Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಬರ್ತ್‌ಡೇ ಗರ್ಲ್ ರಶ್ಮಿಕಾ ಮಂದಣ್ಣ ಅವರ ಟಾಪ್ 5 ಗ್ಲಾಮರಸ್ ಲುಕ್
ಕಿರಿಕ್ ಪಾರ್ಟಿಯಲ್ಲಿ ಸಾನ್ವಿಯಾಗಿ ಕನ್ನಡಿಗರ ಕ್ರಷ್ ಎನಿಸಿಕೊಂಡ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರಿಗೆ ಇಂದು ಅಂದರೆ ಏಪ್ರಿಲ್ 5ಕ್ಕೆ ಹುಟ್ಟು ಹಬ್ಬದ ಸಡಗರದಲ್ಲಿದ್ದಾರೆ. ಹ್ಯಾಪಿ ಬರ್ತ್‌ಡೇ ರಶ್ಮಿಕಾ ಮಂದಣ್ಣ......
ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಇದೋಗ ಬಹು ಬೇಡಿಕೆಯ ನಟಿ. ಕನ್ನಡದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ಇವರು ಟಾಲಿವುಡ್‌ನಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ.

ರಶ್ಮಿಕಾ ನಟನೆಯಿಂದ ಮಾತ್ರವಲ್ಲ ತಮ್ಮ ಫ್ಯಾಷನ್‌ಸೆನ್ಸ್‌ನಿಂದ ಕೂಡ ಗಮನ ಸೆಳೆಯುತ್ತಾರೆ. ಇವರ ಫ್ಯಾಷನ್‌ಸೆನ್ಸ್ ಯಾವ ಬಾಲಿವುಡ್ ನಟಿಗಿಂತಲೂ ಕಡಿಮೆಯಿಲ್ಲ. ಇವರ ಇನ್‌ಸ್ಟಾಗ್ರಾಮ್ ನೋಡಿದರೆ ಇವರ ಅನೇಕ ಫ್ಯಾಷನ್ ಔಟ್‌ಫಿಟ್ ಲುಕ್‌ಗಳ ಫೋಟೋಗಳೇ ತುಂಬಿವೆ.
ಸಹಜ ಸೌಂದರ್ಯದ ಈ ಚೆಲುವೆ ಮೇಕಪ್ ಹಾಗೂ ವಿಥೌಟ್ ಮೇಕಪ್‌ನಲ್ಲೂ ಆಕರ್ಷಕವಾಗಿ ಕಾಣುತ್ತಾರೆ. ರಶ್ಮಿಕಾ ಅವರ ಬರ್ತ್‌ಡೇ ವಿಶೇಷವಾಗಿ ಅವರ ಇತ್ತೀಚಿನ ಫೋಟೋಗಳಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆದ 5 ಫ್ಯಾಷನ್ ಲುಕ್‌ಗಳ ಬಗ್ಗೆ ಇಲ್ಲಿ ಹೇಳಿದ್ದೇವೆ ನೋಡಿ.

ಪಿಂಕ್ ಫ್ರಾಕ್‌ನಲ್ಲಿ ಕಿರಿಕ್ ಬೆಡಗಿ
ಇತ್ತೀಚೆಗೆ ಪೋಸ್ಟ್ ಮಾಡಿರುವ ಪೋಟೊದಲ್ಲಿ ರಶ್ಮಿಕಾ ಪಿಂಕ್ ಫ್ರಾಕ್‌ನಲ್ಲಿ ಮಿಂಚಿದ್ದಾರೆ. ಬಾರ್ಬಿಟಾಲ್ ಲುಕ್ ನೀಡುವ ಸಾರ್ಟ್ ಫ್ರಿಲ್ಡ್ ಫ್ರಾಕ್‌ಗೆ ಹೈ ಹೀಲ್ಡ್ ಮ್ಯಾಚಿಂಗ್ ಸ್ಲಿಪ್ಪರ್ ಧರಿಸಿ, ಮಿನಿಮಮ್ ಮೇಕಪ್‌ನಲ್ಲಿ ಆಕರ್ಷಕವಾಗಿ ಕಾಣಿಸಿದ್ದಾರೆ.

ಫ್ಲೋರೆಲ್ ಸ್ಯಾರಿ
ಫ್ಲೋರೆಲ್ ಸ್ಯಾರಿ ಇದೀಗ ಟ್ರೆಂಡ್ ಆಗಿದ್ದು, ಟ್ರೆಂಡ್‌ಗೆ ತಕ್ಕಂತೆ ಫೋರೆಲ್ ಸ್ಯಾರಿ ಧರಿಸಿ ರಶ್ಮಿಕಾ ಪಿಕ್ ಪೋಸ್ಟ್ ಮಾಡಿದ್ದಾರೆ. ಫ್ಲೋರೆಲ್ ಸೀರೆಗೆ ಮ್ಯಾಚಿಂಗ್ ದೊಡ್ಡ ಕಿವಿಯೋಲೆ ಹಾಗೂ ದೊಡ್ಡ ಉಂಗುರ ಧರಿಸಿದ ರಶ್ಮಿಕಾರ ಸೀರೆ ಸ್ಟೈಲ್ ಸ್ಟೇಟ್‌ಮೆಂಟ್ ಇದಾಗಿದೆ.

ಅನಾರ್ಕಲಿ
ಅನಾರ್ಕಲಿ ಡ್ರೆಸ್ ಅನ್ನು ಪ್ರತಿಯೊಬ್ಬ ಹುಡುಗಿಯೂ ಇಷ್ಟಪಡುತ್ತಾಳೆ. ರಶ್ಮಿಕಾ ಧರಿಸಿಉವ ಅನಾರ್ಕಲಿ ಡ್ರೆಸ್ ಕೂಡ ಆಕರ್ಷಕವಾಗಿದೆ. ಮದುವೆ ಸಮಾರಂಭಕ್ಕೆ ಹೋಗುವಾಗ ರಶ್ಮಿಕಾ ಧರಿಸಿದಂಥ ಈ ಅನಾರ್ಕಲಿ ಸ್ಟೈಲ್ ಅನುಸರಿಸಿದರೆ ನೀವೂ ಕೂಡ ಆಕರ್ಷಕವಾಗಿ ಕಾಣುವಿರಿ.

ಜಮ್‌ಶೂಟ್
ಫ್ಯಾಷನ್‌ಪ್ರಿಯೆಯಾದ ಹೆಣ್ಮಕ್ಕಳು ತಮ್ಮ ವಾರ್ಡ್‌ರೋಬ್‌ನಲ್ಲಿ ಜಮ್‌ಶೂಟ್‌ವೊಂದು ಇರಬೇಕೆಂದು ಬಯಸುವುದು ಸಹಜ. ಇಲ್ಲಿ ರಶ್ಮಿಕಾ ಬ್ಲೂ ಮತ್ತು ಗ್ರೇ (ನೀಲಿ ಮತ್ತು ಕಂದು) ಜಮ್‌ಶೂಟ್ ಧರಿಸಿ ಅದಕ್ಕೆ ಮ್ಯಾಟ್ ಪಿಂಕ್ ಲಿಪ್‌ಸ್ಟಿಕ್ ಧರಿಸಿ ಸಕತ್ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಹಾಟ್ ಲುಕ್
ರಶ್ಮಿಕಾ ಅವರಿಗೆ ಟ್ರೆಡಿಷನಲ್ ಲುಕ್ ಹಾಗೂ ಹಾಟ್ ಲುಕ್ ಎರಡೂ ಚೆನ್ನಾಗಿ ಕಾಣುತ್ತದೆ. ಓಪನ್ ಸ್ಲಿಟ್ ಈ ಗೌನ್‌ನಲ್ಲಿ ರಶ್ಮಿಕಾ ಸಕತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ ಅಲ್ವಾ?



Click it and Unblock the Notifications
