Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಕ್ಷಾ ಬಂಧನಕ್ಕೆ ಇಲ್ಲಿವೆ ಆಕರ್ಷಕ ವಿನ್ಯಾಸದ ಮೆಹಂದಿ ಡಿಸೈನ್‌ಗಳು
ಭಾನುವಾರ ಅಂದ್ರೆ ಆಗಸ್ಟ್ 22ಕ್ಕೆ ರಕ್ಷಾ ಬಂಧನ ಆಚರಣೆ. ದೇಶದೆಲ್ಲಡೆ ಸಡಗರ-ಸಂಭ್ರಮದಿಮದ ಆಚರಿಸುವ ಹಬ್ಬ ಇದಾಗಿರುವುದರಿಂದ ಎಲ್ಲೆಡೆ ಹಬ್ಬದ ವಾತಾವರಣ ಕಳೆಕಟ್ಟುವುದು.
ಸಹೋದರ-ಸಹೋದರಿ ನಡುವಿನ ಬಂಧವನ್ನು ಬಲ ಪಡಿಸುವ ಈ ರಕ್ಷಾ ಬಂಧನ ಆಚರಣೆಯಂದು ಸಹೋದರಿಗೆ ತುಂಬಾನೇ ಸಂಭ್ರಮ. ಅಣ್ಣನ ಕೈಗೆ ರಕ್ಷೆ ಅಥವಾ ರಾಖಿ ಕಟ್ಟುವಾಗ ಅವನು ಕೊಡುವ ಉಡುಗೊರೆಗಳನ್ನು ಪಡೆದು ಸಂಭ್ರಮಿಸುತ್ತಾಳೆ, ಅಲ್ಲದೆ ಈ ದಿನ ಹೆಣ್ಮಕ್ಕಳು ತುಂಬಾ ಆಕರ್ಷಕವಾಗಿ ಅಲಂಕಾರ ಮಾಡಿಕೊಂಡ ಹಬ್ಬವನ್ನು ಆಚರಿಸುತ್ತಾರೆ. ಆಗ ಕೈಗಳಿಗೆ ಮೆಹಂದಿ ಕೂಡ ಹಾಕಬೇಕೆಂದು ಬಯಸುತ್ತಾರೆ.
ಹಬ್ಬ-ಹರಿದಿನ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಮೆಹಂದಿಗೆ ತುಂಬಾನೇ ಪ್ರಾಮುಖ್ಯತೆ ಇದೆ. ಹೆಣ್ಮಕ್ಕಳು ತುಂಬಾ ಖುಷಿ-ಖುಷಿಯಾಗಿ ಮೆಹಂದಿ ಹಾಕಿಕೊಳ್ಳುತ್ತಾರೆ, ಅವರ ಕೈಗಳಲ್ಲಿರುವ ಮೆಹಂದಿಯ ರಂಗು ಹಬ್ಬಗಳಿಗೆ ಅಥವಾ ಮದುವೆ ಮುಂತಾದ ಸಮಾರಂಭಗಳಲ್ಲಿ ವಿಶೇಷ ಮೆರಗು ನೀಡುವುದು. ಚಿಕ್ಕ ಪ್ರಾಯದ ಹೆಣ್ಮಕ್ಕಳಿಂದ ಹಿಡಿದು ಅಜ್ಜಿಯರು ಕೂಡ ಮದರಂಗಿ ಅಥವಾ ಮೆಹಂದಿ ಹಾಕಲು ಆಸಕ್ತಿ ತೋರಿಸುತ್ತಾರೆ.
ಮೆಹಂದಿಯಲ್ಲಿ ಅರೇಬಿಕ್, ಭಾರತೀಯ, ಆಫ್ರಿಕನ್ ಮುಂತಾದ ಮೆಹಂದಿ ವಿನ್ಯಾಸಗಳು ಪ್ರಸಿದ್ಧಿಯನ್ನು ಪಡೆದಿದೆ.
ನಾವಿಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡ್‌ನಲ್ಲಿರುವ ಕೆಲ ಮೆಹಂದಿ ವಿನ್ಯಾಸ ನೀಡಿದ್ದೇವೆ ನೋಡಿ, ಈ ಮೆಹಂದಿ ರಂಗು ನಿಮ್ಮ ಸಂಭ್ರಮ ಹೆಚ್ಚಿಸಲಿ:

1.ಗ್ರ್ಯಾಂಡ್ ಲುಕ್‌ನ ಮೆಹಂದಿ ಡಿಸೈನ್
ಈ ಮೆಹಂದಿ ಡಿಸೈನ್ ನೋಡಿ, ಎಷ್ಟೊಂದು ಆಕರ್ಷಕವಾಗಿದೆ ಅಲ್ವಾ? ಮೊಣಕೈವರೆಗಿನ ಈ ಮೆಹಂದಿ ವಿನ್ಯಾಸ ಹಬ್ಬಗಳಿಗೆ, ಮದುವೆ ಫಂಕ್ಷನ್‌ಗಳಿಗೆ ಹಾಕಲು ಪರ್ಫೆಕ್ಟ್ ಡಿಸೈನ್ ಆಗಿದೆ.

2. ಅರೇಬಿಕ್ ಸ್ಟೈಲ್
ಅರೇಬಿಕ್ ಸ್ಟೈಲ್‌ನ ಈ ವಿನ್ಯಾಸ ನೋಡಿ, ಹಾಕಲು ಸುಲಭವಾಗಿದೆ, ನೋಡಲು ತುಂಬಾನೇ ಆಕರ್ಷಕವಾಗಿದೆ.

3. ಫಿಂಗರ್ಸ್ ಹೈಲೈಟ್ಸ್ ಡಿಸೈನ್ಸ್
ಈ ಮೆಹಂದಿ ವಿನ್ಯಾಸ ನೋಡಿ ಇದು ನೋಡಲು ತುಂಬಾನೇ ಸುಂದರವಾಗಿದ್ದು ಬೆರಳುಗಳಿಗೆ ಹಾಕಿರುವ ಮೆಹಂದಿ ಹೆಚ್ಚು ಹೈಲೈಟ್ಸ್....

4. ಕಾಲುಗಳಿಗೆ ಮೆಹಂದಿ ವಿನ್ಯಾಸ
ಇದು ಭಾರತೀಯ ಶೈಲಿಯ ಮೆಹಂದಿ ವಿನ್ಯಾಸವಾಗಿದ್ದು ತುಂಬಾನೇ ಆಕರ್ಷಕವಾಗಿದೆ ಅಲ್ವಾ?

5. ಲೈಟ್ ಅಂಡ್ ಡಾರ್ಕ್ ಮೆಹಂದಿ ಡಿಸಯನ್
ಈ ಮೆಹಂದಿ ವಿನ್ಯಾಸ ನೋಡಿ ಕೆಲ ಡಿಸೈನ್ ಅನ್ನು ತುಂಬಾ ಡಾರ್ಕ್ ಆಗಿ ಹಾಕಿದರೆ ಇನ್ನು ಕೆಲ ವಿನ್ಯಾಸ ಲೈಟ್ ಆಗಿದೆ. ಇದು ಒಣಗಿದ ಮೇಲೆ ಕಡು ಕೆಂಪು ಹಾಗೂ ತೆಳು ಕೆಂಪು ಬಣ್ಣದಲ್ಲಿ ಮೆಹಂದಿ ತುಂಬಾನೇ ಆಕರ್ಷಕವಾಗಿ ಕಾಣುವುದು.

6. ಸರಳ ಹಾಗೂ ಸುಂದರ ವಿನ್ಯಾಸ
ಈ ಮೆಹಂದಿ ವಿನ್ಯಾಸ ನೋಡಿ ತುಂಬಾ ಸರಳವಾಗಿದೆ, ಆದರೆ ಕೈಗಳಲ್ಲಿ ತುಂಬಾನೇ ಆಕರ್ಷಕವಾಗಿಯೂ ಕಾಣುತ್ತಿದೆ ಅಲ್ವಾ?

7. ಗ್ರ್ಯಾಂಡ್ ಲುಕ್
ಈ ಮೆಹಂದಿ ಲುಕ್ ಸ್ವಲ್ಪ ಗ್ರ್ಯಾಂಡ್ ಆಗಿದೆ. ನೀವು ತುಂಬಾ ಗ್ರ್ಯಾಂಡ್ ಡ್ರೆಸ್ಸ್ ಧರಿಸುವುದಾದರೆ ಅಥವಾ ಸಾಂಪ್ರದಾಯಿಕ ಉಡುಗೆ ತೊಡುವುದಾದರೆ ಈ ವಿನ್ಯಾಸ ನಿಮ್ಮ ಡ್ರೆಸ್ಸಿಂಗ್‌ಗೆ ಹೆಚ್ಚಿನ ಮೆರಗು ನೀಡುವುದು.

8. ಮೆಹಂದಿಯಲ್ಲಿ ಕಾಲ್ಗೆಜ್ಜೆ ಮೆರುಗು
ಈ ಮೆಹಂದಿ ವಿನ್ಯಾಸ ನೋಡಿ, ಕಾಲ್ಗೆಜ್ಜೆ ರೀತಿಯ ಈ ವಿನ್ಯಾಸ ಸಾಂಪ್ರದಾಯಿಕ ಹಾಗೂ ಮಾಡರ್ನ್ ಎರಡೂ ಡ್ರೆಸ್ಸಿಂಗ್‌ಗೂ ಚೆನ್ನಾಗಿ ಕಾಣುತ್ತೆ.

9. ಕೈ ಉಂಗುರದ ವಿನ್ಯಾಸ
ಈ ಮೆಹಂದಿ ವಿನ್ಯಾಸ ನೋಡಿ, ಕೈ ಉಂಗುರದ ರೀತಿಯ ಈ ವಿನ್ಯಾಸ ಸಕತ್ ಕೂಲ್ ಲುಕ್ ನೀಡುವುದು ಅಲ್ವಾ?



Click it and Unblock the Notifications
