Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಆಕರ್ಷಕ ಉಗುರುಗಳಿಗಾಗಿ ಇಲ್ಲಿದೆ ನೇಲ್ ಆರ್ಟ್ ಐಡಿಯಾ
ಕಾಲ ಬದಲಾದಂತೆ ಫ್ಯಾಷನ್ ಟ್ರೆಂಡ್‌ಗಳು ಬದಲಾಗುತ್ತಿರುತ್ತೆ. ಈಗೀನ ನೇಲ್ ಪಾಲಿಷ್ ಟ್ರೆಂಡ್ ಗಮನಿಸುವುದಾದರೆ ಪ್ಲೇನ್ ನೇಲ್ ಪಾಲಿಷ್ ಬದಲಿಗೆ ಸ್ವಲ್ಪ ಕಲರ್‌ಫುಲ್ ನೇಲ್ ಪಾಲಿಷ್‌ಗಳು ಗಮನ ಸೆಳೆಯುತ್ತಿವೆ. ಎಲ್ಲಾ ಬೆರಳುಗಳಿಗೆ ಒಂದೇ ಬಣ್ಣ ಹಚ್ಚುವ ಬದಲು ಒಂದೊಂದು ಬೆರಳಿಗೆ ಒಂದೊಂದು ಬಣ್ಣ ಹಚ್ಚುವುದು ಅಥವಾ ನೇಲ್ ಆರ್ಟ್ ಮಾಡುವುದು ಈಗೀನ ಟ್ರೆಂಡ್ ಆಗಿದೆ.

ನೇಲ್ ಆರ್ಟ್ ತುಂಬಾ ಇಷ್ಟಪಡುವುದಾದರೆ ನಿಮ್ಮ ಉಗುರುಗಳು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುವ ಕೆಲವೊಂದು ನೇಲ್ ಆರ್ಟ್ ಬಗ್ಗೆ ಇಲ್ಲಿ ನೀಡಲಾಗಿದೆ. ಈ ನೇಲ್ ಆರ್ಟ್ ಮಾಡಲು ಸುಲಭವಾಗಿದ್ದು, ಈ ನೇಲ್ ಆರ್ಟ್‌ಗಳು ಇತರರ ಗಮನ ಸೆಳೆಯುವಂತಿದೆ ನೋಡಿ:
ಗೋಲ್ಡನ್ ಡಿಸೈನ್
ಉಗುರಿಗೆ ಪಾರದರ್ಶಕ ಬಣ್ಣದ ಅಂದರೆ ಉಗುರಿನ ಬಣ್ಣದ ನೇಲ್ ಪಾಲಿಷ್ ಹಚ್ಚಿ ಅದರ ಮೇಲೆ ಗೋಲ್ಡನ್ ಬಣ್ಣದ ವಿನ್ಯಾಸ ಅಂಟಿಸಿದರೆ ಉಗುರುಗಳು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಈ ರೀತಿಯ ವಿನ್ಯಾಸ ಮಾಡುವುದಾದರೆ ಉಗುರುಗಳು ಸ್ವಲ್ಪ ಉದ್ಧವಾಗಿರಲಿ. ಈ ರೀತಿ ನೇಲ್ ಆರ್ಟ್ ಫಂಕ್ಷನ್‌ಗಳಿಗೆ ಹೋಗುವಾಗ ಮಾಡಿಕೊಳ್ಳುವುದು ಸೂಕ್ತ.
ರೆಡ್ ಅಂಡ್ ವೈಟ್ ಡಿಸೈನ್
ರೆಡ್ ಹಾಟ್ ಕಲರ್. ಆದರೆ ರೆಡ್ ಅಂಡ್ ವೈಟ್ ಕಾಂಬಿನೇಷನ್ ನೋಡಲು ಆಕರ್ಷಕವಾಗಿರುತ್ತದೆ. ಈ ಎರಡು ಕಾಂಬಿನೇಷನ್ ಬಳಸಿ ಉಗುರಿನ ಲುಕ್ ಕೂಡ ಹೆಚ್ಚಿಸಬಹುದು. ನೀವು ನೇಲ್ ಪಾಲಿಷ್ ಅನ್ನು ಇಲ್ಲಿ ನೀಡಿರುವಂತೆ ಹಚ್ಚಿದರೆ ನೋಡಲು ಆಕರ್ಷಕವಾಗಿ ಕಾಣುತ್ತದೆ.
ಮಲ್ಟಿ ಕಲರ್ ನೇಲ್ ಆರ್ಟ್
ಮಾಡರ್ನ್ ಡ್ರೆಸ್ ಧರಿಸಿದಾಗ ಉಗುರುಗಳು ಕೂಡ ಸ್ವಲ್ಪ ಭಿನ್ನವಾಗಿ ಕಾಣಿಸಬೇಕೆಂದು ನೀವು ಬಯಸುವುದಾರೆ ಈ ರೀತಿ ಮಲ್ಟಿಕಲರ್ ನೇಲ್ ಆರ್ಟ್ ಮಾಡಿದರೆ ನಿಮ್ಮ ಗ್ಲಾಮರಸ್ ಲುಕ್ ಮತ್ತಷ್ಟು ಬೋಲ್ಡ್ ಅಂಡ್ ಹಾಟ್ ನೀಡುವುದು.
ಡಾರ್ಕ್ ಅಂಡ್ ಲೈಟ್ ಕಾಂಬಿನೇಷನ್
ನೇಲ್ ಆರ್ಟ್ ಮಾಡುವಾಗ ಡಾರ್ಕ್ ಅಂಡ್ ಲೈಟ್ ಕಾಂಬಿನೇಷನ್ ಕೂಡ ಚೆನ್ನಾಗಿ ಕಾಣುತ್ತದೆ. ಲೈಟ್ ಕಲರ್ ನೇಲ್ ಪಾಲಿಷ್ ಹಚ್ಚಿ ಅದರ ಮೇಲೆ ಡಾರ್ಕ್ ಬಣ್ಣದಿಂದ ಏನಾದರೂ ವಿನ್ಯಾಸ ಬಿಡಿಸಿದರೆ ಆಕರ್ಷಕವಾಗಿ ಕಾಣುವುದು. ಇಲ್ಲಿ ನೋಡಿ ಬಿಳಿ ಹಾಗೂ ಕಪ್ಪು ಬಣ್ಣ ಎಷ್ಟೊಂದು ಆಕರ್ಷಕವಾಗಿ ಕಾಣುತ್ತಿದೆ ಅಲ್ಲವೇ?
ಸಿಂಪಲ್ ನೇಲ್ ಆರ್ಟ್
ನಿಮಗೆ ತುಂಬಾ ಫಂಕಿ-ಫಂಕಿ ಕಾಣಲು ಇಷ್ಟವಿಲ್ಲದಿದ್ದರೆ ಸಿಂಪಲ್ ಆಗಿ ಹಾಗೂ ಆಕರ್ಷಕವಾಗಿ ಕಾಣುವಂತೆ ನೇಲ್ ಆರ್ಟ್ ಐಡಿಯಾ ಇಲ್ಲಿ ನೀಡಲಾಗಿದೆ ನೋಡಿ. ಈ ನೇಲ್ ಆರ್ಟ್ ನೋಡಲು ತುಂಬಾ ಸಿಂಪಲ್ ಜತೆಗೆ ನೋಡಲು ಆಕರ್ಷಕ ಲುಕ್ ನೀಡುವುದು.
ಬ್ಲ್ಯಾಕ್ ವಿಥ್ ಶೈನ್
ಕಪ್ಪು ಬಣ್ಣದ ನೇಲ್ ಪಾಲಿಷ್ ಮೇಲೆ ಸಿಲ್ವರ್ ಬಣ್ಣದ ಡಿಸೈನ್ ಹಾಕಿದರೂ ಆಕರ್ಷಕವಾಗಿ ಕಾಣುವುದು. ಆದರೆ ಹೀಗೆ ನೇಲ್ ಆರ್ಟ್ ಮಾಡುವಾಗ ಎಲ್ಲಾ ಉಗುರುಗಳಿಗೆ ಹಾಕುವುದಕ್ಕಿಂತ ಎರಡರಿಂದ ಮೂರು ಉಗುರಿಗೆ ಹಾಕಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು.
ಮಾರ್ಬಲ್ ಲುಕ್
ನಿಮ್ಮ ಉಗುರುಗಳಿಗೆ ಮಾರ್ಬಲ್ ಲುಕ್ ನೀಡ ಬಯಸುವುದಾದರೆ ಈ ರೀತಿ ವಿನ್ಯಾಸ ಮಾಡಬಹುದು ನೋಡಿ. ಇಲ್ಲಿ ಬಿಳಿ, ಕಪ್ಪು ಹಾಗೂ ಗ್ಲಿಟರ್ ಹೀಗೆ ಮೂರು ಬಣ್ಣದ ನೇಲ್ ಪಾಲಿಷ್ ಬಳಸಿ ಈ ನೇಲ್ ಆರ್ಟ್ ಮಾಡಲಾಗಿದೆ.
ಬ್ಲೂ ಅಂಡ್ ವೈಟ್
ನೀಲಿ ಬಣ್ಣದ ನೇಲ್ ಪಾಲಿಷ್ ಹಚ್ಚಿ, ಉಂಗುರ ಬೆರಳನ್ನು ಬಿಳಿ ನೇಲ್ ಪಾಲಿಷ್‌ನಿಂದ ಅಲಂಕರಿಸಿದರೆ ಆಕರ್ಷಕವಾಗಿ ಕಾಣುವುದು. ಈ ರೀತಿಯ ನೇಲ್ ಆರ್ಟ್ ಡ್ರೆಸ್ಸಿಂಗ್ ಮ್ಯಾಚಿಂಗ್ ಬಣ್ಣದಲ್ಲಿ ಹಾಕಿದರೆ ಸುಂದರವಾಗಿ ಕಾಣುವುದು.



Click it and Unblock the Notifications
