Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಆಫೀಸ್ ಡ್ರೆಸ್‌ನಲ್ಲಿ ಸಖತ್ ಟ್ರೆಂಡಿಯಾಗಿ ಕಾಣಲು ಬಯಸುವಿರಾ?
ಕಚೇರಿಯ ಸಮವಸ್ತ್ರ ಧರಿಸಿದ ಮಾತ್ರಕ್ಕೆ ನೀವು ಎಲ್ಲರಂತೆಯೇ ಕಾಣಿಸುತ್ತೀರಾ ಎಂದು ಅರ್ಥವಲ್ಲ! ಬಹುತೇಕ ಕಚೇರಿ ಸ್ಥಳಗಳು ಸಮವಸ್ತ್ರಗಳನ್ನು ಕೋರುತ್ತವೆ. ಅವುಗಳು ನಿಮ್ಮ ವಸ್ತ್ರಗಳ ಜೊತೆಗೆ ಮಾಡುವ ಪ್ರಯೋಗವನ್ನು ಕಸಿದುಕೊಳ್ಳುತ್ತವೆ. ಕಚೇರಿ ಸಮವಸ್ತ್ರದಲ್ಲಿ ಹೇಗೆ ಟ್ರೆಂಡಿಯಾಗಿ ಕಾಣುವುದು ಎಂದು ಅಚ್ಚರಿಪಡುತ್ತಿದ್ದೀರಾ? ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಕಚೇರಿಯಲ್ಲಿ ನೀವು ಸಮವಸ್ತ್ರ ಧರಿಸಿದ ಮೇಲೆ ನಿಮ್ಮ ಮಟ್ಟಿಗೆ ನೀವು ಅನನ್ಯವಾಗಿ ಕಾಣುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಅದೇ ಅವಧಿಯಲ್ಲಿ ನೀವು ನಿಮ್ಮ ಸಹೋದ್ಯೋಗಿಗಳಿಗಿಂತ ವಿಭಿನ್ನವಾಗಿ ಕಾಣುವ ಪ್ರಯತ್ನವನ್ನು ಮಾಡಬಹುದು. ಕಚೇರಿಯಲ್ಲಿ ನೀವು ಹೇಗೆ ಟ್ರೆಂಡಿಯಾಗಿ ಕಾಣಬಹುದು ಎಂಬುದಕ್ಕೆ ನಾವು ಇಂದು ನಿಮಗಾಗಿ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ. ಅದನ್ನು ಅನುಸರಿಸಿ, ನಿಮ್ಮ ಲುಕ್ ಅನ್ನು ಸುಧಾರಿಸಿಕೊಳ್ಳಿ. ಮೆಹೆಂದಿ ಸಮಾರಂಭ: ನಿಮ್ಮ ದಿರಿಸಿನ ಆಯ್ಕೆ ಹೇಗಿದ್ದರೆ ಚೆಂದ?

ಆಕ್ಸೆಸರಿಗಳು
ಸಮವಸ್ತ್ರದ ಜೊತೆಗೆ ಆಕ್ಸೆಸರಿಗಳನ್ನು ಬಳಸುವ ನಿರ್ಬಂಧಗಳು ನಿಮಗೆ ಇಲ್ಲವಾದಲ್ಲಿ, ಅದರ ಮೂಲಕ ನೀವು ಕೆಲವೊಂದು ಪ್ರಯೋಗಗಳನ್ನು ಮಾಡಬಹುದು. ಲಘುವಾದ ಆಭರಣಗಳು ಈ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುತ್ತವೆ. ಇವುಗಳು ನಿಮ್ಮನ್ನು ನೋಡುವವರನ್ನು ಮೊದಲ ನೋಟದಲ್ಲಿಯೇ ಗಮನ ಸೆಳೆಯುವ ಸಾಮರ್ಥ್ಯವನ್ನು ಹೊಂದಿದೆ.
ಡಿಸೈನರ್ ಬ್ಯಾಗ್‌ಗಳು
ಒಂದು ಸುಂದರವಾದ ಡಿಸೈನರ್ ಬ್ಯಾಗ್‌ನ ಗ್ಲಾಮರನ್ನು ಮೀರಿಸುವ ಮತ್ತೊಂದು ಅಂಶ ನಿಮಗೆ ದೊರೆಯುವುದಿಲ್ಲ. ನಿಮ್ಮ ಸಮವಸ್ತ್ರ ಎಷ್ಟು ಡಲ್ ಆಗಿದೆ ಎಂಬುದು ಮುಖ್ಯವಲ್ಲ. ನಿಮ್ಮ ಸುಂದರವಾದ ಬ್ಯಾಗ್‌ನಿಂದ ನೀವು ಸದಾ ಆಕರ್ಷಣೆಯನ್ನು ಉಳಿಸಿಕೊಳ್ಳಬಹುದು. ಆದರೆ ಅದನ್ನು ಆರಿಸಿಕೊಳ್ಳುವುದರಲ್ಲಿ ಜಾಣತನವಿರಬೇಕು ಅಷ್ಟೇ. ಒಂದು ವೇಳೆ ನೀವು ಅಧಿಕ ಮಟ್ಟದ ವೃತ್ತಿಪರರಾಗಿದ್ದಲ್ಲಿ, ಅನುಪಮವಾದ ಡಿಸೈನರ್ ಬ್ಯಾಗ್‌ಗಳನ್ನು ಕೊಂಡುಕೊಳ್ಳಿ. ಇದು ನಿಮ್ಮ ಲುಕ್‍ಗೆ ಸಹಾಯ ಮಾಡುವ ಒಂದು ಸಲಹೆಯಾಗಿರುತ್ತದೆ.
ನಿಮ್ಮ ಹೇರ್‌ಸ್ಟೈಲ್‌ಗೆ ಹೇರ್ ಸ್ಟೈಲ್ ಮಾಡಿ
ಸಮವಸ್ತ್ರ ಇದೆಯೆಂದು ಕೂದಲನ್ನು ಏಕೆ ಮರೆಯುವಿರಿ. ಅಯ್ಯೋ, ಕೂದಲನ್ನು ಸ್ಟೈಲಿಷ್ ಆಗಿ ತೋರಿಸಬೇಕು ಎಂದಲ್ಲಿ ಕತ್ತರಿಸಿಕೊಳ್ಳಬೇಕು ಎಂದುಕೊಳ್ಳಬೇಡಿ. ಪ್ರತಿದಿನವು ಇದರಲ್ಲಿ ನೀವು ಪ್ರಯೋಗವನ್ನು ಮಾಡಬಹುದು. ನಿಮಗೆ ಬೇಕಾದಲ್ಲಿ ಬಣ್ಣದ ಮೂಲಕ ಸಹ ಕೂದಲಿಗೆ ಮೆರಗನ್ನು ನೀಡಬಹುದು. ಒಮ್ಮೆ ಪ್ರಯತ್ನಿಸಿ, ಪ್ರಯೋಗಗಳು ನಿಮ್ಮನ್ನು ನಿಮ್ಮನ್ನು ಮುನ್ನಡೆಸುತ್ತವೆ.
ಕೈಗಡಿಯಾರ
ಯಾವ ಬಗೆಯ ಕಚೇರಿ ವಸ್ತ್ರವನ್ನು ನೀವು ಧರಿಸುವಿರಿ ಎನ್ನುವುದು ಮುಖ್ಯವಲ್ಲ, ಎಂತಹ ಸ್ಟೈಲಿಷ್ ವಾಚ್ ಧರಿಸುತ್ತೀರಿ ಎಂಬುದು ಮುಖ್ಯ. ಗಂಡಸರು ಯಾವಾಗಲು ಬ್ರ್ಯಾಂಡೆಡ್ ವಾಚ್‌ಗಳನ್ನು ಬಯಸುತ್ತಾರೆ. ಆದರೆ ಹೆಂಗಸರು ಅಗ್ಗದ, ಆದರೆ ಟ್ರೆಂಡಿಯಾದ ವಾಚನ್ನು ಬಯಸುತ್ತಾರೆ. ಉದ್ದೇಶಗಳ ಹೊರತಾಗಿ ಕೈಗಡಿಯಾರವು ಗೌರವದ ಸಂಕೇತ. ಇದು ನೀವು ಪ್ರಯತ್ನಿಸಿ ನೋಡಬಹುದಾದ ಒಂದು ಕುತೂಹಲಕಾರಿ ಸಲಹೆಯಾಗಿರುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ.
ಪಾದರಕ್ಷೆಗಳು
ಒಂದು ವೇಳೆ ನೀವು ಎಕ್ಸಿಕ್ಯೂಟಿವ್ ಹುದ್ದೆಯಲ್ಲಿದ್ದಲ್ಲಿ, ಕಪ್ಪು ಅಥವಾ ಕಾರ್ಡೊವನ್ ಲೆದರ್ ಶೂವನ್ನು ಧರಿಸಿ. ಅದನ್ನು ಪಾಲಿಶ್ ಮಾಡಿ ಸ್ವಚ್ಛವಾಗಿ ಇರಿಸಿಕೊಳ್ಳಿ. ಹೆಂಗಸರು ಸದಾ ಕ್ಲೋಸ್‌ಡ್ ಶೂಗಳು ಅಥವಾ ಒಪನ್ ಸ್ಯಾಂಡಲ್‌ಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ ಅವುಗಳು ನಿಮಗೆ ಹೊಂದುತ್ತವೆಯೇ ಇಲ್ಲವೆ, ಎಂದು ಖಾತ್ರಿಪಡಿಸಿಕೊಳ್ಳಿ. ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಲು ಸ್ವಲ್ಪ ಬ್ರ್ಯಾಂಡೆಡ್ ಆಗಿ ಪರಿವರ್ತನೆಯಾಗಲು ಹಿಂದೇಟು ಹಾಕಬೇಡಿ.



Click it and Unblock the Notifications




