Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಧರೆಗಿಳಿದು ಬಂದ ದೇವಕನ್ಯೆಯಂತೆ ಕಂಗೊಳಿಸಿದ ಸೋನಮ್
ಬಾಲಿವುಡ್ ನಟಿಯರೆಂದರೆ ಹಾಗೆ. ಅವರು ಏನೇ ಬಟ್ಟೆ ಧರಿಸಿದರೂ ಸುದ್ದಿಯಾಗುತ್ತಾರೆ. ನಟ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಆರಂಭದಲ್ಲಿ ಸ್ವಲ್ಪ ಸಂಪ್ರದಾಯಸ್ಥಳಂತೆ ಫೋಸ್ ಕೊಡುತ್ತಿದ್ದರೂ ಬಳಿಕ ಎಲ್ಲರಂತೆ ತಾನೂ ವಿವಿಧ ವಿನ್ಯಾಸದ ಬಟ್ಟೆಬರೆಗಳನ್ನು ಧರಿಸಲು ಆರಂಭಿಸಿದಳು. ಆಕೆಯ ಅಂದಕ್ಕೆ ಯಾವುದೇ ಬಟ್ಟೆ ಧರಿಸಿದರೂ ಸುಂದರವಾಗಿ ಕಾಣಿಸುತ್ತಿದ್ದಳು.

ಇತ್ತೀಚೆಗೆ ನಡೆದ ಇಂಡಿಯನ್ ಇಂಟರ್ ನ್ಯಾಷನಲ್ ಜ್ಯುವೆಲ್ಲರಿ ವೀಕ್ -2015ನ ಉದ್ಘಾಟನೆಯಲ್ಲಿ ಸೋನಮ್ ಧರಿಸಿದ ಗೌನ್ ಎಲ್ಲರನ್ನು ಆಕರ್ಷಿಸುತ್ತಿತ್ತು. ಮೈಕಲ್ ಕೊಸ್ಟೆಲ್ಲೊ ವಿನ್ಯಾಸಗೊಳಿಸಿದ ಹಸಿರು ಗೌನ್ ನಲ್ಲಿ ಸೋನಮ್ ಧರೆಗಿಳಿದು ಬಂದ ದೇವಕನ್ಯೆಯಂತೆ ಕಾಣಿಸುತ್ತಿದ್ದಳು.
ಸೋನಮ್ ಕಪೂರ್ ಜ್ಯುವೆಲ್ಲರಿ ವೀಕ್‌ನ ಉದ್ಘಾಟನೆ ಮಾಡಲು ಪರದೆ ಸರಿಸುತ್ತಿದ್ದರೆ ಸೇರಿದ್ದ ಜನರೆಲ್ಲರೂ ಸೋನಮ್ ಕಪೂರ್ ಗೌನ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.
ವೃತ್ತಾಕಾರದ ಕುತ್ತಿಗೆಯನ್ನು ನೀಡಿದಂತಹ ಈ ಗೌನ್ ಭಾರೀ ಜನಪ್ರಿಯತೆಗೆ ಕಾರಣವಾಗಿದೆ. ಸೋನಮ್ ಧರಿಸಿದಂತಹ ಗೌನ್ ಅನ್ನು ಮೈಕಲ್ ಕೊಸ್ಟೆಲ್ಲೊ 2015ರ ಕ್ಯಾಪ್ಸುಲ್ ಕಲೆಕ್ಸನ್ ನಲ್ಲಿ ತಯಾರಿಸಿದ್ದಾರೆ. ಈ ಗೌನ್‌ನಲ್ಲಿ ಸೋನಮ್ ಕಪೂರ್ ಹಿಂದಿಗಿಂತ ಸುಂದರವಾಗಿ ಕಾಣಿಸಿದ್ದಲ್ಲದೆ ಆಕೆಯ ಮೈಯ ಹೆಚ್ಚಿನ ಭಾಗವನ್ನು ಮುಚ್ಚಲು ಗೌನ್ ವಿಫಲವಾಗಿತ್ತು. ಕುತ್ತಿಗೆಯ ಸುತ್ತಲಿನ ಭಾಗ ಸಂಪೂರ್ಣವಾಗಿ ಕಾಣಿಸಿಕೊಳ್ಳಲೆಂದೇ ಸೋನಮ್ ತನ್ನ ಕೂದಲನ್ನು ಅದಕ್ಕೆ ಹೊಂದಿಕೊಂಡೇ ಕಟ್ಟಿಕೊಂಡಿದ್ದಳು.
ಗೌನ್ ಧರಿಸಿದ್ದ ಸೋನಮ್ ಕುತ್ತಿಗೆ, ಕಿವಿ ಮತ್ತು ಚಿನ್ನದ ಆಭರಣಗಳು ಆಕೆಯ ಸೌಂದರ್ಯಕ್ಕೆ ಮೆರಗು ನೀಡಿದ್ದವು. ಸೋನಮ್ ಧರಿಸಿದ್ದ ವಜ್ರದ ಕೈಬಳೆಗಳು, ವಜ್ರ ಮಿಶ್ರಿತ ಕೈ ಉಂಗುರ ಮತ್ತು ಕಿವಿಯೋಲೆಗಳು ಆಕೆಯ ನಗುವಿಗೆ ಸ್ಪರ್ಧಿಯೆನ್ನುವಂತಿದ್ದವು.
ಸೋನಮ್‌ಳ ತಂಗಿ ರೆಹಾ ಕಪೂರ್ ಮತ್ತು ನರ್ಮತ ಸೋನಿ, ಸೋನಮ್‌ಳನ್ನು ಇಷ್ಟೆಲ್ಲಾ ಅಂದವಾಗಿಸಿದವರು. ಈ ಜ್ಯುವೆಲ್ಲರಿ ವೀಕ್‌ನಲ್ಲಿ ಮತ್ತಷ್ಟು ನಟಿಯರು ವಿವಿಧ ವಿನ್ಯಾಸದೊಂದಿಗೆ ಮಾರ್ಜಾಲ ನಡೆ ಹಾಕಲಿದ್ದಾರೆ ಎನ್ನುವುದನ್ನು ಸೋನಂ ವಿನ್ಯಾಸವೇ ಸಾರಿ ಹೇಳಿದೆ.



Click it and Unblock the Notifications


