Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ನವ ಜೋಡಿ ಶಾಹಿದ್-ಮೀರಾ ರಜಪೂತ್ ವಿವಾಹ ಫೋಟೋ
ಯುವತಿಯರ ಮನಸ್ಸನ್ನು ಕದ್ದಿದ್ದ ಯುವನಾಯಕ ಶಾಹಿದ್ ಕಪೂರ್ ಕೊನೆಗೂ ವಿವಾಹಬಂಧನಕ್ಕೆ ಒಳಗಾಗಿದ್ದಾರೆ. ಇವರು ತಮ್ಮ ಪ್ರೇಯಸಿ ಮೀರಾ ರಜಪೂತ್‌ರನ್ನು ಇತ್ತೀಚೆಗೆ ವಿವಾಹವಾಗಿದ್ದು ಕೆಲದಿನಗಳ ಹಿಂದೆ ಗುರುದ್ವಾರದಲ್ಲಿ ದಂಪತಿಗಳಾಗಿ ಭೇಟಿ ನೀಡಿದ ಬಳಿಕ ಸಾರ್ವಜನಿಕರಾಗಿ ಕಾಣಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮೀರಾ ರಜಪೂತ್ ರವರು ಗುಲಾಬಿ ಬಣ್ಣದ, ಇಡಿಯ ದೇಹಭಾಗವನ್ನು ಅತ್ಯುತ್ತಮ ಕುಸುರಿ ಕಲೆಯಿಂದ ಆವೃತವಾದ ಲೆಹೆಂಗಾ ಧರಿಸಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು. ಇದರಲ್ಲಿ ಜರಿಯಿಂದ ಮಾಡಿದ ಕುಸುರಿ ಮತ್ತು ನಡುನಡುವೆ ಚಿನ್ನದ ಬಣ್ಣದ ಚಿಕ್ಕ ಗೋಲಗಳು ಕ್ಷೀಣವಾಗಿ ಗೆಜ್ಜೆದನಿಯನ್ನು ಅನುಸರಿಸುತ್ತಿದ್ದವು.
ಈ ಉಡುಗೆಯ ಅತ್ಯಂತ ಆಕರ್ಷಕ ಭಾಗವೆಂದರೆ ಕೆಳಭಾಗದಲ್ಲಿ ಅಗಲವಾದ ಅಡ್ಡಪಟ್ಟಿಗೆ ಮಾಡಿದ ಕುಸುರಿ ಕೆಲಸ. ಖನ್ನಾ ರವರು ವಿನ್ಯಾಸಗೊಳಿಸಿದ ಈ ಉಡುಗೆಗೆ ಹೊಂದುವ ಗುಲಾಬಿ ಬಣ್ಣದ ರವಿಕೆ ಮತ್ತು ಪಾರದರ್ಶಕ ಸೆರಗು ಸಹಾ ಇದೇ ವಿನ್ಯಾಸದ ಕುಸುರಿ ಕೆಲಸವನ್ನು ಹೊಂದಿದ್ದು ಒಟ್ಟಾರೆ ನವವಧುವಿನ ಸೌಂದರ್ಯವನ್ನು ಅಪ್ಸರೆಯರ ಸಾಲಿಗೆ ಸೇರಿಸಿತ್ತು ಸೆರಗನ್ನು ಗರತಿಯರಂತೆ ತಲೆತುಂಬಾ ಹೊದ್ದುಕೊಂಡಿದ್ದ ಕಾರಣ ಅವರು ಅಪ್ಪಟ ಭಾರತೀಯ ನಾರಿಯಾಗಿ ಭಾರತದ ಸೌಂದರ್ಯವನ್ನು ಜಗತ್ತಿಗೆ ಪ್ರಕಟಿಸುತ್ತಿದ್ದರು.
ಇತ್ತ ವರ ಶಾಹಿದ್ ಕಪೂರ್ ತಿಳಿಹಳದಿ ಬಣ್ಣದ ಶೇರ್ವಾನಿ ಧರಿಸಿದ್ದು ಇಡಿಯ ಉಡುಗೆ ಒಂದು ಸರಳ ವಿನ್ಯಾಸದಿಂದ ಕೂಡಿತ್ತು. ನವದಂಪತಿಗಳಿಗೆ ಬೋಲ್ಡ್ ಸ್ಕೈ ತಂಡ ಅಭಿನಂದಿಸುತ್ತಿದೆ ಹಾಗೂ ಅವರ ವಿವಾಹದ ಬಳಿಕದ ಕೆಲವು ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತಿದೆ...
More Pics Click Here

ಮೀರಾ ರಜಪೂತ್
ಈಗ ಶ್ರಿಮತಿ ಶಾಹಿದ್ ಕಪೂರ್ ಆಗಿರುವ ಮೀರಾ ರಜಪೂತ್ ಧರಿಸಿದ್ದ ಗುಲಾಬಿ ಬಣ್ಣದ ಲೆಹೆಂಗಾ, ಅದೇ ಬಣ್ಣದ ರವಿಕೆ ಮತ್ತು ಸೆರಗು ಹಾಗೂ ವಿಶೇಷವಾಗಿ ಲೆಹೆಂಗಾದಲ್ಲಿ ಮಾಡಿದ್ದ ಕುಸುರಿ ಕೆಲಸ ಮನಮೋಹಕವಾಗಿದೆ. ಅದರಲ್ಲೂ ಲೆಹೆಂಗಾದ ಮುಂಭಾಗ ಮತ್ತು ಕೆಳಭಾಗದ ಪಟ್ಟಿಯಲ್ಲಿ ಢಾಳಾಗಿರುವ ಜರಿಯ ಕುಸುರಿ ಮತ್ತು ಚಿನ್ನದ ಬಣ್ಣದ ಚಿಕ್ಕ ಗೋಲಗಳು ಈ ದಿರಿಸಿಗೆ ಹೆಚ್ಚಿನ ಮೆರುಗು ನೀಡುತ್ತಿದೆ.

ಗುಲಾಬಿ ಮತ್ತು ಚಿನ್ನದ ಬಣ್ಣದ ಲೆಹೆಂಗಾ
ಗುಲಾಬಿ ಲೆಹೆಂಗಾ ಮತ್ತು ಒಪ್ಪುವ ಅದೇ ಬಣ್ಣದ ರವಿಕೆ ಚಿಕ್ಕ ತೋಳಿನದ್ದಾಗಿದ್ದು ಪಾರದರ್ಶಕ ದಾವಣಿಯನ್ನೇ ಸೆರಗನ್ನಾಗಿಸಿಕೊಂಡ ಪರಿ ಅಪ್ರತಿಮವಾಗಿತ್ತು. ರವಿಕೆ ಮತ್ತು ದಾವಣಿಗಳಲ್ಲಿಯೂ ಲೆಹೆಂಗಾವನ್ನೇ ಹೋಲುವ ಕುಸುರಿಯಿದ್ದು ಲೆಹೆಂಗಾಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದ್ದುದರಿಂದ ಗಮನ ಲೆಹೆಂಗಾ ಕಡೆ ಹೆಚ್ಚು ಕೇಂದ್ರೀಕರಿಸಲು ನೆರವಾಗಿತ್ತು.

ಭುಜಕ್ಕೆ ಬಂಧಿಸಲ್ಪಟ್ಟ ದುಪಟ್ಟಾ
ಗುಲಾಬಿ ಬಣ್ಣದ ಪಾರದರ್ಶಕ ದಾವಣಿ ಅಥವಾ ದುಪಟ್ಟಾವನ್ನು ಮಡಿಕೆಯಾಗಿಸಿ ಅವರು ಭುಜದ ಬಳಿ ಸೀರೆಯ ಪಿನ್ ಒಂದನ್ನು ಬಳಸಿ ಭದ್ರವಾಗಿ ಕಟ್ಟಿಕೊಂಡಿದ್ದರು. ಇದರಿಂದ ಎದೆಯಭಾಗದಲ್ಲಿ ನೆರಿಗೆಯಾಗಿದ್ದ ದುಪಟ್ಟಾ ಸಾಂಪ್ರಾದಾಯಿಕ ಶೈಲಿಯ ಸೀರೆಯನ್ನುಟ್ಟಂತೆ ಕಾಣಿಸುತ್ತಿತ್ತು.

ಕಂದು ಹರಳಿನ ಮುತ್ತಿನ ಸರ
ಅವರು ತೊಟ್ಟಿದ್ದ ಸರವೂ ಗುಲಾಬಿಯ ವಿರುದ್ದ ಬಣ್ಣವಾದ ಗಾಢ ಕಂದು ಬಣ್ಣದ ಎಮರಾಲ್ಡ್, ಮತ್ತು ರೂಬಿ ಹರಳು ಮತ್ತು ನಡುವೆ ಮುತ್ತಿನ ಮಣಿಗಳನ್ನು ಹೊಂದಿದ್ದು ಉಡುಗೆಯ ಸೌಂದರ್ಯವನ್ನು ಹೆಚ್ಚಿಸಲು ನೆರವಾಗಿತ್ತು. ಕೈಯಲ್ಲಿದ್ದ ಕಂದು ಬಣ್ಣದ ಬ್ರೇಸ್ಲೆಟ್ ಮತ್ತು ಗುಲಾಬಿ ಬಣ್ಣದ ಬಳೆಗಳು ಅವರ ಉಡುಗೆಯನ್ನು ಪರಿಪೂರ್ಣವಾಗಿಸಿತ್ತು.

ಶಾಹಿದ್ ಕಪೂರ್ ರ ಶೇರ್ವಾನಿ
ಶಾಹಿದ್ ಕಪೂರ್ ಸರಳವಾದ ಸಾಂಪ್ರಾದಾಯಿಕ ಶೇರ್ವಾನಿ ತೊಟ್ಟಿದ್ದು ಕಪ್ಪುಬಣ್ಣದ ಸರಳ ಪಾದರಕ್ಷೆ ತೊಟ್ಟಿದ್ದರು. ತಲೆಗೆ ಪಗಡಿ, ಶೇರ್ವಾನಿಯ ಕೊರಳಭಾಗದಲ್ಲಿ ಚಿನ್ನದ ಬಣ್ಣದ ಬಟನ್ನುಗಳು ಅವರ ಉಡುಗೆಯನ್ನು ಪೂರ್ಣಗೊಳಿಸಿದ್ದವು.

ಮದುವೆಯ ಸೆಲ್ಫೀ ಚಿತ್ರ
ಗುರುದ್ವಾರದಲ್ಲಿ ವಿವಾಹದ ಸಂಪ್ರದಾಯಗಳನ್ನು ಪೂರೈಸಿದ ಬಳಿಕ ತಮ್ಮ ವಧುವಿನೊಂದಿಗೆ ಅವರು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದು ಹೀಗೆ.



Click it and Unblock the Notifications