Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಲ್‌ಎಫ್‍ಡಬ್ಲ್ಯೂ: ಮನಸೆಳೆದ ಶ್ರುತಿ ಸಂಚೆತ್ತಿಯವರ ಅಲೆಮಾರಿ ಶೈಲಿ
ಶ್ರುತಿ ಸಂಚೆತ್ತಿಯವರು ಲ್ಯಾಕ್ಮೆ ಫ್ಯಾಷನ್ ವೀಕ್ ಸಮ್ಮರ್/ರೆಸಾರ್ಟ್ 2015 ನ ರ‍್ಯಾಂಪ್ ಮೇಲೆ ಮಣ್ಣಿನ ಬಣ್ಣಗಳು, ಕಡುಗೆಂಪು ಮತ್ತು ಬ್ರೀಜೀಯಾದ ನೆರಳು ಬೆಳಕಿನ ಬಣ್ಣಗಳನ್ನು ತಂದರು. ಆಕೆಯ ಅಲೆಮಾರಿಗಳ ಶೈಲಿಯು ಭಾರತದ ಥಾರ್ ಮರುಭೂಮಿಯಿಂದ ಪ್ರೇರೇಪಿತರಾಗಿತ್ತು, ಅವರಂತೆ ಯಾವುದೇ ಗಡಿಗಳು ಇಲ್ಲದೆ, ಸಾಮಾಜಿಕ ಮಾನದಂಡಗಳು ಇಲ್ಲದೆ, ಸಂಪ್ರದಾಯಗಳ ಮಿತಿಯಿಲ್ಲದೆ ಬದುಕುವವರಿಗಾಗಿ ಈ ಶೈಲಿಯನ್ನು ಅವರು ಪರಿಚಯಿಸಿದರು.
ಈ ಸಂಗ್ರಹವು ಸ್ವಾಭಾವಿಕವಾದ ಫ್ಯಾಬ್ರಿಕ್‌ಗಳನ್ನು ಬಳಸಿಕೊಂಡಿತ್ತು, ಜೊತೆಗೆ ಸ್ವಾಭಾವಿಕವಾದ ವಸ್ತುಗಳನ್ನೆ ಬಳಸಿಕೊಳ್ಳುವ ಮನೋಭಾವವನ್ನು ಪ್ರದರ್ಶಿಸಿತ್ತು. ಶ್ರುತಿ ಸಂಚೆತ್ತಿಯವರ "ಪಿನ್ಯಾಕಲ್" ಸುಂದರವಾದ ನೇಯ್ಗೆಗಳನ್ನು ಮತ್ತು ಕುಶಲ ಕಲೆಗಳನ್ನು ಹೊಂದಿತ್ತು. ಖಾದಿ ರೇಷ್ಮೆ, ಬೇಸಿಗೆ ರೇಷ್ಮೆ, ಸಾವಯವ ಹತ್ತಿ ಮತ್ತು ಇನ್ನಿತರ ಫ್ಯಾಬ್ರಿಕ್‌ಗಳನ್ನು ಇದರಲ್ಲಿ ಬಳಸಲಾಗಿತ್ತು ಮತ್ತು ಇದನ್ನು ನೇಯ್ಗೆಯವರಿಂದ ನೇಯಿಸಲಾಗಿತ್ತು.

ರಾಜಾಸ್ಥಾನಿ ಮತ್ತು ಗುಜರಾತ್‌ನ ಬೋಧಿ, ಲೆಹಾರಿಯ ಮತ್ತು ಇತ್ಯಾದಿ ಪ್ರಿಂಟ್‌ಗಳನ್ನು ರ‍್ಯಾಂಪ್ ಮೇಲೆ ತರಲಾಗಿತ್ತು. ಶ್ರುತಿಸಂಚೆತ್ತಿಯವರ ಈ ಉಡುಗೆಗಳು ಸಾಂಪ್ರಾದಾಯಿಕವಾಗಿ ಕಾಣುವುದರ ಜೊತೆಗೆ ಸ್ಟೈಲಿಷ್ ಆಗಿ ಕಾಣುತ್ತಿದ್ದವು.
ಚಿಕ್ ಎಥ್ನಿಕ್ ಪ್ರಿಂಟೆಡ್ ಕ್ರಾಪ್ ಟಾಪ್ಸ್ ಮತ್ತು ಫ್ಲೇರ್ಡ್ ಸ್ಕರ್ಟ್‌ಗಳು ಸೊಬಗಿನಿಂದ ಕೂಡಿದ್ದವು. ರ‍್ಯಾಂಪ್ ಮೇಲೆ ಶ್ರುತಿಯವರು ವರ್ಣರಂಜಿತವಾದ ಅಲೆಮಾರಿಗಳ ಶೈಲಿಯನ್ನು ತಂದಿದ್ದರು . ಇದು ಈ ಬೇಸಿಗೆಗೆ ಮತ್ತಷ್ಟು ಸ್ಟೈಲಿಷ್ ಆಗಿ ಕಾಣುತ್ತಿದ್ದವು.
ಈ ಸಂಗ್ರಹವು ಸ್ವಚ್ಛಂದ ಮನೋಭಾವದ ಹುಡುಗಿಯರ ನೆಚ್ಚಿನ ಸ್ಟೈಲ್ ಆಗುವಂತೆ ಕಂಡು ಬಂದಿತು. ಇದಕ್ಕೆ ಸ್ವಲ್ಪ ಬೊಹಿಮಿಯನ್ ಸ್ಪರ್ಶವನ್ನು ಸಹ ಒದಗಿಸಿದ್ದರಿಂದ, ಶ್ರುತಿಯವರ ಪಿನ್ಯಾಕಲ್ ಎಲ್‌ಎಫ್‍ಡಬ್ಲ್ಯೂ 2015 ರಲ್ಲಿ ಜನರ ಮೆಚ್ಚುಗೆಯನ್ನು ಪಡೆಯಿತು.
ಮರ್ಸೆಲ, ಆಲೀವ್, ನೀಲಿ, ಕೆಮ್ಮಣ್ಣು ಬಣ್ಣ, ಪೀಚ್-ಗುಲಾಬಿ, ಸ್ಟ್ರಾಬೆರ್ರಿ ಗುಲಾಬಿ ಮತ್ತು ಇನ್ನಿತರ ಬಣ್ಣಗಳನ್ನು ಇದರಲ್ಲಿ ಬಳಸಲಾಗಿತ್ತು. ಮುಘಲ್ ಬ್ಲಾಕ್ ಪ್ರಿಂಟ್‌ಗಳು, ಗುಜರಾತಿನ ಎಂಬ್ರಾಯಿಡರಿ, ಕಿಲಿಮ್ ಎಂಬ್ರಾಯಿಡರಿ, ಬಂಜಾರ ಎಂಬ್ರಾಯಿಡರಿ ಎಲ್ಲವೂ ಪ್ರಸಕ್ತ ಕಾಲಕ್ಕೆ ಒಳ್ಳೆಯ ಸ್ಪರ್ಶವನು ನೀಡಿದ್ದವು.
ಆಕೆಯ ಸಮ್ಮರ್ ರೆಸಾರ್ಟ್ 2015 ಸಂಗ್ರಹವು ಅಲೆಮಾರಿಗಳ ಮನೋಭಾವವಿರುವವರಿಗಾಗಿ. ಇದು ಪ್ರಸಕ್ತವು ಮತ್ತು ಆಧುನಿಕತೆ ಎರಡನ್ನು ಒಳಗೊಂಡಿರುವ ಜೊತೆಗೆ ಸಾಂಪ್ರದಾಯಿಕ ಶೈಲಿಯನ್ನು ಸಹ ಹೊಂದಿತ್ತು.
ಸುಂದರವಾದ ಆಕ್ಸೆಸರಿಗಳು ಅಂದರೆ ಸನ್‍ಗ್ಲಾಸ್‌ಗಳು, ಜಂಕ್ ಥ್ರೆಡ್ ನೆಕ್‌ಲೆಸ್ ಮತ್ತು ಬೆಲ್ಟ್‌ಗಳು ಇದಕ್ಕೆ ರೆಟ್ರೋ ಶೈಲಿಯನ್ನು ನೀಡಿದ್ದವು. ಎಲ್ಲಾ ಮಾಡೆಲ್‌ಗಳು ಲೆದರ್ ಬ್ರೌನ್ ಟೋಟ್ ಬ್ಯಾಗ್‌ಗಳನ್ನು ತೆಗೆದುಕೊಂಡು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಈ ಶೋನಲ್ಲಿ ವಿವೇಕ್ ಒಬೆರಾಯ್ ಸಹ ಬಿಳಿಯ ಬಣ್ಣದ ಕುರ್ತಾ ಪೈಜಾಮನಲ್ಲಿ ಸುಂದರವಾಗಿ ಕಂಗೊಳಿಸುತ್ತ ಕಂಡು ಬಂದರು.



Click it and Unblock the Notifications



