Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹಬ್ಬದಲ್ಲಿ ನಿಮ್ಮನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತೆ ಈ ಎಥ್ನಿಕ್ ವೇರ್ ಐಡಿಯಾ
ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿದರೆ ಅದರ ಕಳೆಯೇ ಬೇರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಓಡಾಡುತ್ತಿದ್ದರೆ ಅವರನ್ನು ನೋಡುವುದೇ ಆನಂದ.

ಹಬ್ಬಗಳಲ್ಲಿ ಮಹಿಳೆಯರಂತೂ ತಮ್ಮ ಡ್ರೆಸ್ಸಿಂಗ್ ಕಡೆ ತುಂಬಾನೇ ಆಸಕ್ತಿ ತೋರಿಸುತ್ತಾರೆ. ಹೀಗಿನ ಟ್ರೆಂಡ್‌ಗೆ ಸೂಟ್ ಆಗುವಂತೆ, ಸಾಂಪ್ರದಾಯಿಕ ಆಭರಣ ಹಾಗೂ ಉಡುಪು ಧರಿಸಿ ಮಿಂಚಲು ಬಯಸುತ್ತಾರೆ.

ಹಳೆ ಸ್ಟೈಲ್‌ಗೆ ಹೊಸ ಟಚ್
ಲಂಗ ದಾವಣಿ 80ರ ದಶಕದಲ್ಲಿ ಬಳಸಲಾಗುತ್ತಿತ್ತು. ಇದೀಗ ಮತ್ತೆ ಫ್ಯಾಷನ್ ಮರುಕಳಿಸಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸೆಲಬ್ರಿಟಿಗಳು ಲಂಗ ದಾವಣಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಲಂಗ ದಾವಣಿ ಧರಿಸಿದಾಗ ಸ್ವಲ್ಪ ಗ್ರ್ಯಾಂಡ್ ಆಭರಣಗಳನ್ನು ಧರಿಸಿದರೆ ಮತ್ತಷ್ಟು ಆಕರ್ಷಕ.
ಸಾಂಪ್ರದಾಯಿಕ ಹಾಗೂ ಗ್ರ್ಯಾಂಡ್ ಡ್ರೆಸ್ಸಿಂಗ್‌ನಲ್ಲಿ ಒಂದು ಸಮಯದಲ್ಲಿ ಘಾಗ್ರ ಡ್ರೆಸ್ಸಿಂಗ್ ತುಂಬಾ ಟ್ರೆಂಡ್ ಆಗಿತ್ತು, ಅದೇ ಈಗ ಮತ್ತೆ ಸೀರೆ(ಸೀರೆ ಎಂದೆಂದಿಗೂ ಎವರ್‌ಗ್ರೀನ್) ಹಾಗೂ ಲಂಗ ಧಾವಣಿ ಮತ್ತೆ ಟ್ರೆಂಡ್‌ನಲ್ಲಿದೆ. ಹಬ್ಬ-ಹರಿದಿನಗಳಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಲು ಈ ಡ್ರೆಸ್ಸಿಂಗ್ ಟಿಪ್ಸ್ ಬಳಸಬಹುದು.

ಸೀರೆ, ತುರುಬು ಹಾಗೂ ಗಾಜಿನ ಬಳೆ
ಸೀರೆ ಧರಿಸಿ, ತುರುಬು ಕಟ್ಟಿ, ಮಲ್ಲಿಗೆ ಮುಡಿದು ಗಾಜಿನ ಬಳೆ ಧರಿಸಿದರೆ ಮುತ್ತೈದೆ ಕಳೆಯಿಂದ ತುಂಬಾನೇ ಆಕರ್ಷಕವಾಗಿ ಕಾಣುವುದು. ಫ್ರೀ ಹೇರ್‌ಗಿಂತ ತುರುಬು ಕಟ್ಟುವುದು ಈಗ ಫ್ಯಾಷನ್ ಆಗಿದೆ.

ಗ್ರ್ಯಾಂಡ್ ಆಭರಣಗಳ ಮೆರುಗು
ಈ ಚಿತ್ರದಲ್ಲಿ ಕಿರುತೆರೆ ನಟಿ ವೈಷ್ಣವಿ ಗೌಡ ಗ್ರ್ಯಾಂಡ್ ಆಭರಣಗಳನ್ನು ಧರಿಸಿ ಹಬ್ಬದ ಕಳೆ ಹೆಚ್ಚಿಸಿದ್ದಾರೆ. ಹಬ್ಬಗಳಿರಲಿ, ಮದುವೆ ಇರಲಿ ಗ್ರ್ಯಾಂಡ್ ಆಗಿ ಕಾಣ ಬಯಸುವುದಾದರೆ ಡ್ರೆಸ್‌ಗಿಂತ ಅಭರಣಕ್ಕೆ ಹೆಚ್ಚಿನ ಗಮನ ನೀಡಬೇಕು.

ದಾವಣಿಯಲ್ಲಿ ಭಿನ್ನ ಲುಕ್
ಇದೀಗ ಈ ಬಗೆಯ ಡ್ರೆಸ್ಸಿಂಗ್ ಕೂಡ ಟ್ರೆಂಡ್ ಆಗುತ್ತಿದೆ. ದಾವಣಿಯ ಸೆರಗನ್ನು ಸ್ವಲ್ಪ ಭಿನ್ನವಾಗಿ ಹಾಕಬೇಕು. ಈ ರೀತಿಯ ಡ್ರೆಸ್ಸಿಂಗ್ ಮಾಡುವ ಬ್ಲೌಸ್ ಗ್ರ್ಯಾಂಡ್ ಆಗಿದ್ದರೆ ಇನ್ನೂ ಚೆಂದ.

ದಸರಾ ಹಬ್ಬಕ್ಕೆ ಶುಭ ಪೂಂಜಾ ಡ್ರೆಸ್ಸಿಂಗ್
ಸಾಂಪ್ರದಾಯಿಕವಾಗಿ ಸೀರೆ ಧರಿಸಿದ್ದರು, ಸ್ಲೀವ್‌ಲೆಸ್‌ನಲ್ಲಿ ಮಾಡರ್ನ್ ಟಚ್ ನೀಡಲು ಪ್ರಯತ್ನಿಸಿದ್ದಾರೆ. ಅದರ ಜೊತೆಗೆ ನೆಕ್ಲೇಸ್ ಹಾಗೂ ದೊಡ್ಡ ಕಿವಿಯೋಲೆ ,ಮುಖದ ಕಳೆ ಹೆಚ್ಚಿಸಿದೆ.



Click it and Unblock the Notifications
