Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಐಜೆಡಬ್ಲ್ಯೂ: ಗ್ಲಾಮರಸ್ ಲುಕ್‌ನಲ್ಲಿ ಸೋಹಾ ಅಲಿ ಖಾನ್
ಇಂಡಿಯಾ ಇಂಟರ್‌ನ್ಯಾಷನಲ್ ಜ್ಯುವೆಲ್ಲರಿ ವೀಕ್ 2015ನಲ್ಲಿ ಸ್ವರವ್ಸ್‌ಕಿ ಜೆಮ್‌ಸ್ಟೋನ್‌ಗಳ ಸಹಯೋಗದ ಜೊತೆಗೆ ಸೂರ್ಯ ಗೋಲ್ಡ್‌ನವರು ಪ್ರಸ್ತುತಪಡಿಸಿದ ಸಂಗ್ರಹವು ಅದ್ಭುತವಾಗಿತ್ತು. ಈ ಅನುಪಮವಾದ ಕಲಾ ಸಂಗ್ರಹವನ್ನು ಮಹಿಳೆಯರಿಗಾಗಿಯೇ ಅರ್ಪಿಸಲಾಗಿತ್ತು. ಸೂರ್ಯಗೋಲ್ಡ್ ಪ್ರತಿ ವರ್ಷವು ಒಂದು ಮಂತ್ರ ಮುಗ್ಧಗೊಳಿಸುವಂತಹ ಶೋವನ್ನು ನಡೆಸಿಕೊಡುತ್ತದೆ, ಎಂಬುದರಲ್ಲಿ ಎರಡು ಮಾತಿಲ್ಲ..
ಸೂಜಿಗದ ವಿಷಯವೇನೆಂದರೆ ಈ ಶೋನಲ್ಲಿ ಸಾಂಪ್ರದಾಯಿಕ ಮತ್ತು ದೇಶೀಯ ಸ್ಪರ್ಶದೊಂದಿಗೆ ಬೆರೆತು ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಚಂದ ಕಾಣಿಸುವ ಎಲ್ಲಾ ಅಂಶಗಳನ್ನು ತನ್ನೊಳಗೆ ಹೊಂದಿರುವ ಆಭರಣಗಳು ಪ್ರದರ್ಶನಗೊಂಡವು. ನೀವು ನೋಡುತ್ತಿರುವ ಸಂಪೂರ್ಣ ಸಂಗ್ರಹವನ್ನು ಸ್ವರೊವ್ಸ್‌ಕಿ ಜಿರ್ಕೋನಿಯಾದಿಂದ ವಿನ್ಯಾಸ ಮಾಡಲಾಗಿತ್ತು. ಇದು ನಿಜಕ್ಕೂ ಸೌಂದರ್ಯವನ್ನು ಬಯಸುವ ಹೆಂಗಸರಿಗೆ ಹೇಳಿ ಮಾಡಿಸಿದಂತಹ ಸಂಗ್ರಹವಾಗಿತ್ತು.
ಶೋನ ಪ್ರಮುಖ ಆಕರ್ಷಣೆಯಾಗಿದ್ದ ಸೋಹಾ ಅಲಿಖಾನ್ ರ‍್ಯಾಂಪ್ ಮೇಲೆ ಸೂರ್ಯ ಗೋಲ್ಡ್ಸ್‌ರವರ ಆಭರಣಗಳನ್ನು ಧರಿಸಿ ನಡೆದು ಬಂದರು. ಮನಾಲಿ ಜಗ್‌ಟಪ್‌ರವರು ವಿನ್ಯಾಸ ಮಾಡಿದ ಅದ್ಭುತವಾದ ಚಿನ್ನದ ಒಡವೆಗಳನ್ನು ಸೋಹಾ ಅಲಿಖಾನ್‌ರವರು ಈ ಸಂದರ್ಭದಲ್ಲಿ ಧರಿಸಿದ್ದರು. ಈ ಆಭರಣಗಳಿಗೆ ಒಪ್ಪುವಂತಹ ಕಿವಿಯ ರಿಂಗ್‌ಗಳನ್ನು ಜೊತೆಗೆ ಸ್ವರೊವ್ಸ್‌ಕಿ ಜೆಮ್‌ಸ್ಟೋನ್‌ಗಳನ್ನು, ಆರ್ಮ್ ಲೇಯರ್ಡ್ ಚೈನ್, ರಿಂಗ್ ಮತ್ತು ಕ್ರೌನ್ ಹೀಗೆ ವಿವಿಧ ಅಲಂಕಾರಿಕ ವಸ್ತುಗಳನ್ನು ಧರಿಸಿದ್ದ ಸೋಹಾ ಅಲಿಖಾನ್ ಗಂಧರ್ವ ಕನ್ಯೆಯಂತೆ ಈ ಸಂದರ್ಭದಲ್ಲಿ ಕಂಡು ಬಂದರು. ಬನ್ನಿ ಇಂಡಿಯಾ ಇಂಟರ್‌ನ್ಯಾಷನಲ್ ಜ್ಯುವೆಲ್ಲರಿ ವೀಕ್ 2015 ನಲ್ಲಿ ಸೂರ್ಯ ಗೋಲ್ಡ್‌ರವರು ಪ್ರದರ್ಶಿಸಿದ ಆ ಸಂಗ್ರಹವನ್ನು ನಾವು ಸಹ ಒಮ್ಮೆ ನೋಡೋಣ...

ಶೋನ ಪ್ರಧಾನ ಆಕರ್ಷಣೆಯಾಗಿ ಸೋಹಾ ಅಲಿ ಖಾನ್
ಸೋಹಾಳ ತಲೆಯ ಮೇಲಿದ್ದ ಕಿರೀಟವು ಆಕೆಗೆ ಯುವರಾಣಿಯಂತಹ ಮೆರಗನ್ನು ನೀಡಿತ್ತು. ಅದರ ಮೇಲೆ ಕ್ಲಿಯರ್ ಕಟ್ ವಜ್ರಗಳ ಜೊತೆಗೆ ಹೊಳೆಯುವ ಮಾಣಿಕ್ಯಗಳು ಈಕೆಗೆ ಮತ್ತಷ್ಟು ಮೆರಗನ್ನು ನೀಡಿದ್ದವು.

ಸೋಹಾಳ ಚಿನ್ನದ ಲುಕ್
ವಜ್ರದ ಕಿರೀಟದ ಜೊತೆಗೆ ಗೋಲ್ಡ್ ಸ್ಟಡ್ ಮಾಡಿದ್ದ ರಿಂಗ್ ಸಹ ಇತ್ತು, ಜೊತೆಗೆ ಕೈಯಲ್ಲಿ ಗೋಲ್ಡ್ ಕಡ ಬೇರೆ ಹೀಗೆ ಒಟ್ಟಾರೆ ಸೋಹಾ ತಮ್ಮ ಲುಕ್ ಜೊತೆಗೆ ರ‍್ಯಾಂಪ್ ಮೇಲೆ ಕಿಚ್ಚು ಹಚ್ಚಿದ್ದರು.

ಹೊಳೆಯುವ ಕಿವಿಯ ರಿಂಗ್‌ಗಳು
ಒಂದು ಪದರದ ಆರ್ಮ್‌ಲೆಟ್ ಮತ್ತು ಹೊಳೆಯುವ ವಜ್ರದ ಕಿವಿ ರಿಂಗ್‌ಗಳು ಒಂದಕ್ಕೊಂದು ಹೊಂದಿಕೊಳ್ಳುತ್ತಿದ್ದವು. ಈಕೆ ಧರಿಸಿದ್ದ ಕಿವಿಯ ರಿಂಗ್‌ಗಳು ನೋಡಲು ಆಕರ್ಷಕವಾಗಿದ್ದವು ಮತ್ತು ಅದರ ಮೇಲೆ ಇದ್ದ ಟಿಯರ್ ಡ್ರಾಪ್ ಮುತ್ತು ನೋಡಲು ಮತ್ತಷ್ಟು ಸುಂದರವಾಗಿತ್ತು.

ಪಚ್ಚೆ ಮತ್ತು ಮುತ್ತು
ಪಚ್ಚೆ ಮತ್ತು ಮುತ್ತುಗಳು ಸಹ ಸೂರ್ಯಗೋಲ್ಡ್‌ನವರ ವಿನ್ಯಾಸಗಳಲ್ಲಿ ಅದ್ಭುತವಾದ ಸ್ಥಾನಗಳನ್ನು ಪಡೆದಿದ್ದವು. ವಿನ್ಯಾಸಕಾರರು ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಅವುಗಳ ಸೌಂದರ್ಯವನ್ನು ಹೆಚ್ಚಿಸಿದ್ದರು.

ಫ್ಲೋರಲ್ ಪ್ಯಾಟರ್ನ್‌ಗಳು ಮತ್ತು ಕಲ್ಲುಗಳು
ಫ್ಲೋರಲ್ ಪ್ಯಾಟರ್ನ್ ಇದ್ದ ನೆಕ್‌ಲೆಸ್‌ನಲ್ಲಿ ಸ್ವಲ್ಪ ಮಟ್ಟಿಗಿನ ಅಮೂಲ್ಯವಾದ ಕಲ್ಲುಗಳನ್ನು ಮತ್ತು ಹರಳುಗಳನ್ನು ಬಳಸಲಾಗಿತ್ತು. ಕಿವಿಯ ರಿಂಗ್‌ಗಳು ಸಹ ನೆಕ್‌ಲೆಸ್‌ಗೆ ಹೊಂದಿಕೊಳ್ಳುತ್ತಿದ್ದವು.



Click it and Unblock the Notifications
