Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರಶ್ಮಿಕಾ ಮಂದಣ್ಣ ಲುಕ್, ತಾಪಸಿ ಪನ್ನು ಲುಕ್ ಹೇಗಿದೆ ನೋಡಿ
ಭಾರತದ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ಶೋಗಳಲ್ಲಿ ಒಂದಾಗಿರುವ ಲ್ಯಾಕ್ಮೆ ಫ್ಯಾಷನ್ ವೀಕ್ ನಡೆಯುತ್ತಿದೆ. ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಈ ಶೋದಲ್ಲಿ ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದರು. ದಕ್ಷಿಣ ಭಾರತ ಹಾಗೂ ಬಾಲಿವುಡ್‌ನಲ್ಲಿ ಜನಪ್ರಿಯ ನಟಿಯಾಗಿರುವ ರಷ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದಾರೆ, ಬ್ಲ್ಯಾಕ್, ಗೋಲ್ಡನ್ ಬಣ್ಣದ ಸೀರೆಯಲ್ಲಿ ತುಂಬಾನೇ ಕ್ಯೂಟ್ ಆಗಿ ಕಾಣಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇನ್ನು ಬಾಲಿವುಡ್ ನಟಿ ತಾಪಸಿ ಪನ್ನು ಕೂಡ ಡೀಪ್ ಕ್ಲೀವ್‌ನ ವೈನ್ ರೆಡ್ ಲಾಂಗ್ ಗೌನ್‌ನಲ್ಲಿ ಗಮನ ಸೆಳೆದಿದ್ದಾರೆ. ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಇವರಿಬ್ಬರ ಫ್ಯಾಷನ್ ಝಲಕ್ ಹೀಗಿತ್ತು ನೋಡಿ:

ಬ್ಲ್ಯಾಕ್ , ಗೋಲ್ಡನ್ ಮಿಶ್ರಿತ ಸೀರೆಗೆ ಮಾಡರ್ನ್ ಟಚ್
ರಶ್ಮಿಕಾ ಮಂದಣ್ಣ ಬ್ಲ್ಯಾಕ್ ಗೋಲ್ಡನ್ ಮಿಶ್ರಿತ ಸೀರೆಯನ್ನು ಸ್ವಲ್ಪ ವಿಭಿನ್ನವಾಗಿ ಉಡುವ ಮೂಲಕ ಗಮನ ಸೆಳೆದಿದ್ದಾರೆ. ಮಾಮೂಲಿ ಸೀರೆ ರೀತಿ ಉಟ್ಟು ಅದರ ಸೆರಗನ್ನು ವಿಭಿನ್ನವಾಗಿ ಹಾಕುವ ಮೂಲಕ ಸಕತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಸೊಂಟಕ್ಕೆ ಗೋಲ್ಡನ್ ಕಲರ್ ಸೊಂಟ ಪಟ್ಟಿ ಹಾಕಿದ್ದಾರೆ.

ಬ್ಲ್ಯಾಕ್ ಸೀರೆಗೆ ಮ್ಯಾಚಿಂಗ್ ಗೋಲ್ಡನ್ ಟಾಪ್
ಇದನ್ನು ಬ್ಲೌಸ್ ಅನ್ನುವ ಬದಲಿಗೆ ಟಾಪ್ ಅನ್ನಬಹುದು, ಟಾಪ್ ರೀತಿ ಧರಿಸಿ ಅದರ ಮೇಲೆ ಸೀರೆಯ ಸೆರಗನ್ನು ಭಿನ್ನವಾಗಿ ಸುತ್ತುವ ಮೂಲಕ ತುಂಬಾನೇ ವಿಭಿನ್ನ ಲುಕ್‌ನಲ್ಲಿ ಮಿಂಚಿದ್ದಾರೆ.

ಫ್ಯಾಷನಿಷ್ಟಾ ಲುಕ್‌ನಲ್ಲಿ ರಶ್ಮಿಕಾಮಂದಣ್ಣ
ತಲೆಗೆ ತುರುಬು ಕಟ್ಟಿ, ಕಿವಿಗೆ ದೊಡ್ಡ ಓಲೆ, ಒಂದು ಕೈಗೆ ದೊಡ್ಡ ಬಳೆ, ಗೋಲ್ಡನ್ ಬಣ್ಣದ ಹೈ ಹೀಲ್ಡ್ ಚಪ್ಪಲಿ, ಡೋ ಐ ಮ್ಯಾಕಪ್‌ನಲ್ಲಿ ಸಕತ್ ಫ್ಯಾಷನಿಷ್ಟಾ ಆಗಿ ಕಾಣಿಸಿಕೊಂಡಿದ್ದಾರೆ.

ಶಿಮ್ಮರಿಂಗ್ ರೆಡ್‌ವೈನ್ ಲುಕ್‌ನಲ್ಲಿ ತಪಾಸಿ ಪನ್ನು
ಶೋ ಟಾಪರ್ ಆಗಿ ಕಾಣಿಸಿಕೊಂಡಿದ್ದ ತಾಪಸಿ ಪನ್ನು ಫ್ರೀ ಕರ್ಲಿ ಹೇರ್, ದೊಡ್ಡ ಗೋಲ್ಡನ್ ನೆಕ್ಲೇಸ್‌ನಲ್ಲಿ ತಾಪಸಿ ಪನ್ನು ಲುಕ್ ಹೋಗಿತ್ತು ನೋಡಿ.



Click it and Unblock the Notifications
