Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಐಜೆಡಬ್ಲ್ಯೂ: ಕಣ್ಮನ ಸೆಳೆದ ಮೂಗುತಿ ಸುಂದರಿ ಸಾನಿಯಾ
IIJW 2015 ಅಥವಾ ಇಂಡಿಯನ್ ಇಂಟರ್ ನ್ಯಾಷನಲ್ ಜ್ಯುವೆಲ್ಲರಿ ವೀಕ್ -2015 ಎಂಬ ಅಪ್ಪಟ ಆಭರಣಪ್ರದರ್ಶನ ಉತ್ಸವದಲ್ಲಿ ಇಂದು ಮೂಗುತಿ ಸುಂದರಿ ಸಾನಿಯಾ ಮಿರ್ಜಾರವರು ಮೋನಿಕಾ ಅಗರ್ವಾಲ್ ರವರು ವಿನ್ಯಾಸಗೊಳಿಸಿದ 'ಜ಼ೊರಾಕ್ಷಿ' ಎಂಬ ನೂತನ ವಿನ್ಯಾಸದ ಆಭರಣಗಳನ್ನು ಪ್ರದರ್ಶಿಸಿದರು. ಈ ವಿನ್ಯಾಸಗಳಲ್ಲಿ ಹೂವುಗಳೇ ಪ್ರಧಾನವಾಗಿದ್ದು ವಿವಿಧ ಬಣ್ಣಗಳ, ಹರಳುಗಳ, ಮನಮೋಹಕವಾದ ಆಭರಣಗಳನ್ನು ಇಂದು ಪ್ರದರ್ಶಿಸಲಾಯಿತು.
ಎಲ್ಲರ ಕಣ್ಮನ ಸೆಳೆದ ಜೊಹ್ರಾಕ್ಷಿ ಆಭರಣಗಳ ಶ್ಲಾಘನೆಯನ್ನು ಪಡದು ಉದ್ಗರಿಸಿದ ಮೋನಿ ಅಗರ್ವಾಲ್ ರವರು: "ಜೊಹ್ರಾಕ್ಷಿ ಆಭರಣಗಳು ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ ರೀತಿಯಾಗಿದೆ. ಈ ಆಭರಣಗಳು ಸಾಂಪ್ರಾದಾಯಿಕವಾಗಿದ್ದರೂ ಇಂದಿನ ನಾರಿಯರು ಮೆಚ್ಚುವ ರೀತಿಯಲ್ಲಿರುವುದರಿಂದ ಸುಲಭ ವಿನ್ಯಾಸದಲ್ಲಿದ್ದರೂ ಒಂದು ನಿಗೂಢತೆಯನ್ನು ಕಾಯ್ದುಕೊಂಡಿದೆ. ಈ ವಿನ್ಯಾಸಗಳನ್ನು ಪ್ರದರ್ಶಿಸಲು ಸಾನಿಯಾರವರು ಅತ್ಯುತ್ತಮ ರಾಯಭಾರಿಯಾಗಿದ್ದಾರೆ' ಎಂದರು. ಧರೆಗಿಳಿದು ಬಂದ ದೇವಕನ್ಯೆಯಂತೆ ಕಂಗೊಳಿಸಿದ ಸೋನಮ್
ಒಂದು ರೀತಿಯ ನಿಗೂಢತೆಯನ್ನು ಕಾಯ್ದುಕೊಂಡಿರುವ ಜೊಹ್ರಾಕ್ಷಿ ಇಂದಿನ ನಾರಿಯರ ಅಚ್ಚುಮೆಚ್ಚಿನ ವಿನ್ಯಾಸಗಳಾಗಿವೆ. ಜೊಹ್ರಾಕ್ಷಿ ಆಕೆಯ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ. ತನ್ನ ಅಪ್ರತಿಮ ಟೆನಿಸ್ ಪ್ರತಿಭೆಯಿಂದ ಜಗತ್ತಿನ ಆಕರ್ಷಣೆ ಪಡೆದಿರುವ ಸಾನಿಯಾ ಇಂದು ಈ ದೇಸೀ ಉಡುಗೆ ಮತ್ತು ಆಭರಣಗಳಿಂದ ತಾನು ಮೂಗುತಿಗಿಂತಲೂ ಹೆಚ್ಚು ಎಂದು ತೋರಿಸಿಕೊಟ್ಟಿದ್ದಾರೆ.
ಈ ಸಂದರ್ಭಕ್ಕಾಗಿ ಅವರು ನೇರಳೆ ಬಣ್ಣದ ಸೀರೆಯನ್ನು ದಕ್ಷಿಣ ಭಾರತದ ಶೈಲಿಯಲ್ಲಿ ತೊಟ್ಟಿದ್ದರು. ತೋಳಿಲ್ಲದ ರವಿಕೆಗಿಂತಲೂ ಅವರ ಸೊಂಟವನ್ನು ಆವರಿಸಿದ್ದ ಡಾಬು ಹೆಚ್ಚಿನ ಆಕರ್ಷಣೆ ಹೊಂದಿತ್ತು. ಕುತ್ತಿಗೆಯಲ್ಲಿದ್ದ ವಜ್ರದ ಹಾರ ಓರ್ವ ಮಹಾರಾಣಿಯನ್ನು ನೆನಪಿಗೆ ತರುವಂತೆ ಮಾಡಿತ್ತು.

ಸಾನಿಯಾ ಮಿರ್ಜಾ
ಅಪ್ಪಟ ಭಾರತೀಯವಾದ ಈ ಕ್ರೀಡಾಪಟುವಿನ ಸೌಂದರ್ಯ ಮೋನಿ ಅಗರ್ವಾಲ್ ರವರ ಅಲಂಕಾರದೊಂದಿಗೆ ನವವಧುವಿನಂತೆ ಕಂಗೊಳಿಸಿತು

ಅಪ್ಪಟ ದೇಸೀ ವಧುವಿನಂತೆ...!
ಅಪ್ಪಟ ಕಾಂಚೀಪುರಂ ರೇಷ್ಮೆ ಸೀರೆ, ವಜ್ರ ಮತ್ತು ಇತರ ದುಬಾರಿ ಹರಳುಗಳನ್ನು ಹೊಂದಿರುವ ಕುತ್ತಿಗೆಯ ಭಾರೀ ಸರ, ಅಗಲವಾದ ಪಟ್ಟಿಯಂತಿರುವ ಕುತ್ತಿಗೆಯ ಇನ್ನೊಂದು ಸರ, ಸೊಂಟದಲ್ಲಿ ಡಾಬು ಧರಿಸಿ ಅಪ್ಪಟ ದೇಸೀ ವಧುವಿನಂತೆ ಕಂಗೊಳಿಸಿದರು.

ವಜ್ರ ಮತ್ತು ರೂಬಿ
ಇದೇ ಮಂಚದಲ್ಲಿ ವಜ್ರ ಮತ್ತು ರೂಬಿ ಹರಳುಗಳ ಸಂಗಮದ ಹಲವು ನೂತನ ಆಭರಣಗಳನ್ನೂ ಪ್ರದರ್ಶಿಸಲಾಯಿತು.

ಕಾಂಚಿಪುರಂ ರೇಷ್ಮೆ ಸೀರೆಗಳು
ಕಾಂಚಿಪುರಂನ ವಿವಿಧ ಬಣ್ಣ ಮತ್ತು ವಿನ್ಯಾಸದ ಭರ್ಜರಿ ಸೀರೆಗಳನ್ನೂ ಈ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. 'ದೇವೇಂದ್ರಿ' ಎಂಬ ಲಾಂಛನ ಹೊಂದಿರುವ ಈ ಸೀರೆಗಳು ವಾಸ್ತವವಾಗಿ ಕಾಂಚಿಪುರಂ ವರಲಕ್ಷ್ಮಿ ರೇಷ್ಮೆ ಸೀರೆಗಳಾಗಿದ್ದು ಮಹಿಳೆಯರು ಅತಿ ಇಷ್ಟ ಪಡುವ ವಿಲಾಸಿ ಮತ್ತು ನಯವಂತಿಕೆಯನ್ನು ಹೊಂದಿದೆ.

ಕಣ್ಣುಕುಕ್ಕುವ ವಜ್ರದ ನೆಕ್ಲೇಸ್
ತಮ್ಮ ಕುತ್ತಿಗೆಯ ಹೆಚ್ಚಿನ ಭಾಗವನ್ನು ಆಭರಣದಿಂದ ಆವರಿಸಿಕೊಳ್ಳಲು ಇಷ್ಟಪಡುವ ಮಹಿಳೆಯರಿಗೆ ಕಣ್ಣುಕುಕ್ಕುವ ಈ ವಜ್ರದ ನೆಕ್ಲೇಸ್ ಖಂಡಿತಾ ಇಷ್ಟವಾಗುತ್ತದೆ.



Click it and Unblock the Notifications
