Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಗೌರಿ-ಗಣೇಶ ಹಬ್ಬದಲ್ಲಿ ಮಿರ-ಮಿರ ಮಿಂಚಿದ ಬಿಗ್ ಬಾಸ್ ಸೆಲೆಬ್ರಿಟಿಗಳು
ಹಬ್ಬ ಬಂತೆಂದರೆ ಸಾಂಪ್ರದಾಯಿಕ ಉಡುಗೆಗಳತ್ತ ನಮ್ಮ ಗಮನ ಹೆಚ್ಚುವುದು. ಹಬ್ಬಗಳಲ್ಲಿ ಸಾಂಪ್ರದಾಯಿಕ ಉಡುಗೆಗಳು ತುಂಬುವ ಮೆರಗು ಮಾಡರ್ನ್ ಡ್ರೆಸ್ಸಿಂಗ್‌ನಲ್ಲಿ ಸಿಗಲ್ಲ. ಹೆಣ್ಮಕ್ಕಳು ಸೀರೆ, ದಾವಣಿ, ಲಂಗ, ಬ್ಲೌಸ್ ಈ ರೀತಿ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಓಡಾಡುತ್ತಿದ್ದರೆ ತುಂಬಾ ಲಕ್ಷಣವಾಗಿ ಕಾಣುತ್ತಾರೆ.

ಗೌರಿ-ಗಣೇಶ ಹಬ್ಬವನ್ನು ನಾಡಿನಾದ್ಯಂತ ತುಂಬಾ ಅದ್ಧೂರಿಯಿಂದ ಅಲ್ಲದಿದ್ದರೂ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಕರೋನಾ ಕಾರಣದಿಂದಾಗಿ ಈ ಹಿಂದೆ ಬೀದಿ-ಬೀದಿಗಳಲ್ಲಿ ಗಣಪನ ಕೂರಿಸಲು ಅವಕಾಶ ನೀಡಲಿಲ್ಲ. ಆದ್ದರಿಂದ ಹೆಚ್ಚಿನವರು ತಮ್ಮ ಮನೆಯಲ್ಲಿಯೇ ಹಬ್ಬ ಮಾಡಿ ಸಂಭ್ರಮಿಸಿದ್ದಾರೆ.
ಇನ್ನು ತಾರೆಯರು ಕೂಡ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ. ಈ ನಟಿಯರು ಗೌರಿ ಹಬ್ಬದಂದು ಎಷ್ಟು ಆಕರ್ಷಕವಾಗಿ ಡ್ರೆಸ್ಸಿಂಗ್ ಮಾಡಿ, ಗಮನ ಸೆಳೆದಿದ್ದಾರೆ ನೋಡಿ:

ಶುಭ ಪೂಂಜಾ
ತೆಳು ಗುಲಾಬಿ ಸೀರೆ, ದೊಡ್ಡ ಜಿಮುಕಿ, ನೆತ್ತಿರ, ನೆಕ್ಲೇಸ್, ದೊಡ್ಡ ಮೂಗುತಿ ಧರಿಸಿ ಸಾಂಪ್ರದಾಯಿಕ ಚೆಲುವಿನಲ್ಲಿ ಮಿಂಚಿದ ಶುಭ ಪೂಂಜಾ.

ದಿವ್ಯಾ ಸುರೇಶ್
ಹಸಿರು ಲಂಗದ ಹುಡುಗಿಯಾದ ದಿವ್ಯಾ ಸುರೇಶ್. ಬಿಗ್‌ಬಾಸ್‌ನಲ್ಲಿರುವಾಗಲೂ ತಮ್ಮ ಡ್ರೆಸ್ಸಿಮಗ್ ಸ್ಟೈಲ್‌ನಿಂದ ಗಮನ ಸೆಳೆಯುತ್ತಿದ್ದ ದಿವ್ಯಾ ಸುರೇಶ್ ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಲಂಗ-ದಾವಣಿಯಲ್ಲಿ ಹೇಗೆ ಮಿಂಚಿದ್ದಾರೆ ನೋಡಿ.

ವೈಷ್ಣವಿ
ನೀಲಿ ಬಣ್ಣದ ಸ್ಯಾರಿಗೆ ಗ್ರ್ಯಾಂಡ್ ವರ್ಕ್‌ನ ಕೆಂಪು ಬ್ಲೌಸ್ ತೊಟ್ಟು ತುಂಬಾ ಗ್ರ್ಯಾಂಡ್ ಆಗಿ ಕಾಣುತ್ತಿರುವ ವೈಷ್ಣವಿ ಮುದ್ದು ಗಣೇಶನ ಕೈಯಲ್ಲಿ ಹಿಡಿದ ಲಕ್ಷ್ಮಿಯಂತೆ ಕಂಗೊಳಿಸುತ್ತಿದ್ದಾರೆ ಅಲ್ವಾ?

ಚಂದ್ರಿಕಾ
ಪಿಂಕ್ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸಿದ ಚಂದ್ರಿಕಾ.

ಅನುಪಮಾ ಗೌಡ
ಹಬ್ಬದ ಸಮಯದಲ್ಲಿ ಹಳ್ಳಿ ಹುಡುಗಿಯ ಡ್ರೆಸ್ಸಿಂಗ್‌ನಲ್ಲಿ ಮಿಂಚಿದ ನಿರುಪಮಾ ಗೌಡ.

ನಿವೇದಿತಾ ಗೌಡ
ಸದಾ ಗೌನ್‌ನಲ್ಲಿ ಮಿಂಚುತ್ತಿದ್ದ ನಿವೇದಿತಾ ಗೌಡ ಗೌರಿ-ಗಣೇಶ ಹಬ್ಬದಲ್ಲಿ ಲಂಗ-ದಾವಣಿಯಲ್ಲಿ ಕಂಗೊಳಿಸಿದ್ದಾರೆ.



Click it and Unblock the Notifications
