Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಫ್ಯಾಷನ್ ಅತಿಯಾದರೆ, ಮುಜುಗರಕ್ಕೆ ಒಳಗಾಗುವುದು ಗ್ಯಾರಂಟಿ!
ಪ್ರತಿಯೊಬ್ಬರು ತಪ್ಪುಗಳನ್ನು ಮಾಡುತ್ತಾರೆ, ಅದು ಮಾನವ ಸಹಜ ಗುಣ. ಆದರೆ ಕೆಲವೊಂದು ತಪ್ಪುಗಳನ್ನು ನಾವು ಮಾಡಿದರೆ ಇತರರ ಮುಂದೆ ಮುಜುಗರ ಅನುಭವಿಸಬೇಕಾಗುತ್ತದೆ. ಅಂತಹ ತಪ್ಪುಗಳಲ್ಲಿ ಒಂದು ಮಹಿಳೆಯರು ಮಾಡುವ ಫ್ಯಾಷನ್ ತಪ್ಪುಗಳು. ನಿಜ ಫ್ಯಾಷನ್ ನಿಮಗೆ ಎಷ್ಟು ಹೆಮ್ಮೆಯನ್ನು ಮತ್ತು ಪ್ರಚಾರವನ್ನು ತಂದು ಕೊಡುತ್ತದೆಯೋ, ಅಷ್ಟೇ ಮುಜುಗರವನ್ನು ಸಹ ತಂದು ಕೊಡುತ್ತದೆ ಎಂಬುದನ್ನು ಮರೆಯಬಾರದು.
ಚಿಕ್ಕ ಮಕ್ಕಳು ಲಿಪ್‍ಸ್ಟಿಕ್, ಕ್ರೀಮ್ ಹಚ್ಚಿಕೊಳ್ಳುವಾಗ ತಪ್ಪು ಮಾಡಿದರೆ ನೋಡಲು ಚೆನ್ನಾಗಿರುತ್ತದೆ. ಆದರೆ ದೊಡ್ಡವರ ಆದ ಮೇಲೆ ಸಹ ಫ್ಯಾಷನ್ ವಿಚಾರದಲ್ಲಿ ತಪ್ಪು ಮಾಡಿದರೆ ನೋಡಿದವರು ನಗುತ್ತಾರೆ. ಸರಿಯಾದ ಉಡುಗೆ-ತೊಡುಗೆ, ಸಂದರ್ಭಕ್ಕೆ ತಕ್ಕಂತಹ ಬಟ್ಟೆಗಳನ್ನು ನಾವು ಧರಿಸಬೇಕು. ಸಮಯ-ಸಂದರ್ಭ, ಹೋಗಬೇಕಾದ ಸ್ಥಳ, ಭೇಟಿಯಾಗುವಂತಹ ಜನರು ಇವರನ್ನೆಲ್ಲ ಗಮನದಲ್ಲಿರಿಸಿಕೊಂಡು ನಾವು ಫ್ಯಾಷನ್ ಮಾಡಬೇಕೆ ಹೊರತು, ಇದೆಯೆಂದುಕೊಂಡು, ಫ್ಯಾಷನ್ ಮಾಡಲು ಹೋಗಬಾರದು, ಅದು ಮುಜುಗರಕ್ಕೆ ದಾರಿ ಮಾಡಿಕೊಡುವುದು ಖಂಡಿತ. ಬನ್ನಿ ಇಂದು ಮಹಿಳೆಯರು ಮಾಡುವ ಕೆಲವೊಂದು ಫ್ಯಾಷನ್ ತಪ್ಪುಗಳ ಕುರಿತು ತಿಳಿದುಕೊಳ್ಳೋಣ....

ತಪ್ಪಾದ ಒಳ ಉಡುಗೆ
ಯಾವಾಗ ನೀವು ಬಿಳಿ ಟಾಪ್ ಅಥವಾ ಬಟ್ಟೆಯನ್ನು ಧರಿಸುತ್ತೀರೋ, ಆಗ ಒಳ ಉಡುಗೆಯನ್ನು ಸಹ ಬಿಳಿಯದನ್ನೆ ಧರಿಸಿ. ಏಕೆ ಎಂದು ಬಿಡಿಸಿ ಹೇಳಬೇಕಿಲ್ಲಾ ತಾನೇ?

ಓವರ್ ಮೇಕಪ್
ಮೇಕಪ್ ಯಾವತ್ತೂ ಮೇಕಪ್ ತರಹ ಕಾಣಬಾರದು. ಒಂದು ವೇಳೆ ಮೇಕಪ್ ನಿಮ್ಮ ತ್ವಚೆಯ ಮೇಲೆ ಪದರದಂತೆ ಕಂಡು ಬಂದರೆ, ಅದು ಒಂದು ವೈಫಲ್ಯ ಎಂದು ಭಾವಿಸಬೇಕಾಗುತ್ತದೆ.

ವಿಚಿತ್ರವಾದ ಕೂದಲಿನ ಬಣ್ಣಗಳು
ಪ್ರಯೋಗಗಳನ್ನು ಮಾಡುವಾಗ ಕೆಲವೊಮ್ಮೆ ತಪ್ಪಾಗುತ್ತದೆ. ಅದರಲ್ಲೂ ಕೂದಲಿಗೆ ಬಣ್ಣ ಹಾಕುವಾಗ ಒಮ್ಮೊಮ್ಮೆ ತಪ್ಪಾಗಿ ಹೋಗುತ್ತದೆ. ಆಗ ಮುಜುಗರವನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಆಭರಣಗಳು
ಯಾವತ್ತಿಗೂ ಸರಳತೆಗೆ ಆಧ್ಯತೆ ನೀಡಿ. ಕೆಲವೊಮ್ಮೆ ಮನೆಯಲ್ಲಿ ಇರುವ ಎಲ್ಲಾ ಒಡವೆಗಳನ್ನು ನಿಮ್ಮ ಮೈ-ಮೇಲೆ ಹಾಕಿಕೊಂಡು ಹೋಗುವುದರಿಂದ ಜನ ನೋಡಿ ನಗುವ ಸರಕಾಗಿ ಹೋಗುತ್ತೀರಾ.

ಬಿಗಿಯಾದ ಪ್ಯಾಂಟ್‌ಗಳು
ಹೆಣ್ಣು ಬಿಗಿಯಾದ ಪ್ಯಾಂಟ್‌ಗಳನ್ನು ಧರಿಸಿದರೆ ನೋಡಲು ಚಂದವಾಗಿ ಕಾಣುತ್ತಾಳೆ. ಆದರೆ ಅದು ತೀರಾ ಬಿಗಿಯಾದಾಗ, ಅದನ್ನು ಧರಿಸುವವರಿಗೆ ಗೊತ್ತು ಅದರ ಕಷ್ಟಗಳು.

ಸಡಿಲವಾದ ಉಡುಪುಗಳು
ಯಾವತ್ತಿಗೂ ನೀವು ಧರಿಸುವ ಉಡುಗೆಗಳು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿರಬೇಕು. ಸಡಿಲವಾದ ಉಡುಪುಗಳು ನಿಮ್ಮ ಫ್ಯಾಷನ್ ಅನ್ನು ಹಾಳು ಮಾಡಿಬಿಡುತ್ತವೆ.

ಅಧಿಕವಾಗಿ ತೋರಿಸಿಕೊಳ್ಳುವುದು
ಹೌದು, ಕೆಲವೊಮ್ಮೆ ಫ್ಯಾಷನ್ ತಪ್ಪುಗಳು ನಾವು ಅಧಿಕವಾಗಿ ತೋರಿಸಿಕೊಳ್ಳಲು ಹೋದಾಗ ಸಂಭವಿಸಿ ಬಿಡುತ್ತವೆ. ಯಾವತ್ತಿಗೂ ಇತಿ-ಮಿತಿ ಒಳ್ಳೆಯದು ಎಂಬುದನ್ನು ಮರೆಯಬೇಡಿ. ಅತಿ ಯಾವತ್ತಿಗೂ ಅಪಾಯಕ್ಕೆ ಆಹ್ವಾನವನ್ನು ನೀಡುತ್ತದೆ.



Click it and Unblock the Notifications
