Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮತ್ತೆ ಮರುಕಳಿಸಿದೆ ದೊಡ್ಡ ಬಿಂದಿಯಲ್ಲಿ ಫ್ಯಾಷನ್ ರಂಗು
ತುಂಬಾ ಚೆನ್ನಾಗಿ ಡ್ರೆಸ್ ಮಾಡಿ ಮುಖಕ್ಕೆ ಒಂದು ಬಿಂದಿ ಹಾಕಿದ ತಕ್ಷಣ ಮುಖಕ್ಕೆ ಏನೋ ವಿಶೇಷ ಕಳೆ ಬರುತ್ತದೆ. ಸಾಂಪ್ರದಾಯಿಕ ಉಡುಪು ಧರಿಸಿದಾಗಲಂತೂ ಬಿಂದಿ ಹಾಕದಿದ್ದರೆ ಎಷ್ಟೇ ಅಲಂಕಾರ ಮಾಡಿಕೊಂಡರೂ ಬಿಂದಿ ಹಾಕದಿದ್ದರೆ ಮುಖಕ್ಕೆ ವಿಶೇಷ ಮೆರಗು ಸಿಗುವುದಿಲ್ಲ. ಹೆಣ್ಣಿನ ಮುಖದ ಅಂದ ಹೆಚ್ಚಿಸುವಲ್ಲಿ ಬಿಂದಿ ಪ್ರಮುಖ ಪಾತ್ರವಹಿಸುತ್ತದೆ. ಬಿಂದಿ ಹಾಕದೆ ಇರುವುದಕ್ಕಿಂತ ಬಿಂದಿ ಹಾಕಿದಾಗ ಮುಖದ ಲಕ್ಷಣ ಹೆಚ್ಚಾಗುವುದು.

ಬಿಂದಿಯಲ್ಲಿ ಹಲವಾರು ಬಗೆಯ ಬಿಂದಿಗಳಿವೆ. ಮಿರಮಿರ ಮಿಂಚುವ ಬಿಂದಿ, ಉದ್ದವಾದ ಬಿಂದ, ತುಂಬಾ ಚಿಕ್ಕ ಬಿಂದಿ ಹೀಗೆ ಅನೇಕ ವಿನ್ಯಾಸದ ಬಿಂದಿಗಳು ದೊರೆಯುತ್ತವೆ. ಬಿಂದಿಯನ್ನು ಆಯ್ಕೆ ಮಾಡುವಾಗ ಆ ಬಿಂದಿ ನಮ್ಮ ಮುಖಕ್ಕೆ ಒಪ್ಪುವಂತೆ ಇರುವ ಬಿಂದಿಯನ್ನು ಆಯ್ಕೆ ಮಾಡಬೇಕು. ಕೆಲವೊಂದು ಬಿಂದಿ ಮುಖದ ಲಕ್ಷಣ ಹೆಚ್ಚಿಸಿದರೆ ಇನ್ನು ಕೆಲವು ಬಿಂದಿ ವಿನ್ಯಾಸ ಮುಖಕ್ಕೆ ಅಷ್ಟಾಗಿ ಒಪ್ಪುವುದಿಲ್ಲ. ಆದ್ದರಿಂದ ಬಿಂದಿಯನ್ನು ಆಯ್ಕೆ ಮಾಡುವಾಗ ನಮ್ಮ ಮುಖದ ಆಕಾರಕ್ಕೆ ಹೊಂದುವಂಥ ಬಿಂದಿಯನ್ನು ಧರಿಸಬೇಕು.
ಮಾಡರ್ನ್ ಡ್ರೆಸ್‌ಗೆ ಬಿಂದಿ ಸ್ಟೈಲ್ ಅಷ್ಟಾಗಿ ಚೆನ್ನಾಗಿ ಒಪ್ಪುವುದಿಲ್ಲ ಎಂದು ಮಾಡರ್ನ್ ಡ್ರೆಸ್ ಹಾಕಿದಾಗ ಬಿಂದಿ ಹಾಕುವುದಿಲ್ಲ. ಆದರೆ ಮಾಡರ್ನ್ ಡ್ರೆಸ್‌ಗೆ ಬಿಂದಿ ಹಾಕುವ ಟ್ರೆಂಡ್ ಶುರುವಾಗಿದೆ.ಅದರಲ್ಲೂ ಸ್ವಲ್ಪ ದೊಡ್ಡದಾದ ಬಿಂದಿ ಧರಿಸುವ ಫ್ಯಾಷನ್ ಟ್ರೆಂಡ್ ಶುರುವಾಗಿದೆ.
ಮರುಕಳಿಸಿದ ಫ್ಯಾಷನ್
ಇತ್ತೀಚೆಗೆ ದೊಡ್ಡದಾದ ಬಿಂದಿ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಚಾಲೆಂಜ್ ಕೂಡ ಆಗಿತ್ತು. ಬಿಂದಿಯಲ್ಲಿ ಹಲವಾರು ವಿನ್ಯಾಸಗಳಿದ್ದರೂ ಸ್ವಲ್ಪ ದೊಡ್ಡದಾದ ಬಿಂದಿ ಎವರ್‌ಗ್ರೀನ್ ಸ್ಟೈಲ್ ಆಗಿದೆ. ಮನೆಯಲ್ಲಿ ಅಮ್ಮ, ಅಜ್ಜಿ ಇಡುತ್ತಿದ್ದ ಸ್ವಲ್ಪ ದೊಡ್ಡದಾದ ಬಿಂದಿ ಇದೀಗ ಟ್ರೆಂಡ್ ಆಗಿದೆ. ಹದಿಹರೆಯದ ಹೆಣ್ಮಕ್ಕಳು ಸಾಂಪ್ರದಾಯಿಕ ಮಾತ್ರವಲ್ಲ ಮಾಡರ್ನ್ ಡ್ರೆಸ್‌ಗೂ ಈ ರೀತಿಯ ಬಿಂದಿ ಧರಿಸಿ ಗಮನ ಸೆಳೆಯುತ್ತಿದ್ದಾರೆ.
ಬಣ್ಣ-ಬಣ್ಣದ ಬಿಂದಿ
ದೊಡ್ಡ ಬಿಂದಿಯಲ್ಲಿ ಹೊಳೆಯುವ ಬಿಂದಿಗಿಂತ ಪ್ಲೇನ್ ಬಿಂದಿಗಳ ಫ್ಯಾಷನ್ ಜೋರಾಗಿದೆ. ಕೆಲವರು ಡ್ರೆಸ್‌ಗೆ ಒಪ್ಪುವ ಬಣ್ಣದ ಬಿಂದಿ ಧರಿಸಿದರೆ ಮತ್ತೆ ಕೆಲವರು ಮೆರೂನ್ ಹಾಗೂ ಕಪ್ಪು ಬಣ್ಣದ ಬಿಂದಿ ಧರಿಸುತ್ತಿದ್ದಾರೆ.
ಡ್ರೆಸ್ಸಿಂಗ್ ತಕ್ಕ ಮ್ಯಾಚಿಂಗ್ ಬಿಂದಿ ಹಾಕುವಾಗ ಎಲ್ಲಾ ಬಣ್ಣದ ಡ್ರೆಸ್‌ಗೆ ಅಷ್ಟೇನು ಚೆನ್ನಾಗಿ ಕಾಣುವುದಿಲ್ಲ, ಆದರೆ ಮೆರೂನ್, ಕಪ್ಪು, ಕೆಂಪು ಬಿಂದಿ ಎಲ್ಲಾ ಬಣ್ಣದ ಡ್ರೆಸ್‌ಗೆ ಆಕರ್ಷಕವಾಗಿ ಕಾಣುತ್ತದೆ.
ಎಲ್ಲಾರಿಗೂ ಒಪ್ಪುವ ಬಿಂದಿ
ಸ್ವಲ್ಪ ದೊಡ್ಡದಾದ ಈ ಪ್ಲೇನ್ ಬಿಂದಿಯ ವಿಶೇಷತೆ ಏನೆಂದರೆ ಈ ಬಿಂದಿ ಗುಂಡಗಿರಲಿ, ತೆಳ್ಳಗಿರಲಿ, ಉದ್ದ ಮುಖವಿರಲಿ, ಅಗಲ ಮುಖವಿರಲಿ ಎಲ್ಲರಿಗೂ ಚೆನ್ನಾಗಿ ಕಾಣುವುದರ ಜತೆಗೆ ಮಾಡರ್ನ್ ಡ್ರೆಸ್ಸಿಂಗ್‌ಗೆ ಸಕತ್ ಸ್ಟೈಲಿಷ್ ಲುಕ್ ನೀಡುತ್ತದೆ.
ಆದ್ದರಿಂದ ಈ ಬಿಂದಿ ಸ್ಟೈಲ್ ಪಾಲಿಸಲು ಎಲ್ಲರೂ ಇಷ್ಟಪಡುತ್ತಾರೆ.ಮೊದಲೆಲ್ಲಾ ವಯಸ್ಸಾದವರೂ ಮಾತ್ರ ದೊಡ್ಡ ಬಿಂದಿ ಧರಿಸುತ್ತಿದ್ದರೆ, ಟ್ರೆಂಡ್ ಆಗಿರುವುದರಿಂದ ಹದಿಹರೆಯದ ಹೆಣ್ಮಕ್ಕಳ ಹಣೆಯಲ್ಲಿ ಈ ಬಿಂದಿ ಮಿಂಚುತ್ತಿರುತ್ತದೆ.
View this post on InstagramA post shared by Shreya Krishnan (@drama.rani) on
ಪ್ರೊಫೆಷನಲ್ ಲುಕ್ ನೀಡುವ ಬಿಂದಿ
ಈ ಹಿಂದೆಯ ಮತ್ತೊಂದು ವಿಶೇಷತೆ ಏನೆಂದರೆ ಸಕತ್ ಪ್ರೊಫೆಷನಲ್ ಲುಕ್ ನೀಡುತ್ತದೆ. ಲಾಂಗ್ ಸ್ಕರ್ಟ್‌ಗೆ ಆಕರ್ಷಕ ಲುಕ್ ನೀಡಿದರೆ, ಸೆಲ್ವಾರ್ ಹಾಗೂ ಸೀರೆಗೆ ಫ್ರೊಫೆಷನಲ್ ಲುಕ್ ನೀಡುತ್ತದೆ.
ನೀವು ದೊಡ್ಡ ಬಿಂದಿಯ ಸ್ಟೈಲ್ ಇನ್ನೂ ಟ್ರೈ ಮಾಡದಿದ್ದರೆ ಈ ರೀತಿ ಟ್ರೈ ಮಾಡಿ ನೋಡಿ, ನಿಮ್ಮ ಲುಕ್ ನಿಮಗೇ ಇಷ್ಟವಾಗುವುದು.



Click it and Unblock the Notifications
