Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲಾಕ್ಮೆ ಫ್ಯಾಷನ್ ವೀಕ್-ದಂಗುಬಡಿಸಿದ ನಿಖಿಲ್‌ರವರ ರಸವಿದ್ಯೆ
ವಧುವಿನ ಉಡುಪುಗಳ ಪ್ರದರ್ಶನ ಮೇಳವಾದ ಪ್ರತಿಷ್ಠಿತ ಲಾಕ್ಮೆ ಫ್ಯಾಷನ್ ವೀಕ್ - 2015 ಪ್ರಾರಂಭವಾಗಿದ್ದು ನೋಡು ನೋಡುತ್ತಿದ್ದಂತೆಯೇ ಎರಡು ದಿನ ಕಳೆದೇ ಹೋಗಿದೆ. ಎರಡನೇ ದಿನದಂದು ತಮ್ಮ ಎಂದಿನ ನೂತನ ಶೈಲಿಗಳನ್ನು ಪ್ರದರ್ಶಿಸುವ ಖ್ಯಾತ ಉಡುಪು ವಿನ್ಯಾಸಗಾರ ನಿಖಿಲ್ ಥಾಂಪಿಯವರು ತಮ್ಮ ಅತ್ಯಮೋಘ ವಿನ್ಯಾಸಗಳನ್ನು ಪ್ರದರ್ಶಿಸಿ ನೆರೆದವರನ್ನು ದಂಗುಬಡಿಸಿದರು.

ಓಬಿ ಬೆಲ್ಟ್ ಎಂಬ ಎದೆಮಟ್ಟದಲ್ಲಿ ಪಟ್ಟಿಗಳನ್ನು ವಿಚಿತ್ರ ವಿನ್ಯಾಸಗಳಲ್ಲಿ ವಿಶಿಷ್ಟವಾಗಿ ಪ್ರದರ್ಶಿಸುವ ಮೂಲಕ ಈಗಾಗಲೇ ಖ್ಯಾತಿ ಪಡೆದಿರುವ ನಿಖಿಲ್ ಇದೇ ನಿಪುಣತೆಯನ್ನು ವಧುವಿನ ಶೃಂಗಾರಕ್ಕೂ ಉಪಯೋಗಿಸಿಕೊಂಡಿರುವುದು ಅವರ ಜಾಣ್ಮೆಗೆ ಹಿಡಿದ ಕೈಗನ್ನಡಿಯಾಗಿದೆ.
ಸಾಮಾನ್ಯವಾಗಿ ಸೀರೆ, ಲೆಹೆಂಗಾಗಳಲ್ಲಿ ರವಿಕೆಯನ್ನುಟ್ಟರೆ ನಿಖಿಲ್ ತನ್ನ ವಿನ್ಯಾಸಗಳಲ್ಲಿಯೂ ಸೀರೆ ಮತ್ತು ಲೆಹೆಂಗಾಗಳಲ್ಲೂ ಓಬಿ ಬೆಲ್ಟ್ ಉಪಯೋಗಿಸಿ ಇದುವರೆಗೆ ನೋಡುತ್ತಾ ಬಂದಿದ್ದ ಸಂಪ್ರದಾಯಕ್ಕೆ ತಿರುವು ನೀಡಿದ್ದಾರೆ.
ವಧುವಿನ ಈ ಶೃಂಗಾರ ಉಡುಪುಗಳು ಅಪ್ಪಟ ರೇಷ್ಮೆಯ ಬಟ್ಟೆಯಿಂದ ತಯಾರಿಸಲಾಗಿದ್ದು ಅದಕ್ಕೆ ಪೂರಕವಾಗಿ ಲಿನೆನ್, ಹತ್ತಿ ಮತ್ತು ಪಾಲಿಸ್ಟರ್ ಬಟ್ಟೆಗಳನ್ನು ಉಪಯೋಗಿಸಲಾಗಿದೆ. ಸೀರೆಯ ಸಹಜ ಸೌಂದರ್ಯವನ್ನು ಹೆಚ್ಚಿಸಲು ಸಾಂಪ್ರಾದಾಯಿಕ ದುಪಟ್ಟಾವನ್ನು ಅತಿ ಹೆಚ್ಚಾಗಿ ಶೃಂಗರಿಸಲಾಗಿದೆ.
ಹಿಂದಿನ ಪ್ರದರ್ಶನಗಳಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಮಾಡಿ ಮನಸೆಳೆದಿದ್ದ ವಿನ್ಯಾಸಗಾರರಿಂದ ಈ ವರ್ಷ ಇನ್ನಷ್ಟು ಹೆಚ್ಚಿನ ಮನಮೋಹಕ ವಿನ್ಯಾಸಗಳನ್ನು ನಿರೀಕ್ಷಿಸಿ ಆಗಮಿಸಿದ್ದ ಸೌಂದರ್ಯೋಪಾಸಕರಿಗೆ ಅವರು ನಿರಾಶೆಗೊಳಿಸಲಿಲ್ಲ.
ಇಂದಿನ ಪ್ರದರ್ಶನದಲ್ಲಿ ಹತ್ತು ಹಲವು ವಿನೂತನ ಬಗೆಯ, ವಿವಿಧ ವರ್ಣಗಳ ಸೀರೆ ಮತ್ತು ಇತರ ಉಡುಪುಗಳು ಮೇಳೈಸಿದ ವಿನ್ಯಾಸಗಳು ಕಂಡುಬಂದವು. ವಿಶೇಷವಾಗಿ ಬಿಳಿ, ಚಿನ್ನ, ಗೋಧಿ, ಖಾಕಿ ಮತ್ತು ಹಣ್ಣಾದ ಮಾವಿನ ಹಳದಿ ಬಣ್ಣಗಳು ಪ್ರಮುಖವಾಗಿ ಕಂಡುಬಂದವು.
ಹಲವು ವಿನ್ಯಾಸಗಳು ಎದೆಯ ನಡುಭಾಗದಲ್ಲಿ ತೆರೆದಿದ್ದಂತಿದ್ದರೂ ಕಲಾತ್ಮಕವಾಗಿದ್ದು ಅತಿರೇಕವೆನಿಸಲಿಲ್ಲ. ಇದರೊಂದಿಗೆ ಕುತ್ತಿಗೆ, ಕಿವಿಯಲ್ಲಿ ಯಾವುದೇ ಆಭರಣ ಧರಿಸದೇ ಕೇವಲ ಮೊಣಕೈ ಬಳಿ ಒಂದೆರಡು ಸಾದಾ ಬಳೆಯನ್ನು ಧರಿಸಿದ್ದುದು ತಮ್ಮ ವಿನ್ಯಾಸಕ್ಕೆ ಹೆಚ್ಚಿನ ಆಕರ್ಷಣೆ ಪಡೆಯಲು ನೆರವಾಗಿತ್ತು. ಸಮರ್ಪಕ ಬಣ್ಣದ ಪಾದರಕ್ಷೆ ಮತ್ತು ಕೇಶವಿನ್ಯಾಸವೂ ವಧುವಿನ ನೂತನ ಅವತಾರಕ್ಕೆ ನಾಂದಿಯಾಗಿತ್ತು.



Click it and Unblock the Notifications



