Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಈ ಹುಡ್ಗಿ ತನ್ನ ಕೂದಲನ್ನೇ ಡ್ರೆಸ್ ರೀತಿ ಬಳಸಿದ್ದಾಳೆ ನೋಡಿ : ವೀಡಿಯೋ ವೈರಲ್
ಈಕೆಯ ಡ್ರೆಸ್ ನೋಡಿ ತುಂಬಾ ಚೆನ್ನಾಗಿದೆಯಲ್ವಾ, ಕೂದಲಿಗೂ , ಡ್ರೆಸ್‌ಗೂ ಎಂಥ ಪರ್ಫೆಕ್ಟ್ ಕಾಂಬಿನೇಷನ್ ಅಂತ ನೀವಂದ್ಕೊಂಡಿದ್ದರೆ ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸಿ, ಆಕೆ ಧರಿಸಿರುವುದು ಡ್ರೆಸ್ ಅಲ್ಲ, ಬದಲಿಗೆ ಕೂದಲು.

ತನ್ನ ಕೂದಲನ್ನೇ ಉಡುಪಾಗಿ ಧರಿಸುವಷ್ಟು ಭಾಗ್ಯಶಾಲಿ ಈಕೆ. ಈಕೆಯನ್ನು ಅದೃಷ್ಟಶಾಲಿ ಅಂದಿರುವುದು ಈ ರೀತಿಯ ಕೂದಲು ಎಲ್ಲರಿಗೆ ಬರಲ್ಲ, ಕೆಲವರಿಗಷ್ಟೇ ಬರುವುದು, ಇನ್ನು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಉದ್ದವಾದ ಕೂದಲನ್ನು ಕಂಡರೆ ಕಣ್ಣರಳಿಸಿ ನೋಡುತ್ತೇವೆ, ಏಕೆಂದರೆ ಉದ್ದ ಕೂದಲಿನ ಮಹಿಳೆಯರು ಕಾಣ ಸಿಗುವುದು ಬಲು ಅಪರೂಪ, ಏಕೆಂದರೆ ಕೂದಲು ಉದ್ದ ಬಿಡಬೇಕೆಂದು ಬಯಸಿದರೂ ಕೂದಲು ಉದುರುವುದು, ಕವಲೊಡೆಯುವುದು ಮುಂತಾದ ಸಮಸ್ಯೆಯಿಂದಾಗಿ ಕೂದಲಿಗೆ ಕತ್ತರಿ ಬೀಳುವುದು, ಕೆಲವರಿಗಷ್ಟೇ ಕೂದಲು ತುಂಬಾ ಸುಂದರವಾಗಿ ಬೆಳೆಯುವುದು, ಈಕೆಯೂ ಸುಂದರವಾದ ಉದ್ದ ಕೂದಲಿನ ಒಡತಿಯಾಗಿದ್ದಾಳೆ.
ಉದ್ದ ಕೂದಲನ್ನು ಜಡೆ ಹಾಕಿ ಅಥವಾ ಹಾಗೇ ಬಿಟ್ಟು ಪೋಸ್ ನೋಡಿದವರನ್ನು ನೋಡಿದ್ದೇವೆ, ಆದರೆ ಈಕೆ ಮಾತ್ರ ತನ್ನ ಉದ್ದ ಕೂದಲನ್ನು ಸ್ಟೈಲಿಷ್ ಲುಕ್‌ಗಾಗಿ ಬಳಸಿದ್ದಾಳೆ. ಪಟ್ ಅಂತ ನೋಡಿದರೆ ಆಕೆಯದು ಕೂದಲು ಅಲ್ಲ ಯಾವುದೋ ಡಿಸೈನರ್ ವೇರ್ ಆಗಿರಬಹುದು ಎಂಬಷ್ಟು ಸ್ಟೈಲಿಷ್ ಆಗಿ ಪೋಸ್ ನೀಡಿದ್ದಾಳೆ.
hepgul5 ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಫೋಟೋ ಅಪ್‌ಲೋಡ್ ಆಗಿದ್ದು ಇದು ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಆಕೆಯ ವೀಡಿಯೋ ವೈರಲ್ ಆಗಿದೆ.
ತಲೆಗೆ ಸ್ಟೈಲಿಷ್ ಹ್ಯಾಟ್, ಸನ್ ಗ್ಲಾಸ್, ಹೀಲ್ ಧರಿಸಿ ಮಾಡೆಲ್ ರೀತಿ ಪೋಸ್ ನೀಡಿದ್ದಾಳೆ. ಏನೇ ಆಗಲಿ ಆಕೆಯ ಉದ್ದ ಕೂದಲು ನೋಡುವಾಗ ನಮಗೂ ಅಂಥ ಕೂದಲಿದ್ದರೆ ಅಂತ ಆಸೆ ಹುಟ್ಟದೆ ಇರಲ್ಲ, ಅಲ್ವಾ?



Click it and Unblock the Notifications
