Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಮದುವೆಯಲ್ಲಿ ಗಮನ ಸೆಳೆದ ಲವ್ ಮಾಕ್ಟೇಲ್ ಬ್ಯೂಟಿಯ 4 ವಿಭಿನ್ನ ಲುಕ್
ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಫೆ.14ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ಪ್ರೇಮಿಗಳ ದಿನದಂದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಲು-ಜೇನಿನಂತೆ ಈ ಜೋಡಿಯ ವೈವಾಹಿಕ ಜೀವನ ಸಿಹಿಯಾಗಿರಲಿ, ಸುಖವಾಗಿ ಬಾಳಲಿ ಎಂದು ಕನ್ನಡ ಬೋಲ್ಡ್ ಸ್ಕೈಯ ಹಾರೈಕೆಗಳು.
ಸೆಲೆಬ್ರಿಟಿಗಳ ಮದುವೆಯೆಂದ ಮೇಲೆ ಅವರ ಡ್ರೆಸ್ಸಿಂಗ್ ಕೂಡ ಗಮನ ಸೆಳೆಯುತ್ತದೆ. ಮಿಲನಾ ಅವರ ಮದುವೆ ಡ್ರೆಸ್ಸಿಂಗ್‌ನಲ್ಲೂ ಯೂನಿಕ್‌ನೆಸ್ ಎದ್ದು ಕಾಣ್ತಾ ಇತ್ತು. ಮದುವೆಯಲ್ಲಿ ಸಾಂಪ್ರದಾಯಕ ಸೀರೆಯಲ್ಲಿ ಮಿಂಚಿದ ಮಿಲನಾ ತುಂಬಾ ಸರಳವಾದ ಡ್ರೆಸ್ಸಿಂಗ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತಿದ್ದರು.
ಮದುವೆಯಲ್ಲಿ ಮಿಲನಾ ನಾಲ್ಕು ಬಗೆಯ ಡ್ರೆಸ್ಸಿಂಗ್‌ನಲ್ಲಿ ಮಿಂಚಿದ್ದು ಅವರ ನಾಲ್ಕು ಲುಕ್ ಇಲ್ಲಿದೆ ನೋಡಿ:

ಹಸಿರು ಸೀರೆಯಲ್ಲಿ ಮದುಮಗಳು
ಮದುವೆಯಲ್ಲಿ ಮಿಲನಾ ಧರಿಸಿದ ಈ ಹಸಿರು ಸೀರೆಯ ಲುಕ್ ಫ್ಯಾಷನ್ ಪ್ರಿಯರ ಮನ ಗೆದ್ದಿದೆ. ಹಸಿರು ಸೀರೆ, ಅದಕ್ಕೊಪ್ಪುವಂತೆ ಒಂದು ಚಿಕ್ಕ ನೆಕ್ಲೆಸ್, ಒಂದು ದೊಡ್ಡ ಪೆಂಡೆಂಟ್‌ನ ನೆಕ್ಲೆಸ್ ಧರಿಸಿದ್ದು, ಜಿಮುಕಿ ಧರಿಸಿ, ಅದಕ್ಕೊಂದು ಮಾಟಿ ಧರಿಸಿದ್ದಾರೆ ಕೈಗಳಿಗೆ ಹಸಿರು ಬಳಿಯ ಧರಿಸಿದ್ದಾರೆ. ಈ ಮೂಲಕ ಓಲ್ಡ್ ಲುಕ್ ಅನ್ನು ಮತ್ತೆ ಟ್ರೆಂಡಿಗೆ ತಂದಿದ್ದಾರೆ ಮಿಲನಾ.
ಈ ಫ್ಯಾಷನ್ ಹೊಸತಲ್ಲ, ಹಿಂದೆ ಬಹುತೇಕ ವಿಶೇಷ ಸಂದರ್ಭದಲ್ಲಿ ಈ ರೀತಿಯ ಡ್ರೆಸ್ಸಿಂಗ್ ಮಾಡ್ತಾ ಇದ್ದರು, ಇತ್ತೀಚೆಗೆ ಅದು ಕಣ್ಮರೆಯಾಗುತ್ತು, ನಮ್ಮ ಸಾಂಪ್ರದಾಯಕ ಲುಕ್‌ಗೆ ಮಾರ್ಡನ್ ಟಚ್ ಬಂದಿತ್ತು, ಆದರೆ ಮಿಲನಾ ಅದೇ ಸಾಂಪ್ರದಾಯಕ ಲುಕ್‌ನಲ್ಲಿ ಮಿಂಚುವ ಮೂಲಕ ಗಮನ ಸೆಳೆದಿದ್ದಾರೆ.
ಇವರ ಈ ಡ್ರೆಸ್ಸಿಂಗ್ ಸ್ಟೈಲ್ ಸಾಕಷ್ಟು ಜನರು ಅನುಸರಿಸುವಲ್ಲಿ ಯಾವುದೇ ಡೌಟಿಲ್ಲ...

ಗೋಲ್ಡನ್ ಪುಲ್ಕಾದ ಬಿಳಿ ಸೀರೆ
ಇದರಲ್ಲಿ ಮಿಲನಾ ಮಾಡರ್ನ್ ನಾರಿಯಾಗಿ ಮಿಂಚಿದ್ದಾರೆ. ಕಿವಿಗೆ ದೊಡ್ಡ ಓಲೆ ಬಿಟ್ಟರೆ ಬೇರೆ ಯಾವುದೇ ಆಭರಣ ಧರಿಸಿಲ್ಲ, ಈ ಲುಕ್‌ನಲ್ಲಿ ಸಕರ್ ಸ್ಟೈಲಿಷ್ ಆಗಿ ಕಾಣ್ತಾ ಇದ್ದಾರೆ.

ಘಾಗ್ರ ಲುಕ್
ಮಿಲನಾ ಅವರು ಮತ್ತೊಂದು ಡ್ರೆಸ್ಸಿಂಗ್‌ನಲ್ಲಿ ಘಾಗ್ರ ಲುಕ್‌ನಲ್ಲಿ ಮಿಂಚಿದ್ದಾರೆ. ಇದರಲ್ಲೂ ಅಷ್ಟೆ ಅವರ ಸರಳವಾದ ಡ್ರೆಸ್ಸಿಂಗ್ ಸ್ಟೈಲೇನಲ್ಲಿ ಮಿಂಚಿದ್ದಾರೆ. ಸಿಂಪಲ್ ಡ್ರೆಸ್ಸಿಂಗ್ ಇಷ್ಟ ಪಡುವವರಿಗೆ ಮಿಲನಾ ಅವರ ಈ ಡ್ರೆಸ್ಸಿಂಗ್ ಸ್ಟೈಲ್ ಖಂಡಿತ ಇಷ್ಟವಾಗುವುದು.

ಬೂದು ಬಣ್ಣದ ಸೀರೆಯಲ್ಲಿ ಮಿಂಚಿದ ಮದುಮಗಳು
ಬೂದು ಬಣ್ಣದ ರೇಷ್ಮೆಗೆ ಗೋಲ್ಡನ್ ವರ್ಕ್ ಇದ್ದು ಆ ಸೀರೆ ಅವರು ಧರಿಸಿದ ಗ್ರ್ಯಾಂಡ್ ಆಭರಣ ಮತ್ತಷ್ಟು ಮೆರಗು ನೀಡಿದೆ. ಅವರ ಮದುವೆ ಲುಕ್ ಓವ್ ಎನ್ನುವಂತಿದೆ.



Click it and Unblock the Notifications