Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹಕ್ಕೆ ಮತ್ತೆ ಚುಚ್ಚಿಸಿಕೊಂಡ ಸಮಂತಾ, ಸಕತ್ ಸೌಂಡ್ ಮಾಡುತ್ತಿದೆ ಈ ಹಾಟ್ ಬೆಡಗಿಯ ಫ್ಯಾಷನ್
ಟಾಲಿವುಡ್‌ನ ಹಾಟ್ ಬೆಡಗಿ ಸಮಂತಾ ಆಗಾಗ ತಮ್ಮ ಫ್ಯಾಷನ್ ಸ್ಟೇಟ್‌ಮೆಂಟ್‌ನಿಂದಲೂ ಗಮನ ಸೆಳೆಯುತ್ತಿರುತ್ತಾರೆ. ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವ ಸಮಂತಾರ ಅಭಿನಯಕ್ಕೆ ಪಾತ್ರವಲ್ಲ ಫ್ಯಾಷನ್ ಲುಕ್‌ಗೂ ಕರ್ನಾಟಕದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ.

ಅಕ್ಕಿನೇನೆ ಕುಟುಂಬದ ಸೊಸೆಯಾಗಿರುವ ಸಮಂತಾ ಮದುವೆಗೆ ಮೊದಲು ಎಷ್ಟು ಬೋಲ್ಡ್, ಸ್ಟೈಲಿಷ್ ಲುಕ್‌ನಿಂದ ಕಾಣಿಸುತ್ತಿದ್ದರೋ, ಮದುವೆ ನಂತರ ಕೂಡ ಹಾಟ್ ಲುಕ್‌ನಿಂದ ಗಮನ ಸೆಳೆಯುತ್ತಾರೆ.
ಅವರ ಪ್ರತಿಯೊಂದು ಫ್ಯಾಷನ್ ಲುಕ್ ಫ್ಯಾಷನ್ ಜಗತ್ತಿನ ಗಮನ ಸೆಳೆಯುತ್ತಿರುವುದು ಸುಳ್ಳಲ್ಲ. ಇದೀಗ ಸಮಂತಾ ದೇಹಕ್ಕೆ ಚುಚ್ಚಿಕೊಳ್ಳುವ ಮೂಲಕ ಮತ್ತೊಂದು ಫ್ಯಾಷನ್ ಗೋಲ್ ನೀಡಿದ್ದಾರೆ. ದೇಹಕ್ಕೆ ಚುಚ್ಚಿಕೊಂಡಿದ್ದಾರೆ ಎಂದಾಗ ತುಂಬಾ ಊಹಿಸಿಕೊಳ್ಳಬೇಡಿ, ಅವರು ಚುಚ್ಚಿರುವುದು ಕಿವಿಗೆ. ಈಗಾಗಲೇ ಸಮಂತಾ ಕಿವಿಯಲ್ಲಿ ಈಗಾಗಲೇ ನಾಲ್ಕು ಓಲೆಗಳಿವೆ, ಇದೀಗ ಮತ್ತೊಂದು ಸೇರ್ಪಡೆಯಾಗಿದೆ.

ಕಿವಿಗೆ ಬಿತ್ತು 5ನೇ ರಂಧ್ರ
ಈ ಹಿಂದೆ ಕಿವಿಗೆ ನಾಲ್ಕೈದು ರಂಧ್ರ ಮಾಡಿ ಕ ಓಲೆ ಧರಿಸುವ ಫ್ಯಾಷನ್ ಇತ್ತು. ಇದೀಗ ಕೆಲವು ವರ್ಷಗಳಿಂದ ಆ ಫ್ಯಾಷನ್ ಸ್ವಲ್ಪ ಕಡಿಮೆಯಾಗಿತ್ತು. ಇದೀಗ ಮತ್ತೆ ಆ ಫ್ಯಾನ್ ಬಂದಿದ್ದು ಸಮಂತಾ ಕೂಡ ಕಿವಿಯಲ್ಲಿ 5 ಕಿವಿಯೋಲೆ ಧರಿಸಿ ತಮ್ಮ ಕಿವಿಯ ಅಲಂಕಾರ ಹೆಚ್ಚಿಸಿಕೊಂಡಿದ್ದಾರೆ. ಈ :ಫ್ಯಾಷನ್ ನೋಡಿದ್ದೇ ತಡ ಸಮಂತಾರ ಮಹಿಳಾ ಅಭಿಮಾನಿಗಳು ಈ ಫ್ಯಾಷನ್ ಅನುಸರಿಸುವುದಂತು ದಿಟ. ಸಮಂತಾರ ಈ ಕಿವಿಯೋಲೆ ಫ್ಯಾಷನ್ ಸಕತ್ ಅಟ್ರಾಕ್ಟಿವ್ ಆಗಿದೆ ಅಲ್ವಾ?

ಸಮಂತಾ ಹಾಟ್ ಫ್ಯಾಷನ್ ಲುಕ್
ಸಮಂತಾ ಇನ್‌ಸ್ಟಾಗ್ರಾಮ್ ಫೋಟೋಸ್ ನೋಡಿ ಎಷ್ಟೊಂದು ಫ್ಯಾಷನಬಲ್ ಲುಕ್‌ನಲ್ಲಿ ಕಂಗೊಳಿಸುತ್ತಾರೆ ಎಂದು ನಿಮಗೆ ತಿಳಿಯುತ್ತದೆ. ಮಾಡರ್ನ್ ಡ್ರೆಸ್‌ನಿಂದ ಹಿಡಿದು ಸೀರೆವರೆಗೆ ಸಕತ್ ಫ್ಯಾಷನಬಲ್ ಲುಕ್‌ನಿಂದ ಗಮನ ಸೆಳೆಯುತ್ತಾರೆ.

ಸಕತ್ ಬಝ್ ಉಂಟು ಮಾಡಿದ ಹಳದಿ ಚೂಡಿದಾರ್ ಲುಕ್
ಈ ಫೋಟೋ ನೀವು ಗಮನಿಸಿ ನೋಡಿ, ಹಳೆಯಸೂಪರ್ ಫ್ಯಾಷನ್‌ಗಳನ್ನು ಸಮಂತಾ ಮತ್ತೆನ್ಯೂ ಲುಕ್‌ನಲ್ಲಿ ಪ್ರೆಸೆಂಟ್ ಮಾಡ್ತಾ ಇದ್ದಾರಾಎಂದು ಅನಿಸದೆ ಇರಲ್ಲ. ಡಿಸೈನ್ ಓವರ್‌ಕೋಟ್ ಇರುವ ಸಮಂತಾರ ಈ ಚೂಡಿದಾರ್ ಲುಕ್ ಕೂಡ ಇದೀಗ ಸಕತ್ ಜನಪ್ರಿಯವಾಗಿದೆ.

ಟ್ಯಾಟೂ ಪ್ರಿಯೆ
ಸಮಂತಾ ಟ್ಯಾಟೂ ಪ್ರಿಯೆ ಕೂಡ ಹೌದು. ಬೆನ್ನಿನ ಮೇಲೆ ಅವರು ಮೂಡಿಸಿರುವ ಟ್ಯಾಟೂ ಚಿತ್ತಾರ ಕೂಡ ಸಕತ್ ಫ್ಯಾಷನ್ ಟ್ರೆಂಡ್ ಸೆಟ್ ಮಾಡಿತ್ತು.

ಸಮಂತಾರ ಸೀಕ್ರೆಟ್ ಟ್ಯಾಟೂ
ಟ್ಯಾಟೂ ಸಾಮಾನ್ಯವಾಗಿ ಎಲ್ಲರೂ ಕಾಣುವ ಜಾಗದಲ್ಲಿ ಅಂದ್ರೆ ಕೈ, ಕಾಲುಗಳಲ್ಲಿ ಹೆಚ್ಚಾಗಿ ಹಾಕಿಸಿಕೊಳ್ಳುತ್ತಾರೆ. ಇನ್ನು ಕೆಲವರು ತುಂಬಾ ಸೀಕ್ರೆಟ್ ಆಗಿಯೂ ಟ್ಯಾಟೂ ಹಾಕಿಸಿರುತ್ತಾರೆ. ಸಮಂತಾರ ಈ ಟ್ಯಾಟೂ ಲುಕ್ ಟ್ಯಾಟೂ ಪ್ರಿಯರಿಗೆ ಹೊಸ ಐಡಿಯಾ ನೀಡಿದ್ದು ಮಾತ್ರ ಸುಳ್ಳಲ್ಲ. ಹೀಗೆ ಸಮಂತಾ ಸದಾ ಹೊಸ ಹೊಸ ಫ್ಯಾಷನ್ ಲುಕ್ ಮೂಲಕ ಫ್ಯಾಷನ್ ಜಗತ್ತನ್ನು ತಮ್ಮತ್ತ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.



Click it and Unblock the Notifications
