Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಅಮ್ಮನ ಮದುವೆ ಸೀರೆಯ ನೆನೆಪನ್ನು ಮರುಸೃಷ್ಟಿಸಲು ಇಲ್ಲಿದೆ ಸಿಂಪಲ್ ಟಿಪ್ಸ್..!
ಹೆಣ್ಣು ಮಕ್ಕಳಿಗೆ ಅಮ್ಮ ಎಂದರೆ ಅದೇನೋ ಬಿಡಿಸಲಾದ ಸುಂದರ ಬಂಧ. ಅದರಲ್ಲೂ ಅಮ್ಮನಿಗೆ ತನ್ನ ಮದುವೆಯ ನೆನಪುಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವುದೆಂದರೆ ಬಲು ಇಷ್ಟ. ಇತ್ತೀಚಿನ ದಿನಗಳಲ್ಲಿ ಹೆಂಗಳೆಯರು ಅಮ್ಮನ ಮದುವೆ ಸೀರೆಯ ಲುಕ್ ಅನ್ನ ಮರುಸೃಷ್ಟಿಸುತ್ತಿದ್ದಾರೆ. (recreate)

Courtesy: Instagram
ಇತ್ತೀಚಿಗೆ ಸೋಶಿಯಲ್ ಮಿಡಿಯಾದಲ್ಲಿ ಅಮ್ಮನ ಸೀರೆಯ ಲುಕ್ ರಿಕ್ರಿಯೇಟ್ ಮಾಡೋದು ಒಂದು ರೀತಿ ಟ್ರೆಂಡ್ ಆಗ್ಬಿಟ್ಟಿದೆ.
ಆದ್ರೆ ಕೆಲವು ಜನರಲ್ಲಿ ಅಮ್ಮನ ಸೀರೆಗಳು ಇದ್ದರೂ ಕೂಡ ಅದನ್ನು ಉಡಲು ಸಾಧ್ಯವಾಗ್ತಿಲ್ಲ. ಅಥವಾ ಬೇರೆ ಯಾವುದೋ ಕಾರಣದಿಂದ ಸೀರೆಯನ್ನ ಬಳಕೆ ಮಾಡೋದಿಕ್ಕೆ ಆಗ್ತಿಲ್ಲ ಅನ್ನೋರು ಬೇಸರ ಪಡೋದು ಬೇಡ. ಹಳೆಯ ಸೀರೆಗಳನ್ನು ಯಾವ ರೀತಿ ರಿಕ್ರಿಯೇಟ್ ಮಾಡಬಹುದು ಅನ್ನೋ ಟಿಪ್ಸ್ ಕೊಡ್ತೀವಿ ಜಸ್ಟ್ ಫಾಲೋ ಮಾಡಿ.

1. ಸೀರೆಗೆ ಅನಾರ್ಕಲಿ ಲುಕ್ ನೀಡಿ
ಇಪ್ಪತ್ತು-ಇಪ್ಪತ್ತೈದು ವರ್ಷ ಹಳೆಯದಾದ ಸೀರೆಗಳು ಕೆಲವೊಂದು ಬಾರಿ ಉಡುವ ಪರಿಸ್ಥಿತಿಯಲ್ಲಿ ಇರೋದಿಲ್ಲ. ಇಂತಹ ವೇಳೆ ಸೀರೆಯನ್ನು ಅನಾರ್ಕಲಿಯಾಗಿ ಬದಲಾಯಿಸಬಹುದು. ಸೀರೆಗೆ ಹೊಂದುವ ರವಕೆಯನ್ನ(Blouse) ಟೈಲರ್ ಬಳಿ ನಿಮಗೆ ಹೊಂದುವ ರೀತಿಯಲ್ಲಿ ಹೊಲಿಸಿಕೊಳ್ಳಬಹುದು.

2. ಹಳೆ ಬಟ್ಟೆಗೆ ಹೊಸ ಟಚ್ ಕೊಡಿ
ಸೀರೆಯ ಕೆಲಭಾಗಗಳನ್ನು ನಿಮ್ಮ ಹೊಸ ಲೆಹೆಂಗಾದೊಂದಿಗೆ ಸೇರಿಸಿ ಅದಕ್ಕೆ ಹೊಸ ಲುಕ್ ಬರುವಂತೆ ವಿನ್ಯಾಸಗೊಳಿಸಿ. ಇಂತಹ ಬಟ್ಟೆಗಳನ್ನು ನೀವು ರೆಸೆಪ್ಷನ್ ಅಥವಾ ಬೇರೆ ಬೇರೆ ಕಾರ್ಯಕ್ರಮಗಳಿಗೂ ಧರಿಸಬಹುದು.

3. ದುಪ್ಪಟ್ಟವಾಗಿ ಬಳಸಿ
ಮದುವೆಯಲ್ಲಿ ಅಮ್ಮನ ಸೀರೆಯನ್ನೇ ಉಡಬೇಕೆಂದು ಅನೇಕರು ಅಂದುಕೊಳ್ಳುತ್ತಿರುತ್ತಾರೆ. ಒಂದು ವೇಳೆ ಪೂರ್ತಿ ಸೀರೆಯನ್ನು ಉಡಲು ಸಾಧ್ಯವಾಗದಿದ್ದರೆ, ನಿಮ್ಮ ಔಟ್‌ಫಿಟ್‌ಗೆ ಹೊಂದುವ ರೀತಿಯಲ್ಲಿ ಸೀರೆಯ ಒಂದು ಭಾಗವನ್ನು ನಿಮ್ಮ ಔಟ್‌ಫಿಟ್‌ಗೆ ಹೊಂದುವ ರೀತಿಯಲ್ಲಿ ಡಿಸೈನ್ ಮಾಡಿಸಿಕೊಳ್ಳಿ. ದುಪ್ಪಟ್ಟವಾಗಿಯೂ ಬಳಸಬಹುದು.

4. ಸೀರೆಯನ್ನ ಲೆಹೆಂಗಾವಾಗಿ ಬದಲಿಸಿ
ಅಮ್ಮನ ಸೀರೆಯೊಂದಿಗೆ ಸಹಜವಾಗಿ ಹೆಣ್ಣು ಮಕ್ಕಳಿಗೆ ಭಾವನಾತ್ಮಕ ಸಂಬಂಧ ಇದ್ದೇ ಇರುತ್ತದೆ. ಒಂದು ವೇಳೆ ಮದುವೆಯಲ್ಲಿ ಆ ಸೀರೆಯನ್ನು ಉಡಲು ಸಾಧ್ಯವಾಗದಿದ್ದರೆ ಚಿಂತೆಯಿಲ್ಲ. ಸೀರೆಗೆ ಕಂಪ್ಲೀಟ್ ಲೆಹೆಂಗಾ ಲುಕ್ ನೀಡಿ ರಿಸೆಕ್ಷನ್‌ನಲ್ಲಿ ಮಿಂಚಬಹುದು.

5. ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಧರಿಸಬಹುದು
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಸೀರೆ ಉಡುವುದಿಲ್ಲ. ಆದರೆ ನಿಮ್ಮ ಅಮ್ಮನ ಸೀರೆಗೆ ವಿಧ ವಿಧದ ಟ್ರೆಂಡಿ ಲುಕ್ ನೀಡಿ ಬಳಸಿಕೊಳ್ಳಬಹುದು. ಸೀರೆಗೆ ಕುರ್ತಾ, ಚೂಡಿದಾರ್, ಘಾಗ್ರಾ, ಪೆಪ್ಲಂ ಕುರ್ತಾ ಲುಕ್ ನೀಡಬಹುದು. ವಿಶೇಷವಾಗಿ ಪೆಪ್ಲಂ ಲುಕ್ ತುಂಬಾನೇ ಸುಂದರವಾಗಿ ಕಾಣುವಂತೆ ಮಾಡುತ್ತದೆ.

6. ಹಳೆಯ ಸೀರೆ, ಮೇಕಪ್‌ನೊಂದಿಗೆ ರೆಟ್ರೋ ಲುಕ್
ಇಪ್ಪತ್ತೈದು ವರ್ಷದ ಹಿಂದಿನ ಸ್ಟೈಲ್‌ಗೂ ಈಗಿನ ಸ್ಟೈಲ್‌ಗೂ ಅಜಗಜಾಂತರ ವ್ಯತ್ಯಾಸವನ್ನು ನಾವು ಕಾಣಬಹುದಾಗಿದೆ. ಇತ್ತೀಚಿಗೆ ಅಂತಹ ಲುಕ್ ಕಣ್ಣಿಗೂ ಕಾಣಿಸೋದಿಲ್ಲ. ನೀವು ಅದೇ ಲುಕ್‌ನ ಮತ್ತೆ ಸೃಷ್ಟಿ ಮಾಡಬಹುದು. ಇಪ್ಪತ್ತೈದು ವರ್ಷದ ಹಿಂದೆ ಮಾಡುತ್ತಿದ್ದ ಮೇಕಪ್, ಸೀರೆ ಉಡುವ ಸ್ಟೈಲ್, ಆಗಿನ ಆಭರಣಗಳನ್ನು ತೊಟ್ಟು ಮಿಂಚಬಹುದು. ಇದೊಂತರ ಹೊಸ ಅನುಭವವನ್ನು ನೀಡುತ್ತದೆ.
ಅಮ್ಮನ ಮದುವೆ ಸೀರೆ ನೆನಪಿನಂಗಳದಲ್ಲಿ ಸೆಲೆಬ್ರಿಟಿಗಳು..!
ಸೆಲೆಬ್ರಿಟಿಗಳೇ ಮೊದಲು ಅಮ್ಮನ ಮದುವೆ ಸೀರೆಯನ್ನು ತಮ್ಮ ಮದುವೆ ಸಂದರ್ಭದಲ್ಲಿ ಉಟ್ಟು ಈ ಟ್ರೆಂಡ್‌ನ ಶುರು ಮಾಡಿರೋದು. ಅಷ್ಟಕ್ಕೂ ಯಾರೆಲ್ಲಾ ಅಮ್ಮನ ಮದುವೆ ನೆನಪನ್ನು ಮರುಕಳಿಸಿದ್ದಾರೆ ಅನ್ನೋದನ್ನ ನೋಡೋಣ.
ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಭಾರತೀಯ ಮತ್ತು ಕ್ರಿಸ್ಟಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಕ್ರಿಸ್ಟಿಯನ್ ಸಂಪ್ರದಾಯದಂತೆ ಅವರು ವಿವಾಹವಾದಾಗ ಅತ್ಯಂತ ಉದ್ದವಾದ ದುಪ್ಪಟ್ಟ ಧರಿಸಿ ಗಮನ ಸೆಳೆದಿದ್ದರು. ಈ ವೇಳೆ ಅವರ ಬಟ್ಟೆಯ ಮೇಲದ್ದ ಕಸೂತಿಗಳು ನಿಕ್ ಜೋನಸ್ ತಾಯಿ ತಮ್ಮ ಮದುವೆಯ ಸಮಯದಲ್ಲಿ ಧರಿಸಿದ್ದರಂತೆ.
ನೀತಾ ಅಂಬಾನಿಗೆ ತಮ್ಮ ಮಗಳು ಮದುವೆಯಲ್ಲಿ ನೀತಾ ಅಂಬಾನಿಯ ಮದುವೆ ಸೀರೆ ಧರಿಸಬೇಕೆಂಬ ಆಸೆ ಇಂತಂತೆ. ಹೀಗಾಗಿ ಡಿಸೈನರ್ ನೀತಾ ಅಂಬಾನಿ ಸೀರೆಯನ್ನ ಇಶಾ ಔಟ್‌ಫಿಟ್‌ಗೆ ಹೊಂದುವ ದುಪ್ಪಟ್ಟವನ್ನು ಡಿಸೈನ್ ಮಾಡಿದ್ರಂತೆ.
ನಟಿ ಯಾಮಿ ಗೌತಮಿ ಮದುವೆ ಲುಕ್ ಇತರ ಬಾಲಿವುಡ್ ಸೆಲೆಬ್ರಿಟಿಗಳಂತಿರಲಿಲ್ಲ. ಆಶ್ಚರ್ಯಕರವೆಂಬಂತೆ ಅವರು ತಮ್ಮ ಅಮ್ಮನ ಸೀರೆಯನ್ನೇ ಮದುವೆಯಲ್ಲಿ ಧರಿಸಿದ್ದರು. ಜೊತೆಗ ಅಜ್ಜಿ ನೀಡಿದ ಕೆಲ ಆಭರಣಗಳನ್ನು ಧರಿಸಿ ಮದುವೆಯಲ್ಲಿ ಮಿಂಚಿದ್ದರು.
ಬಾಲಿವುಡ್ ಸ್ಟೈಲಿಶ್ ಐಕಾನ್ ಸೋನಂ ಕಪೂರ್ ಅಮ್ಮನಂತೆ ತಮ್ಮ ಮದುವೆಯಲ್ಲಿ ಕೆಂಪು ಸೀರೆಯಲ್ಲಿ ಮುಂಚಿದ್ದರು. ಜೊತೆಗೆ ಸೋನಂ ತಮ್ಮ ಮದುವೆಯಲ್ಲಿ ಸುನೀತ ಕಪೂರ್ ಒಡವೆಗಳನ್ನು ಧರಿಸಿದ್ದರು.
ನೋಡ್ರಿದ್ರಲ್ಲ ಯಾವ ರೀತಿ ಹಳೆ ಸೀರೆಗೆ ಹೊಸ ಲುಕ್ ನೀಡಿ ಅಮ್ಮನ ಮದುವೆ ನೆನಪುಗಳನ್ನು ಮೆಲುಕು ಹಾಕಬಹುದು ಅನ್ನೋದನ್ನ ನೀವು ಕೂಡ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಬಹುದು.



Click it and Unblock the Notifications



