Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬಿಗ್‌ಬಾಸ್ 8ರ ಸ್ಟೈಲಿಷ್ ಕ್ವೀನ್ ದಿವ್ಯಾ ಸುರೇಶ್‌ರ ಗಮನ ಸೆಳೆಯುವ ಡ್ರೆಸ್ಸಿಂಗ್‌ಗಳು
ಕನ್ನಡ ಬಿಗ್‌ಬಾಸ್ ಸೀಸನ್ 8 ಫಿನಾಲೆ ತಲುಪಲು 2 ವಾರಗಳಷ್ಟೇ ಬಾಕಿದೆ. ಈಗ ಉಳಿದಿರುವ ಸ್ಪರ್ಧಿಗಳು ವೀಕ್ಷಕರ ಗಮನವನ್ನು ತಮ್ಮ ಆಟದಿಂದ ಮಾತ್ರವಲ್ಲ ತಮ್ಮ ಫ್ಯಾಷನ್ ಸೆನ್ಸ್‌ನಿಂದಲೂ ಸೆಳೆಯುತ್ತಿದ್ದಾರೆ, ಅದರಲ್ಲಿ ಫ್ಯಾಷನ್ನಿಷ್ಟಾ ಅನಿಸಿಕೊಂಡಿರುವುದು ದಿವ್ಯಾ ಸುರೇಶ್.

ಬಿಗ್‌ಬಾಸ್ ಸೀಸನ್ 8ರ ಮೊದಲ ಇನ್ನಿಂಗ್ಸ್ ಸಕತ್ ಸ್ಟೈಲಿಷ್ ಆಗಿ ಡ್ರೆಸ್ಸಿಂಗ್ ಮಾಡಿ ಗಮನ ಸೆಳೆಯುತ್ತಿದ್ದ ದಿವ್ಯಾ ಸುರೇಶ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮತ್ತಷ್ಟು ಆಕರ್ಷಕ ಡ್ರೆಸ್ಸಿಂಗ್ ಸ್ಟೈಲ್ ಮಾಡುತ್ತಿದ್ದಾರೆ.
ವೀಕೆಂಡ್‌ಗಳಲ್ಲಿ ಎಲ್ಲರೂ ಚೆನ್ನಾಗಿ ಡ್ರೆಸ್ಸಿಂಗ್ ಮಾಡುತ್ತಾರೆ, ಅದರಲ್ಲೂ ದಿವ್ಯಾ ಸುರೇಶ್ ಅವರ ಡ್ರೆಸ್ಸಿಂಗ್ ಅಂತೂ ಇನ್ನೂ ಸ್ಟೈಲಿಷ್ ಆಗಿರುತ್ತದೆ... ಸುದೀಪ್ ಅವರು ಅವರು ಕೂಡ ಅವರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ವೀಕ್ ಡೇಗಳಲ್ಲಿಯೂ ದಿನದಲ್ಲಿ 4-5 ಜೊತೆ ಡ್ರೆಸ್ ಬದಲಾಯಿಸಿ ಗಮನ ಸೆಳೆದರೆ ವೀಕೆಂಡ್‌ಗಳಲ್ಲಂತೂ ಸಕತ್ ಗ್ಲಾಮರಸ್ ಡ್ರೆಸ್ಸಿಂಗ್ ಸ್ಟೈಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬಿಗ್‌ಬಾಸ್ 8 ಸೀಸನ್ ಸ್ಟೈಲಿಷ್ ಕ್ವೀನ್ ದಿವ್ಯಾ ಸುರೇಶರ ಕೆಲ ಡ್ರೆಸ್ಸಿಂಗ್ ಝಲಕ್ ನೋಡಿ ಇಲ್ಲಿವೆ:

ರೆಡ್ ಗೌನ್‌ನಲ್ಲಿ ಗ್ಲಾಮರಸ್ ಆಗಿ ಮಿಂಚಿದ ದಿವ್ಯಾ ಸುರೇಶ್
ಬಿಗ್‌ಬಾಸ್ ವೀಕೆಂಡ್‌ನಲ್ಲಿ ದಿವ್ಯಾ ಸುರೇಶ್ ಧರಿಸಿದ್ದ ಈ ಕೆಂಪು ಗೌನ್ ಸಾಕಷ್ಟು ಗಮನ ಸೆಳೆದಿತ್ತು. ಫೇರಿಟೇಲ್ ಕ್ವೀನ್‌ನಂತೆ ಕಂಗೊಳಿಸಿದ್ದರು ದಿವ್ಯಾ ಸುರೇಶ್

ಪಿಂಕ್ ಟಾಪ್-ಗ್ರೀನ್ ಲಾಂಗ್ ಸ್ಕರ್ಟ್ ಮ್ಯಾಚಿಂಗ್
ಪಿಂಕ್ ಟಾಪ್‌ಗೆ ಹಸಿರು ಬಣ್ಣದ ಲಂಗ ತೊಟ್ಟು ತುಂಬಾನೇ ಆಕರ್ಷಕವಾಗಿ ಕಂಗೊಳಿಸಿದರು. ಇದರಲ್ಲಿ ಕುತ್ತಿಗೆಗೆ ಮಾತ್ರ ನೆಕ್ಲೇಸ್ ಧರಿಸಿದ್ದಾರೆ, ಕಿವಿಗೆ ಓಲೆ ಹಾಕಿಲ್ಲ, ಕೈಗಳಿಗೆ ಬಳೆ ಹಾಕಿಲ್ಲ, ಟ್ರೆಡಿಷನ್ ಡ್ರೆಸ್‌ಗೆ ಗ್ಲಾಮರ್ ಟಚ್ ನೀಡಿದ್ದಾರೆ.

ಪರ್ಪಲ್ ಗೌನ್
ಈ ಗೌನ್‌ನಲ್ಲಿ ದಿವ್ಯಾ ಸುರೇಶ್ ಅವರ ಹೇರ್ ಸ್ಟೈಲ್, ಕಿವಿಯೋಲೆ ಹೈಲೈಟ್ಸ್. ಗ್ಲಾಮರಸ್ ಆಗಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ.

ರೆಡ್ ಅಂಡ್ ಬ್ಲ್ಯಾಕ್ ಕಾಂಬಿನೇಷನ್‌ನಲ್ಲಿ ಹಾಟ್ ಲುಕ್
ರೆಡ್ ಸ್ಯಾರಿಗೆ ಬ್ಲ್ಯಾಕ್ ಬ್ಲೌಸ್ ಮ್ಯಾಚಿಂಗ್ ಮಾಡಿರುವ ದಿವ್ಯಾ ಸಕತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ

ಪ್ರತಿಯೊಂದು ಡ್ರೆಸ್ಸಿಂಗ್‌ನಲ್ಲೂ ಗ್ಲಾಮರಸ್ ಆಗಿ ಮಿಂಚುವ ದಿವ್ಯಾ
ದಿವ್ಯಾ ಯಾವುದೇ ಡ್ರೆಸ್ಸಿಂಗ್ ಆಗಿರಲಿ ಅದಕ್ಕೊಂದು ಗ್ಲಾಮರಸ್ ಟಚ್ ಇದ್ದೇ ಇರುತ್ತದೆ.. ಇನ್ನೂ ಎರಡು ವೀಕೆಂಡ್ ಬಾಕಿ ಇದ್ದು ಫಿನಾಲೆವರೆಗೆ ಅವರು ಇದ್ದರೆ ಇನ್ನಷ್ಟು ಆಕರ್ಷಕ ಧಿರಿಸಿನಲ್ಲಿ ಅವರು ಮಿಂಚುವುದನ್ನು ನೋಡಬಹುದು.



Click it and Unblock the Notifications
