Latest Updates
-
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ
ಫ್ಯಾಷನ್ ಪ್ರಿಯರಿಗೆ ಶುರುವಾಯಿತು ಭರ್ಜರಿ ರಸದೌತಣ!
ಬಹುನಿರೀಕ್ಷಿತ ಲ್ಯಾಕ್ಮೆ ಫ್ಯಾಷನ್ ವೀಕ್ 2015 ವಿಂಟರ್/ಫೇಸ್ಟಿವ್ ಅನ್ನು ನುರಿತ ವಸ್ತ್ರವಿನ್ಯಾಸಕರಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾರವರು ಅದ್ಧೂರಿಯಾಗಿ ಉದ್ಘಾಟನೆ ಮಾಡಿದರು. ಅಲ್ಲದೆ ಆಧುನಿಕತೆ ಮತ್ತು ಹಳೆಯ ಹಿಪ್ಪಿ ಶೈಲಿಯ ಉಡುಗೆಗಳ ಸಂಗ್ರಹವನ್ನು ಪ್ರದರ್ಶಿಸುವ ಮೂಲಕ ಸಮಾರಂಭಕ್ಕೆ ಇನ್ನಷ್ಟು ರಂಗೇರಿಸಿದರು.

ಪ್ರತಿಷ್ಠಿತ ಸಮಾರಂಭದಲ್ಲಿ ಒಂದಾದ ಲ್ಯಾಕ್ಮೆ ಫ್ಯಾಷನ್ ಸಪ್ತಾಹದಲ್ಲಿ, ತಮ್ಮದೇ ಶೈಲಿಯಲ್ಲಿ ಮೋಡಿ ಮಾಡಿದ ಇವರು ದೇದೀಪ್ಯಮಾನವಾಗಿ ಬೆಳಗಿಸಲಾಗಿದ್ದ ನಡಿಗೆಯ ಪಥದ ಮೇಲೆ ತಮ್ಮ ಇತ್ತೀಚಿಗಿನ ಸ೦ಗ್ರಹವನ್ನು ರೂಪದರ್ಶಿಗಳ ಮೂಲಕ ಪ್ರದರ್ಶಿಸಿ, ಎಲ್ಲರನ್ನೂ ಮೂಕವಿಸ್ಮಿತ ಗೊಳಿಸಿದರು..!
ಈ ಮೋಡಿಕಾರರಿಬ್ಬರು ತಮ್ಮ 'ಮರುಪರಿಷ್ಕರಣೆ ಮತ್ತು ಮರು ಸಂಶೋಧನೆ"ಯ ಮೂಲಕ ಚಿಕನ್‌ಕಾರಿ, ಜರ್ದೋಸಿ ಮತ್ತು ಮಿರರ್-ವರ್ಕ್ ಅನ್ನು ತಮ್ಮದೇ ಆದ ಅದ್ಭುತದ ವಿನ್ಯಾಸವಾಗಿ ಮಾರ್ಪಾಡು ಮಾಡಿಬಿಟ್ಟಿದ್ದರು. ಪ್ರಸಕ್ತ ಚಾಲ್ತಿಯಲ್ಲಿರುವ ವಿನ್ಯಾಸಗಳನ್ನು ಅವರು ಸಿಲ್‌ಹಾಟ್‌ಗಳಲ್ಲಿ ಪ್ರಸ್ತುತಪಡಿಸಿದ್ದು, ಅದರಲ್ಲಿ ಅವರು ಯುವಕರಿಗಾಗಿ ವಿಂಟರ್/ಫೇಸ್ಟಿವ್ ಸಂಗ್ರಹವನ್ನು ಪ್ರಸ್ತುತ ಪಡಿಸಿದರು. ಈ ಸಂಗ್ರಹಕ್ಕೆ ಅವರಿಟ್ಟ ಹೆಸರು ಜವಾನಿ ಜಾನೆಮನ್.
ತಮ್ಮ ವರ್ಣರಂಜಿತವಾದ ವಧುವಿನ ಉಡುಪುಗಳಿಗಾಗಿ ಹೆಸರುವಾಸಿಯಾಗಿರುವ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾರವರು ಆಧುನಿಕ ಕಾಲದ ಚೆಲುವೆಯರಿಗಾಗಿ ಮತ್ತು ಅವರ ಸ್ವತಂತ್ರ ಸ್ಫೂರ್ತಿಗಾಗಿ ಒಂದು ಒಳ್ಳೆಯ ಸಂಗ್ರಹವನ್ನು ಪ್ರಸ್ತುತಪಡಿಸಿದರು. ಇದರಲ್ಲಿ ಅವರು ನಮ್ಮ ಸಾಂಪ್ರದಾಯಿಕ ಶೈಲಿಗಳನ್ನು ನವೀನ ರೀತಿಯಲ್ಲಿ ಪ್ರಸ್ತುತಪಡಿಸಿದರು.
ಇವರ ವಿನ್ಯಾಸಗಳಲ್ಲಿ ನಾವು ಪ್ರಸಿದ್ಧ ವಿನ್ಯಾಸಕಾರ ಕ್ಸೆರ್‌ಕ್ಸೆಸ್ ಭಾಥೆನಾರವರ ಕುಖ್ಯಾತ ಗೋಲ್ಡನ್ ಬಾಡಿ ಸೂಟ್ ಅನ್ನು ಪರ್ವೀನ್ ಬಾಬಿ ಮೇಲೆ ನೋಡಿದವು, ಅದು ಬರೋಬ್ಬರಿ 33 ವರ್ಷಗಳ ನಂತರ! ಅಷ್ಟೇ ಏಕೆ ಈ ಸಂಗ್ರಹದಲ್ಲಿ ಹಲವಾರು ಗೋಲ್ಡನ್ ಸೆಕ್ವಿನಡ್ ರಚನೆಗಳೂ ಕಣ್ಮನ ಸೆಳೆದವು.
ಅವರ ಉಡುಗೆಗಳ ಸಂಗ್ರಹವು 70-80 ರ ದಶಕದ ಉಡುಗೆಗಳಿಗೆ ಸಲ್ಲಿಸುವ ಗೌರವ ಸೂಚಕವಾಗಿತ್ತು. ಅದರಲ್ಲಿಯೂ ಈ ಸಂಜೆಯ ಉಡುಗೆಗಳಿಗೆ ಹಿಪ್ಪಿ ಶೈಲಿಯನ್ನು ಮತ್ತು ಗ್ಲಾಮರನ್ನು ಹದವಾಗಿ ಬೆರೆಸಲಾಗಿತ್ತು.
ಫ್ಲೋವಿ ಮತ್ತು ಫೇರ್‌ಡ್ ಗೌನ್‌ಗಳಿಂದ ಹಿಡಿದು ಹೊಳೆಯುವ ಹೊಂಬಣ್ಣದ ಸಂಜೆಯ ಉಡುಗೆಗಳವರೆಗೆ ಈ ಸಂಗ್ರಹದಲ್ಲಿ ಎಲ್ಲವೂ ಸ್ಟೈಲ್‌ನಿಂದ ಕಂಗೊಳಿಸುತ್ತಿದ್ದವು. ಒಟ್ಟಾರೆಯಾಗಿ ಈ ಸಂಗ್ರಹವು ಹಳೆಯ ಸ್ಟೈಲಿನ ಮರು ಆವಿಷ್ಕಾರದ ಜೊತೆಗೆ ರೆಟ್ರೊ ಟ್ರೆಂಡ್ ಅನ್ನು ಪ್ರತಿನಿಧಿಸುತ್ತಿತ್ತು.
ಅಬು ಜಾನಿ ಮತ್ತು ಸಂದೀಪ್ ಖೋಸ್ಲಾರವರು ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಹಾಲಿವುಡ್‌ನಲ್ಲಿಯೂ ಸಹ ಹೆಸರುವಾಸಿಯಾಗಿರುವ ವಿನ್ಯಾಸಕಾರ ಜೋಡಿಯಾಗಿದೆ.
ಈ ಶೋ ನೋಡಲು ಜಯಾ ಬಚ್ಚನ್‌ನಿಂದ ಹಿಡಿದು ಡಿಂಪಲ್ ಕಪಾಡಿಯ ಮತ್ತು ಸೋನಾಲಿ ಬೇಂದ್ರೆಯವರೆಗೆ ಹಲವಾರು ತಾರಾಮಣಿಗಳು ಇಲ್ಲಿ ಹಾಜರಿದ್ದರು. ಹೀಗೆ ಬಾಲಿವುಡ್‌ನ ಸುಂದರಿಯರು ತಮ್ಮ ಅಚ್ಚು ಮೆಚ್ಚಿನ ವಿನ್ಯಾಸಕಾರನಿಗೆ ಬೆಂಬಲವನ್ನು ಸೂಚಿಸಲು ಇಲ್ಲಿಗೆ ಆಗಮಿಸಿದ್ದರು.



Click it and Unblock the Notifications




