡಿಯಾದ ಪ್ರಸಿದ್ಧ ನಟಿ ರೇವತಿ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲೋ-ಗೋಲ್ಡನ್ ಸ್ಯಾರಿಗೆ ಹೆವಿ ಇಯರಿಂಗ್ ಧರಿಸಿ, ಅದಕ್ಕೊಪ್ಪುವ ನೆಕ್ಲೆಸ್ ರೀತಿಯ ಸರ ಧರಿಸಿ ಆಕರ್ಷಕವಾಗಿ ಕಂಡು ಬಂದದ್ದು ಹೀಗೆ.

@iam-ejf ಕಿಲ್ಲಿಂಗ್ ಲುಕ್
ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಎರಿಕಾ ಜೆನಿಫರ್ ಫರ್ನಂಡಿಸ್ ವಿಭಿನ್ನ ಡ್ರೆಸ್ಸಿಂಗ್ ಸ್ಟೈಲ್‌ನಿಂದ ಗಮನ ಸೆಳೆದಿದ್ದು ಹೀಗೆ.

ಹಾಟ್ ರೆಡ್ ಗೌನ್‌ನಲ್ಲಿ ರಶ್ಮಿಕಾ ಮಂದಣ್ಣ
ರೆಡ್ ಗೌನ್‌ನಲ್ಲಿ ಎರಡು ಅವಾರ್ಡ್‌ಗಳನ್ನು ಕೈಯಲ್ಲಿ ಹಿಡಿದು ನಗು ಚೆಲ್ಲಿದ ರಶ್ಮಿಕಾ ಲುಕ್.

ತೆಳು ಗುಲಾಬಿ ಸೆಲ್ವಾರ್ ಲುಕ್‌ನಲ್ಲಿ ಮಿಂಚಿದ ರಚಿತಾ ರಾಮ್
ತೆಳು ಗುಲಾಬಿ ಬಣ್ಣದ ಸೆಲ್ವಾರ್, ಹಣೆಗೆ ನೆತ್ತಿ ಬೊಟ್ಟು ಧರಿಸಿ ನಗು ಬೀರಿದ ಡಿಂಪಲ್ ಕ್ವೀನ್.

ರೆಡ್ ಸ್ಯಾರಿಯಲ್ಲಿ ಸುಮಲತಾ ಅಂಬರೀಷ್
ಸೈಮಾ ಅವಾರ್ಡ್‌ನಲ್ಲಿ ಕೆಂಪು ಸೀರೆಗೆ ಪಿಂಕ್ ಬ್ಲೌಸ್ ಧರಿಸಿ ಸುಮಲತಾ ಅಂಬರೀಷ್ ಕಂಡು ಬಂದದ್ದು ಹೀಗೆ.

ಸುಹಾಸನಿ ಜೊತೆ ಕಮಲ್ ಹಾಸನ್ ಮಕ್ಕಳು
ಸುಹಾಸನಿ ಹಾಗೂ ಕಮಲ್ ಹಾಸನ್ ಬಂಧುಗಳು. ಶ್ರುತಿ ಹಾಸನ್ ತನ್ನ ಸಹೋದರಿ ಅಕ್ಷರಾ ಹಾಸನ್ ಜೊತೆ ಸುಹಾಸನಿಯೊಂದಿಗೆ ಫೋಟೋಗೆ ಪೋಸ್ ನೀಡಿದ ಕ್ಷಣ. ಸಹೋದರಿಯರಿಬ್ಬರು ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ.

ರೆಡ್-ಮಿರರ್ ಲುಕ್ ಡ್ರೆಸ್ಸಿಂಗ್‌ನಲ್ಲಿ ಶ್ರುತಿ ಹರಿಹರನ್
ಸ್ಯಾಂಡಲ್‌ವುಡ್ ನಟಿ ಸೈಮಾ ಅವಾರ್ಡ್‌ನಲ್ಲಿ ಶ್ರುತಿ ಹರಿಹರನ್ ಕಂಡು ಬಮದ್ದು ಹೀಗೆ...



Click it and Unblock the Notifications
