Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಆಶಿಕಾ ರಂಗನಾಥ್ ಸ್ಟೈಲ್ ಈ ಕಾರಣಕ್ಕೆ ತುಂಬಾನೇ ಗಮನ ಸೆಳೆಯುತ್ತೆ
ಮಿಲ್ಕಿ ಬ್ಯೂಟಿ, ಪಕ್ಕಾ ಕನ್ನಡದ ಹುಡುಗಿ ಆಶಿಕಾ ರಂಗನಾಥ್. ಸದ್ಯ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾದ ಆಶಿಕ ಅಂದ್ರೆ ಪಡ್ಡೆ ಹುಡುಗರಿಗೆ ಅಚ್ಚುಮೆಚ್ಚು. ಸೋಶಿಯಲ್ ಮಿಯಾದಲ್ಲಿ ಆಕ್ಟೀವ್ ಆಗಿರೋ ಆಶಿಕಾ ಅವರ ಲೈಫ್‌ಸ್ಟೈಲ್ ಬಗ್ಗೆ ಅಪ್ಡೇಟ್ ಕೊಡ್ತಾನೆ ಇರ್ತಾರೆ.

ನಮ್ಮ ಫೇವರೇಟ್ ಹಿರೋಯಿನ್ ಬಗ್ಗೆ ತಿಳಿದುಕೊಳ್ಳೋ ಕ್ಯೂರಿಯಾಸಿಟಿ ಅಂತೂ ನಮಗೆ ಇದ್ದೇ ಇರುತ್ತೆ. ಇವತ್ತು ನಾವು ನಿಮಗೆ ಆಶಿಕಾ ಸ್ಟೈಲಿಷ್ ಔಟ್‌ಫಿಟ್‌ಗಳ ಬಗ್ಗೆ ಹೇಳ್ತೀವಿ.
ಮಾಲ್ಡಿವ್ಸ್‌ನಲ್ಲಿ ಆಶಿಕಾ ಫುಲ್ ಮಸ್ತಿ
ಆಶಿಕಾ ರಂಗನಾಥ್ ತಮ್ಮ ಗರ್ಲ್‌ಫ್ರೆಂಡ್ಸ್ ಜೊತೆ ಮಾಲ್ಡೀವ್ಸ್ ಫೈಟ್ ಹತ್ತಿ ಇದೀಗ ಕಡಲ ಕಿನಾರೆಯನ್ನು ಫುಲ್ ಎಂಜಾಯ್ ಮಾಡ್ತಿದ್ದಾರೆ. ಪ್ರತಿ ದಿನ ಒಂದಲ್ಲ ಒಂದು ಹಾಟ್ ಫೋಟೋಸ್‌ಗಳನ್ನ ಹಾಕಿ ಹುಡುಗರ ನಿದ್ದೆ ಕೆಡಿಸಿದ್ದಾರೆ.
ಪುಷ್ಟವತಿ ಸಾಂಗ್‌ಗೆ ಸಖತ್ತ್ ಸ್ಟೆಪ್
ಕಡಲ ಕಿನಾರೆಯಲ್ಲಿ ಇರೋ ಆಶಿಕಾ ಮತ್ತು ಆಕೆಯ ಸ್ನೇಹಿತರು ಶೇಕ್ ಇಟ್ ಪುಷ್ಪವತಿ ಸಾಂಗ್‌ಗೆ ಸಖತ್ತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವನ್ನು ಆಶಿಕಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗ್ತಿದೆ.
ಟ್ರೆಡಿಷನಲ್ ಹಾಗೂ ಮಾಡ್ರನ್ ಲುಕ್‌ನಲ್ಲೂ ಸೂಪರ್
ಆಶಿಕಾ ರಂಗನಾಥ್ ಯಾವುದೇ ಔಟ್‌ಫಿಟ್‌ನಲ್ಲೂ ಸೂಪರ್ ಆಗಿ ಕಾಣ್ತಾರೆ. ಹೆಚ್ಚಾಗಿ ಪ್ರಮೋಷನ್ ಶೂಟ್ ಇದ್ದಾಗ ಅಥವಾ ಯಾವುದೇ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ನಮ್ಮ ಸಾಂಪ್ರದಾಯಿಕ ಸೀರೆಗಳನ್ನ ಉಡುತ್ತಾರೆ. ಇನ್ನೂ ಟ್ರೆಡಿಷನಲ್ ಸೀರೆಗೆ ಮಾಡರ್ನ್ ಬ್ಲೌಸ್ ಸ್ಟಿಚ್ ಮಾಡಿ ಹಾಕೋತ್ತಾರೆ.
ಕೆಲವೊಂದು ಬಾರಿ ಪಕ್ಕಾ ಕರ್ನಾಟಕದ ಶೈಲಿಯ ಸೀರೆಗಳನ್ನು ಧರಿಸಿ ರೀಲ್ಸ್‌ಗೆ ಹೆಜ್ಜೆ ಹಾಕಿದ್ದಾರೆ. ಇವರು ಸೀರೆ ಉಟ್ಟಾಗ ಸ್ಲೀವ್‌ಲೆಸ್ ಹಾಗೂ ಫುಲ್ ಸ್ಲೀವ್ ಬ್ಲೌಸ್‌ಗಳನ್ನೇ ಪ್ರಿಫರ್ ಮಾಡ್ತಾರೆ.
ಇನ್ನೂ ಬಟ್ಟೆಗಳ ಬಗ್ಗೆ ಚೂಸಿಯಾಗಿರೋ ಆಶಿಕ ತಮಗೆ ಒಪ್ಪುವಂತಹ ಡಾರ್ಕ್ ಶೇಡ್ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸುತ್ತಾರೆ. ಅದ್ರಲ್ಲೂ ಮಿಲ್ಕಿ ಬ್ಯೂಟಿ ಆಶಿಕಾಗೆ ಯಾವುದೇ ಬಣ್ಣವಾದ್ರು ತುಂಬಾನೇ ಚೆನ್ನಾಗಿ ಒಪ್ಪುತ್ತದೆ.
ಮಾಡ್ರನ್ ಬಟ್ಟೆಗಳಲ್ಲಿ ತುಂಬಾನೇ ಹಾಟ್ ಆಗಿ ಕಾಣೋ ಇವರು ಯಾವ ಬಾಲಿವುಡ್ ಹಿರೋಯಿನ್‌ಗೂ ಕಡಿಮೆ ಇಲ್ಲ ಅನ್ನೋ ರೇಂಜ್‌ಗೆ ಸಕ್ಕತ್ತ್ ಆಗಿ ಫೋಸ್ ಕೊಡ್ತಾರೆ.
ಸಲ್ವಾರ್, ಲೆಹೆಂಗಾ, ಕುರ್ತಾ ಹೀಗೆ ಯಾವ ಬಟ್ಟೆಯಾದ್ರು ಸರಿ ಆಶಿಕಾಗೆ ಇಂತಹ ಬಟ್ಟೆ ಒಪ್ಪೋದಿಲ್ಲ ಅಂತಿಲ್ಲ. ಎಲ್ಲಾ ತರಹದ ಲುಕ್‌ನಲ್ಲೂ ಮುದ್ದು ಮುದ್ದಾಗಿ ಕಾಣ್ತಾರೆ.
ಫೋಟೋಶೂಟ್ , ಮೂವಿ ಪ್ರಮೋಷನ್ ಬಿಟ್ರೆ ಆಶಿಕಾ ಹೆಚ್ಚಾಗಿ ಮೇಕಪ್ ಮಾಡಿಕೊಂಡವರೇ ಅಲ್ಲ. ಹೆಚ್ಚಾಗಿ ಸಿಂಪಲ್ ಮೇಕಪ್ ಲುಕ್‌ನಲ್ಲೇ ಚೆನ್ನಾಗಿ ಕಾಣ್ತಾರೆ.
ಒಟ್ಟಿನಲ್ಲಿ ಬ್ಯೂಟಿ ವಿಷಯಕ್ಕೆ ಬಂದ್ರೆ ಆಶಿಕಾಗೆ ಸರಿಸಾಟಿ ಮತ್ತೊಬ್ಬರಿಲ್ಲ. ಈಗಾಗಲೇ ತಮಿಳಿಗೆ ಕಾಲಿಟ್ಟಿರೋ ಆಶಿಕ ಸದ್ಯದಲ್ಲೇ ಅವರ ಫೇವರೇಟ್ ನಟ ಸಿದ್ಧಾರ್ಥ್ ಜೊತೆಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಕನ್ನಡದ ನಟಿಯೊಬ್ಬರು ಪರಭಾಷೆಗಳಲ್ಲಿ ಮಿಂಚ್ತಿದ್ದಾರೆ ಅಂದ್ರೆ ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರವೇ ಸರಿ.



Click it and Unblock the Notifications