Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎದೆ, ಹೊಟ್ಟೆ ತೋರಿಸಿ ಡ್ರೆಸ್ಸಿಂಗ್ ಮಾಡಿದ್ದಕ್ಕೆ ಟ್ರೋಲ್‌ಗೆ ಒಳಗಾದ ಪಿಗ್ಗಿ
ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಸ್ಟೈಲ್ ವಿಷಯದಲ್ಲಿ ಆಗಾಗ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಕೆಲವೊಂದು ಫಂಕ್ಷನ್‌ಗಳಲ್ಲಿ ಅವರು ಧರಿಸುವ ಡ್ರೆಸ್ ನೋಡಿ ಫ್ಯಾಷನ್ ಪ್ರಿಯರು ಮೆಚ್ಚಿಕೊಂಡರೆ, ಇನ್ನು ಕೆಲವೊಮ್ಮೆ ಅಕೆಯ ಡ್ರೆಸ್ಸಿಂಗ್ ಸ್ಟೈಲ್ ನೋಡಿ ಹೀಗೂ ಡ್ರೆಸ್ಸಿಂಗ್ ಮಾಡಬಹುದೇ ಎಂಬಂತೆ ಡ್ರೆಸ್ ಹಾಕಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದೂ ಇದೆ.

ಇದೀಗ ಗ್ರ್ಯಾಮಿ ಅವಾರ್ಡ್ ಸಂದರ್ಭದಲ್ಲಿ ಆಕೆ ಧರಿಸಿದ ಡ್ರೆಸ್ಸಿಂಗ್ ಸ್ಟೈಲ್‌ನಿಂದ ಟ್ರೋಲ್‌ಗೆ ಒಳಗಾಗಿದ್ದಾರೆ. ಪತಿ ಜೋನಸ್ ಜೊತೆ 62ನೇ ಗ್ರ್ಯಾಮಿ ಅವಾರ್ಡ್‌ಗೆ ಬಂದಿದ್ದ ಪಿಗ್ಗಿ ಮೊದಲ ಔಟ್‌ಫಿಟ್‌ನಲ್ಲಿ ಆಕರ್ಷಕವಾಗಿ ಕಾಣಿಸುವ ಮೂಲಕ ಫ್ಯಾಷನ್ ಪ್ರಿಯರ ಮನಗೆದ್ದಿದ್ದರು. ಆದರೆ ಎರಡನೇ ಔಟ್‌ಫಿಟ್‌ನಲ್ಲಿ ನೋಡಿದವರು ಪ್ರಿಯಾಂಕಾಗೆ ಈ ರೀತಿಯ ಡ್ರೆಸ್ಸಿಂಗ್ ಬೇಕಿತ್ತಾ? ಎಂದು ಕೇಳುತ್ತಿದ್ದಾರೆ.
ಆಕೆ ಮೊದಲಿಗೆ ಧರಿಸಿದ್ದ ಲಾಂಗ್ ಸ್ಲಿಟ್ ಸಿಲ್ಕ್ ಗೌನ್ ಅನ್ನು ನಿಕೋಲಸ್ ಜೆಬ್ರಾನ್ ಡಿಸೈನ್ ಮಾಡಿದ್ದು, ಈ ಡ್ರೆಸ್‌ನಲ್ಲಿ ತುಂಬಾ ಆಕರ್ಷಕವಾಗಿ ಕಾಣಿಸಿದ್ದರು. ಡ್ರೆಸ್‌ಗೆ ತಕ್ಕ ಮೇಕಪ್ ಮಾಡಿದ್ದು, ಪಿಗ್ಗಿ ತುಂಬಾ ಆಕರ್ಷಕವಾಗಿ ಕಾಣುತ್ತಿದ್ದರು. ಆದರೆ ಎರಡನೇ ಔಟ್‌ಫಿಟ್‌ನಲ್ಲಿ ಮೇಕಪ್ ಚೆನ್ನಾಗಿದ್ದರೂ ಅವರು ಧರಿಸಿದ ಡ್ರೆಸ್ ಆಕೆಯ ಅಭಿಮಾನಿಗಳು ಸೇರಿದಂತೆ ಹೆಚ್ಚಿನವರಿಗೆ ಇಷ್ಟವಾಗಲಿಲ್ಲ.
ಎದೆ, ಹೊಟ್ಟೆ ಭಾಗವನ್ನು ತೋರಿಸುವ ಲಾಂಗ್ ಗೌನ್ ಧರಿಸಿದ್ದ ಪ್ರಿಯಾಂಕರನ್ನು ನೋಡಿ ನಟಿ ಜೆನ್ನಿಫರ್ ಲೋಫೆಜ್ ನೆನೆಸಿಕೊಂಡಿದ್ದಾರೆ. ಈಕೆ 20 ವರ್ಷಗಳ ಹಿಂದೆ ಐಕಾನಿಕ್ ಗ್ರೀನ್ ವರ್ವಸೇಸ್ ಡ್ರೆಸ್ ಧರಿಸಿ ಗಮನ ಸೆಳೆದಿದ್ದರೆ. ಇದೀಗ ಪ್ರಿಯಾಂಕರನ್ನು ಆಕೆಯೊಂದಿಗೆ ಹೋಲಿಸುತ್ತಾ ಆಕೆ ಕಂಡಷ್ಟೂ ಗ್ಲಾಮರಸ್ ಆಗಿ ಪ್ರಿಯಾಂಕಾ ಚೋಪ್ರಾ ಕಾಣ್ತಾ ಇಲ್ಲ, ಜೆನ್ನಿಫರ್ ಮೀರಿಸಲು ಪ್ರಿಯಾಂಕಾಗೆ ಸಾಧ್ಯವಿಲ್ಲ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಯಾರು ಏನೇ ಹೇಳಲಿ ಪ್ರಿಯಾಂಕಾ ಮಾತ್ರ ಎಂದಿನಂತೆ ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳದೆ ಸುಮ್ಮನಾಗಿದ್ದಾರೆ. ಸದಾ ಹೊಸ ಹೊಸ ಡ್ರೆಸ್ಸಿಂಗ್ ಡಿಸೈನ್ ಮೂಲಕ ಗಮನ ಸೆಳೆಯುವ ಪಿಗ್ಗಿಯ ಈ ಬಾರಿಯ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ನೀವೇನು ಹೇಳೋಕೆ ಇಷ್ಟಪಡುತ್ತೀರಿ.



Click it and Unblock the Notifications

