Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಐಬಿಎಫ್‌ಡಬ್ಲ್ಯೂ: ಕಣ್ಮನ ಸೆಳೆದ ಮುದ್ದಿನ ರಾಣಿ ಸೋನಮ್ ಕಪೂರ್!
ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಇಂಡಿಯನ್ ಬ್ರೈಡಲ್ ಫ್ಯಾಷನ್ ವೀಕ್ 2015 (IBFW) ಪ್ರಸಿದ್ಧ ವಿನ್ಯಾಸಕಾರರಾರದ ಅಬು ಜಾನಿ - ಸಂದೀಪ್ ಕೋಸ್ಲಾರವರ ಸುಂದರವಾದ ವಿನ್ಯಾಸಗಳ ಸಂಗ್ರಹವನ್ನು ಪ್ರದರ್ಶಿಸುವ ಮೂಲಕ ಪ್ರಾರಂಭಗೊಂಡಿತು. ಈ ಫ್ಯಾಷನ್ ವೀಕ್‌ನ ಅಗ್ರ ತಾರೆಯಾಗಿ ರ‍್ಯಾಂಪ್ ಮೇಲೆ ಬಂದವರು ಸೋನಮ್ ಕಪೂರ್ ಇವರು ಈ ಉಡುಗೆಯಲ್ಲಿ ತುಂಬಾ ಮುದ್ದು ಮುದ್ದಾಗಿ ಕಂಡು ಬಂದರು.
ವಧುವಿನ ಅಲಂಕಾರವನ್ನು ಮಾಡಿಕೊಂಡಿದ್ದ ಈಕೆ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಳು ಎಂದರೆ ತಪ್ಪಾಗಲಾರದು. ಈಕೆಯನ್ನು ವಧುವಿನ ಅಲಂಕಾರದಲ್ಲಿ ನೋಡಿದ ಜನರು ಮಂತ್ರ ಮುಗ್ಧರಾದರು. ಈ ಪ್ರಸಿದ್ಧ ವಿನ್ಯಾಸಕಾರರು ತಮ್ಮ ಸಂಗ್ರಹಗಳನ್ನು ವಾರಣಾಸಿಯ ಪ್ರಸಿದ್ಧ ಘಾಟ್‌ಗಳ ಸೆಟ್‌ನಲ್ಲಿ ಪ್ರಸ್ತುತ ಪಡಿಸಿದರು. ಇಂಡಿಯಾ ಬ್ರೈಡಲ್ ಫ್ಯಾಷನ್ ಶೋದ ಝಲಕ್
ಇಲ್ಲಿ ಪ್ರದರ್ಶನಗೊಂಡ ಪ್ರತಿಯೊಂದು ವಿನ್ಯಾಸವು ಅದ್ಭುತವಾದ ಅಪರೂಪವಾದ ರೇಷ್ಮೆ, ಅಂಚು, ಚಿನ್ನ ಮತ್ತು ಬೆಳ್ಳಿಯ ಥ್ರೆಡ್ ವರ್ಕ್ ಮತ್ತು ಕಾರ್ಪೇಟ್ ವೀವಿಂಗ್‌ಗಳನ್ನು ಹೊಂದಿದ್ದವು. IBFW 2015 ರಲ್ಲಿ ಅಬು ಜಾನಿಯವರು ವಿನ್ಯಾಸ ಮಾಡಿದ ವಧುವಿನ ಉಡುಪುಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ವಿಚಾರ ನಿಮಗೆ ಅರ್ಥವಾಗುತ್ತದೆ. ಅವುಗಳಲ್ಲಿ ಸಾಂಪ್ರದಾಯಿಕ ಫ್ಯಾಬ್ರಿಕ್ ಮತ್ತು ಮೋಟಿಫ್‌ಗಳು ಇದ್ದವು.
ಜೊತೆಗೆ ಹೊಳಪಿನಿಂದ ಕೂಡಿದ ಮತ್ತು ಗ್ಲಾಮರಸ್ ಆಗಿದ್ದ, ಸ್ವರೊವ್ಸ್‌ಕಿ ಕ್ರಿಸ್ಟಲ್‍ಗಳು ಸಹ ಈ ಉಡುಪುಗಳ ಅಂದವನ್ನು ಹೆಚ್ಚಿಸಿದ್ದವು. ಬನ್ನಿ ನಾವು ಆ ಅದ್ಭುತವಾದ ಸಂಗ್ರಹವನ್ನು ನಾವು ಸಹ ಒಮ್ಮೆ ನೋಡಿಕೊಂಡು ಬರೋಣ...

ಶೋನ ಅಗ್ರಗಣ್ಯ ತಾರೆಯಾಗಿ ಸೋನಮ್ ಕಪೂರ್
ಯುವರಾಣಿಯರು ಈಗಲೂ ಸಹ ಇದ್ದಾರೆ!!! ಅದಕ್ಕೆ ನಮ್ಮ ಬಳಿ ಸಾಕ್ಷಿಗಳು ಸಹ ಇವೆ, ಸೋನಮ್ ಕಪೂರ್‌ರವರನ್ನು ಅಬು ಜಾನಿ - ಸಂದೀಪ್ ಕೋಸ್ಲಾರವರು ವಿನ್ಯಾಸ ಮಾಡಿದ ಉಡುಗೆಯಲ್ಲಿ ನೋಡಿದಾಗ ನಮಗೆ ಅನಿಸಿದ್ದು ಹೀಗೆ. BMW IBFW 2015 ರ ಈ ಶೋನಲ್ಲಿ ಆಕೆ ಆಕಾಶದಿಂದ ಧರೆಗಿಳಿದ ರಂಭೆಯಂತೆ ಕಂಡು ಬಂದಳು. ಅದರಲ್ಲಿಯೂ ಆಕೆ ಧರಿಸಿದ್ದ ಗೋಲ್ಡನ್ ಬ್ರೈಡಲ್ ಗೌನ್ ತಾರಾ ಮಂಡಲದಷ್ಟೇ ಪ್ರಕಾಶ ಮಾನವಾಗಿ ಹೊಳೆಯುತ್ತಿತ್ತು.

ಮಿರಿ ಮಿರಿ ಮಿರುಗುವ ಬಿಳಿ
ಬಿಳಿಯ ಸೀರೆಯನ್ನು ಉಡಲು ಇಷ್ಟಪಡುವ ವಧುವಿಗಾಗಿ, ಈ ವಿನ್ಯಾಸವು ಹೇಳಿ ಮಾಡಿಸಿದ ಉಡುಗೆಯಾಗಿತ್ತು. ವರನ ಚಿತ್ತವನ್ನು ಕದಿಯಲು ಬಹುಶಃ ಈ ವಿನ್ಯಾಸಕ್ಕಿಂತ ಸುಂದರವಾದ ವಿನ್ಯಾಸ ಮತ್ತೊಂದಿರಲಾರದು.

ಮನಮೋಹಕ ಅನಾರ್ಕಲಿಗಳು
ಕೆನೆ ಬಣ್ಣದ ಬಿಳುಪು ಮತ್ತು ಹಾಲಿನಂತಹ ಬಿಳುಪಿನ ಶೇಡ್‌ನ ಈ ಅನಾರ್ಕಲಿಗಳು BMW IBFW 2015ರ ರ‍್ಯಾಂಪ್ ಮೇಲೆ ನೋಡುಗರ ಪ್ರಧಾನ ಆಕರ್ಷಣೆಯಾಗಿದ್ದವು. ಅಬು ಈ ಶೋನಲ್ಲಿ ಈ ಹಿಂದೆ ಪ್ರದರ್ಶಿಸಿದ ಕೆಲವು ಬಟ್ಟೆಗಳನ್ನೇ ಪ್ರದರ್ಶಿಸಿದರು, ಆದರೂ ಅವುಗಳಲ್ಲಿ ನಮಗೆ ಹಿಡಿಸದ ಒಂದೇ ಒಂದು ಉಡುಗೆಯನ್ನು ನಾವು ನೋಡಲಿಲ್ಲ.

ನೆಟ್ ಬಾಡೀಸ್
ಅನಾರ್ಕಲಿ ಗೌನ್ ಮೇಲೆ ಇದ್ದ ನೆಟ್ ಬಾಡೀಸ್ ನೋಡುಗರ ಮನಸೂರೆಗೊಳ್ಳುವಂತಿತ್ತು. ಇದರ ಮೇಲೆ ಇದ್ದ ಡ್ರೇಪ್‌ಗಳು, ಆ ಉಡುಗೆಯ ಜೊತೆಗೆ ಅಚ್ಚುಕಟ್ಟಾಗಿ ಹೊಂದಿಕೊಂಡಿದ್ದವು.

ಯುವರಾಣಿಗಾಗಿ
ರ‍್ಯಾಂಪ್ ಮೇಲೆ ಟನ್‌ಗಟ್ಟಲೆ ಪ್ರಿನ್ಸೆಸ್ ಗೌನ್ ಅನ್ನು ನಾವು ನೋಡಿದೆವು. ಡೀಪ್ ನೆಕ್‌ಲೈನ್ ಇರುವ ಬಾಸಮ್ ಲುಕ್ ಮತ್ತು ಕ್ರಿಸ್ಟಲ್‌ಗಳಿಂದ ಕೂಡಿದ ಗೌನ್‌ಗಳು, ನೋಡುಗರನ್ನು ಮಂತ್ರ ಮುಗ್ದಗೊಳಿಸುತ್ತಿತ್ತು.

ಬ್ಯಾಕ್‌ಲೆಸ್ ವಸ್ತ್ರಗಳು
ಗಾಗ್ರಗಳ ಮೇಲೆ ಇದ್ದ ಅಧಿಕವಾದ ವಾರಣಾಸಿ ಪ್ರಿಂಟ್‍ಗಳು ಸ್ಕರ್ಟ್ ಜೊತೆಗೆ ಚೆನ್ನಾಗಿ ಹೊಂದಿಕೊಂಡಿದ್ದವು. ಚೋಲಿಯ ಮೇಲೆ ಇದ್ದ ಕನ್ನಡಿಗಳ ವರ್ಕ್ ನೋಡುವವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು.



Click it and Unblock the Notifications