Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
Oscars 2023: ಆಸ್ಕರ್ ಅವಾರ್ಡ್ ರೆಡ್ ಕಾರ್ಪೆಟ್ ಲುಕ್‌ನಲ್ಲಿ ಡಿಪ್ಪಿ ಡ್ರೆಸ್ಸಿಂಗ್ ಸೂಪರ್ ಆದರೆ ಹೇರ್‌ಸ್ಟೈಲ್ ಹೀಗ್ಯಾಕೆ?
2023 ಆಸ್ಕರ್ ಅವಾರ್ಡ್ ಸಮಾರಂಭ ಭಾರತೀಯರ ಪಾಲಿಗೆ ತುಂಬಾನೇ ಸ್ಪೆಷಲ್ ಆಗಿದೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳಿಗೆ ಅದೃಷ್ಟದ ಕಾವಲವೆಂದು ಹೇಳಬಹುದು. ಭಾರತದ The Elephant Whisperers ಡಾಕ್ಯೂಮೆಂಟರಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. RRRನ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈ ಆಸ್ಕರ್ ಸಮಾರಂಭಕ್ಕೆ ದೀಪಿಕಾ ಕೂಡ ಹೋಗಿದ್ದಾರೆ.

95ನೇ ಆಸ್ಕರ್ ಅವಾರ್ಡ್ ಫಂಕ್ಷನ್ ದೀಪಿಕಾ ತಮ್ಮ ಹಾಟ್ ಅಂಡ್ ಬ್ಯೂಟಿಫುಲ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಆಸ್ಕರ್ ಫಂಕ್ಷನ್‌ಗೆ ಬಂದ ದೀಪಿಕಾ ತಮ್ಮ ಲುಕ್ ಮೂಲಕ ನೋಡುಗರ ಗಮನವನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಲ್ಯಾಕ್ ವೆಲ್ವೆಟ್ ಗೌನ್‌ನಲ್ಲಿ ಮಿಂಚಿದ ಡಿಪ್ಪಿ
ಡೀಪ್ ನೆಕ್ ಲಾಂಗ್ ವೆಲ್ವೆಟ್ ಗೌನ್ ಅದಕ್ಕೆ ಮ್ಯಾಚ್ ಆಗುವಂತೆ ಕಾರ್ಟೈಯರ್ ನೆಕ್‌ಪೀಸ್(ನೆಕ್ಲೆಸ್) ಧರಿಸಿ ಗಮನ ಸೆಳೆದರು. ಅವರು ಈ ಅವಾರ್ಡ್ ಫಕ್ಷನ್‌ಗೆ ಕಸ್ಟಮ್ ಮೇಡ್ ಕ್ಲಾಸಿಕ್ ಲೂಯಿಸ್ ವೈಯಟನ್ ಬಾಲ್‌ಗೌನ್ ಆಯ್ಕೆ ಮಾಡಿದ್ದರು.
ಆಸ್ಕರ್ ಫಂಕ್ಷನ್‌ಗೆ ಆಗಮನಿಸಿದ ಸೆಲೆಬ್ರಿಟಿಗಳಲ್ಲಿ ದೀಪಿಕಾ ಪಡುಕೋಣೆ ಡ್ರೆಸ್ಸಿಂಗ್ ತುಂಬಾನೇ ಗಮನ ಸೆಳೆಯಿತು, ಹಲವು ಮೀಡಿಯಾಗಳು ಬೆಸ್ಟ್ ಡ್ರೆಸ್ಸಿಮಗ್ ಹೊಗಳಿದ್ದಾರೆ. ಡ್ರೆಸ್ಸಿಂಗ್‌ಗೆ ಮ್ಯಾಚ್ ಆಗುವಂತೆ ಡೈಮಂಡ್ ಬ್ರಾಸ್ಲೆಟ್, ಡೈಮಂಡ್ ರಿಂಗ್ ಧರಿಸಿದ್ದರು.
ಕಿವಿಯೋಲೆ ಇಲ್ಲದೆ ಮಿನಿಮಮ್ ಲುಕ್‌ನಲ್ಲಿ ಕಂಗೊಳಿಸಿದ ದೀಪಿಕಾ
ದೀಪಿಕಾ ಮೇಕಪ್ ಲುಕ್ ಗಾಢವಾಗಿರಲಿಲ್ಲ, ಬಣ್ಣದ ಲಿಪ್‌ಸ್ಟಿಕ್, ಡಾರ್ಕ್ ಕಾಜಲ್ ಹಾಕಿರಲಿಲ್ಲ, ನ್ಯಾಚುರಲ್ ಬ್ಯೂಟಿ ಟಚ್‌ನಲ್ಲಿ ಆಕರ್ಷಕವಾಗಿ ಕಂಡರು.
ತುರುಬಿನ ಹೇರ್ ಸ್ಟೈಲ್
ಹಾಗೇ ನೋಡಿದರೆ ದೀಪಿಕಾ ಪಡುಕೋಣೆ ತುಂಬಾನೇ ಆಕರ್ಷಕವಾಗಿ ಕಾಣುತ್ತಿದ್ದರು. ಆದರೆ ಅವರ ಹೇರ್‌ಸ್ಟೈಲ್ ಮಾತ್ರ ಗಮನಿಸಿದರೆ ತಲೆ ಬಾಚದೆ ತುರುಬು ಕಟ್ಟಿದಂತೆ ಕಾಣುತ್ತಿತ್ತು. ಅವರ ಹೇರ್ ಸ್ಟೈಲ್ ಆರ್ಟಿಸ್ಟ್ ಅವರ ಹೇರ್‌ಸ್ಟೈಲ್ ಇನ್ನೂ ಆಕರ್ಷಕವಾಗಿ ಮಾಡಬಹುದಿತ್ತು. ದೀಪಿಕಾ ಡ್ರೆಸ್ಸಿಂಗ್ ಹಾಗೂ ಲುಕ್‌ನಿಂದಾಗಿ ಹೇರ್‌ಸ್ಟೈಲ್ ಚೆನ್ನಾಗಿಲ್ಲದಿದ್ದರೂ ತುಂಬಾನೇ ಆಕರ್ಷಕವಾಗಿ ಕಾಣುತ್ತಿದ್ದಾರೆ.
ಸಮಾರಂಭಾಗಳಲ್ಲಿ ಸದಾ ಆಕರ್ಷಕ ಡ್ರೆಸ್ಸಿಂಗ್‌ನಲ್ಲಿ ಗಮನ ಸೆಳೆಯುವ ದೀಪಿಕಾ
ಯಾವುದೇ ಸಮಾರಂಭವಿರಲಿ ದೀಪಿಕಾ ಪಡುಕೋಣೆ ಆಕರ್ಷಕ ವಿನ್ಯಾಸದ ಉಡುಪು ಧರಿಸುವ ಮೂಲಕ ಗಮನ ಸೆಳೆಯುತ್ತಾರೆ.



Click it and Unblock the Notifications



