Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಇಶಾ ಅಂಬಾನಿ ಮದುವೆಯ ಲೆಹೆಂಗಾದ ಬೆಲೆ ಅಷ್ಟೊಂದಾ? ವಿಶೇಷತೆ ಏನು?
ಭಾರತದಲ್ಲಿ ಕುಬೇರರ ಫ್ಯಾಮಿಲಿ ಅಂದ್ರೆ ಅದು ಅಂಬಾನಿ ಫ್ಯಾಮಿಲಿ. ಹೌದು, ಅಂಬಾನಿ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದ್ರು ಅಲ್ಲಿ ರಾಜ ವೈಭೋಗವಿರುತ್ತೆ. ಅದ್ರಲ್ಲೂ ಇಶಾ ಅಂಬಾನಿ ಮದುವೆಗೆ ಮುಖೇಶ್ ಅಂಬಾನಿ ನೀರಿನಂತೆ ದುಡ್ಡು ಸುರಿದು ಅದ್ಧೂರಿಯಾಗಿ ಮದುವೆ ಮಾಡಿದ್ರು. ದೇವಲೋಕವನ್ನೇ ಧರೆಗಿಳಿಸಿದಂತಿತ್ತು ಆ ವೈಭವ.

ಅಷ್ಟಕ್ಕೂ ಮದುವೆಯಾಗಿ 5 ವರ್ಷ ಕಳೆದ ನಂತರ ಇಶಾ ಅಂಬಾನಿ ಮತ್ತೆ ತಮ್ಮ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹೌದು, ಇಶಾ ಅಂಬಾನಿ ಬದಲಿಗೆ ಮದುವೆಯಲ್ಲಿ ಅವರು ಧರಿಸಿದ್ದ ಲೆಹೆಂಗಾ ಹೆಚ್ಚು ಸದ್ದು ಮಾಡ್ತಿದೆ. ಅಷ್ಟಕ್ಕು ಇಶಾ ಅಂಬಾನಿ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾ ಎಷ್ಟು ಬೆಲೆಬಾಳುತ್ತೆ? ಇಷ್ಟೊಂದು ದುಬಾರಿ ಲೆಹೆಂಗಾ ಖರೀದಿಸಿದ್ಯಾಕೆ? ಇದರ ವಿಶೇಷತೆ ಏನು? ಹೇಳ್ತೀವಿ.
700 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದಿತ್ತು ಅದ್ಧೂರಿ ಮದುವೆ
2018 ರಲ್ಲಿ ಇಶಾ ಅಂಬಾನಿಯವರು ಉದ್ಯಮಿ ಆನಂದ್ ಪಿರಾಮಲ್ ಅವರನ್ನು ವಿವಾಹವಾಗಿದ್ರು. ಸದ್ಯ ಆ ಜೋಡಿ ಅವಳಿ ಮಕ್ಕಳನ್ನು ಹೊಂದಿದ್ದಾರೆ. ಇಶಾ ಅಂಬಾನಿ ಮದುವೆಗೆ ಮುಖೇಶ್ ಅಂಬಾನಿ ಬರೋಬ್ಬರೊ 700 ಕೋಟಿ ರೂಪಾಯಿಯನ್ನು ಸುರಿದಿದ್ರು. ಅದ್ರಲ್ಲೂ ಮುಖ್ಯವಾಗಿ ಮದುವೆಯ ದಿನ ಇಶಾ ಅಂಬಾನಿ ಧರಿಸಿದ್ದ ಲೆಹೆಂಗಾಕ್ಕೆ ಬರೋಬ್ಬರಿ 90 ಕೋಟಿ ಖರ್ಚು ಮಾಡಿ ಡಿಸೈನ್ ಮಾಡಲಾಗಿತ್ತಂತೆ. ಇದೇ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
90 ಕೋಟಿ ಲೆಹೆಂಗಾದ ವಿಶೇಷತೆ ಏನು?
ಹೌದು, 90 ಕೋಟಿ ಲೆಹೆಂಗಾದಲ್ಲಿ ಅಂತಹ ವಿಶೇಷತೆ ಏನು ಇರಬಹುದು ಅಂತ ನೀವು ಅಂದುಕೊಳ್ತಿರ್ಬಹುದು. ಇಶಾ ಅಂಬಾನಿ ಮದುವೆಗೆ ಧರಿಸಿದ್ದ ಲೆಹೆಂಗಾವನ್ನು ಅಬು ಜಾನಿ ಸಂದೀಪ್ ಕೋಸ್ಲಾ ಎನ್ನುವವರು ಡಿಸೈನ್ ಮಾಡಿದ್ರು. ಈ ಲೆಹೆಂಗಾದಲ್ಲಿ ಆಕೆಯ ತಾಯಿ ನೀತಾ ಅಂಬಾನಿಯ ಮದುವೆಯ ವಸ್ತ್ರವನ್ನು ಸೇರಿಸಿ ಡಿಸೈನ್ ಮಾಡಿರೋದು ವಿಶೇಷ. ಇಶಾ ಅಂಬಾನಿ ಮದುವೆ ಲೆಹೆಂಗಾದಲ್ಲಿ ತಮ್ಮ ಅಮ್ಮನಿಗೆ ಗೌರವ ಪೂರ್ವಕವಾಗಿ ಅವರ ಮದುವೆಯ ಬಟ್ಟೆಯಿಂದ ಡಿಸೈನ್ ಮಾಡಲಾದ ದುಪ್ಪಟ್ಟವನ್ನು ತಲೆಯ ಮೇಲೆ ಧರಿಸಿದ್ರು. ಈ ಧಿರಿಸು ಬಿಳಿ ಬಣ್ಣದಲ್ಲಿ ಕಂಗೊಳಿಸುತ್ತಿತ್ತು.
ಇನ್ನೂ ಇಶಾ ಅಂಬಾನಿ ಮದುವೆಗೆ ಎರಡು ದುಪ್ಪಟ್ಟಗಳನ್ನು ಬಳಸಲಾಗಿತ್ತು. ಒಂದು ದುಪ್ಪಟ್ಟ ತಲೆಯ ಮೇಲೆ ಹಾಗೂ ಮತ್ತೊಂದನ್ನು ಹೆಗಲ ಮೇಲೆ ಧರಿಸಿ ದೇಹದ ಮುಂಭಾಗ ಕವರ್ ಮಾಡ್ಕೊಂಡಿದ್ರು. ಕೋಟ್ಯಾಧೀಶ್ವರರಾದ್ರು ಅಮ್ಮನ ನೆನಪಿಗಾಗಿ 35 ವರ್ಷ ಹಳೆಯ ಬಟ್ಟೆಯಿಂದ ಮಾಡಿದ ದುಪ್ಪಟ್ಟ ಧರಿಸಿದ್ದೇ ಇಲ್ಲಿ ವಿಶೇಷ. ಇನ್ನೂ ಇಶಾ ಅಂಬಾನಿ ಮದುವೆಗೆ ಬಾಲಿವುಡ್ ಗಣ್ಯರು, ಕ್ರಿಕೆಟ್ ತಾರೆಯರು, ರಾಜಕಾರಣಿಗಳು ಸೇರಿದಂತೆ ಗಣ್ಯಾತಿ ಗಣ್ಯರೇ ಭಾಗಿಯಾಗಿದ್ರು.
ಸದ್ಯದಲ್ಲೇ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಅವರು ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚಂಟ್ ಜೊತೆಗೆ ವಿವಾಹವಾಗಲಿದ್ದಾರೆ. ಇದು ಅಂಬಾನಿ ಕುಟುಂಬದ ಮೂರನೇಯ ಅದ್ಧೂರಿ ಮದುವೆಯಾಗಲಿದೆ. ಈ ಅದ್ಧೂರಿ ಲೆಹೆಂಗಾದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.



Click it and Unblock the Notifications



