Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಐಎಫ್‌ಎ 2015: ಸೌಂದರ್ಯ ಖನಿ ಬಿಪಾಶಾರ ಮೋಹಕ ಪಾಶ
ಬಾಲಿವುಡ್‌ನಲ್ಲಿ ತನ್ನದೇ ಆದ ಹವಾ ನಿರ್ಮಿಸಿರುವ ಹಾಟ್ ನಟಿ ಬಿಪಾಶಾ ಬಸು ಇತ್ತೀಚೆಗೆ ಐಐಎಫ್‌ಎ 2015ರ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಳು. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರೂ ಈ ಸುಂದರಾಂಗಿ ಬೀಸಿದ ಸೌಂದರ್ಯ ಪಾಶಕ್ಕೆ ನಿಬ್ಬೆರಗಾಗಿ ಹೋದರು..! ಕಾರಣ ಇಷ್ಟೇ, ಶಿವಾನ್ ಮತ್ತು ನರೇಶ್ ಔಟ್ ಫಿಟ್ ದಿರಿಸಿನಲ್ಲಿ ಬಿಪಾಶಾ ಸಖತ್ ಹಾಟ್, ಆಗಿ ಕಂಡುಬಂದಿದ್ದರು.
ಈ ಉಡುಗೆಯನ್ನು ವಿನ್ಯಾಸ ಮಾಡಿದ್ದು, ಶಿವಾನ್ ಮತ್ತು ನರೇಶ್, ಇವರು ಸ್ವಿಮ್ ವೇರ್ ವಿನ್ಯಾಸ ಮಾಡುವುದರಲ್ಲಿ ಪಳಗಿದವರು. ಅವರು ಇದರಲ್ಲಿ ಅಷ್ಟರ ಮಟ್ಟಿಗೆ ಖ್ಯಾತಿ ಸಹ ಪಡೆದಿದ್ದಾರೆ. ಈ ಉಡುಗೆ ಅವರ 2015ರ ಬೇಸಿಗೆ ಸಂಗ್ರಹದಲ್ಲಿ ಸೇರಿದ್ದಾಗಿದೆ.

ವಿನ್ಯಾಸಕಾರರ ಪ್ರಕಾರ ಇದು ಕಾಲ್ಡರ್ ನಿಯೊಪ್ರೇನ್ ದಿರಿಸಾಗಿದ್ದು, ತುಂಬು ತೋಳು ಮತ್ತು ಆಮೆಯಂತಹ ನೆಕ್ ಲೈನ್ ಹೊಂದಿತ್ತು. ಈ ನೆಕ್‌ಲೈನ್‌ನ ಮತ್ತೊಂದು ತುದಿಯಲ್ಲಿ, ವಿಶಿಷ್ಟವಾಗಿ ಕತ್ತರಿಸಿದ ವಿನ್ಯಾಸವಿತ್ತು. ಈ ಉಡುಗೆಯ ಸೊಂಟದ ಭಾಗವು ಒಂದು ಕಡೆ ಮೊಸ್ಸ್ ಡ್ರೇಪ್ ಟೇಪರಿಂಗ್ ಹೊಂದಿದ್ದರೆ, ಮತ್ತೊಂದು ಕಡೆ ಆಕೆಯ ನಡುವನ್ನು ಎತ್ತಿತೋರುವಂತೆ ಫಿಟ್ ಆಗಿತ್ತು.
ಈ ಲುಕ್ ನಲ್ಲಿ ಆಕೆ ಸುದ್ದಿಗೋಷ್ಠಿಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಇದಕ್ಕೆ ಒಪ್ಪುವಂತಹ ಕಪ್ಪು ಹೀಲ್‌ಗಳನ್ನು ಆಕೆ ಧರಿಸಿದ್ದಳು. ಈ ಉಡುಗೆಗೆ ಒಪ್ಪುವಂತಹ ಹೈ ಪೋನಿಟೇಲ್ ಕೇಶ ವಿನ್ಯಾಸವನ್ನು ಆಕೆ ಮಾಡಿಕೊಂಡಿದ್ದಳು. ಅದು ಆಕೆಯ ಲುಕ್‌ಗೆ ಮತ್ತಷ್ಟು ಮೆರಗನ್ನು ನೀಡಿತ್ತು. ಇದು ತೀರಾ ಎದ್ದು ಕಾಣುವಂತೆ ಇರಲಿಲ್ಲ, ಆದರೆ ಹಾಗೆಂದು ಉದಾಸೀನ ಮಾಡಲು ಸಹ ಆಗದಂತ ಲುಕ್ ಆಗಿತ್ತು.
ಭಾರವಾದ ಹ್ಯಾಂಡ್ ಕಪ್ ಮತ್ತು ಸ್ಮೋಕಿ ಐಸ್ ಈ ಉಡುಗೆಗೆ ಮತ್ತಷ್ಟು ಕಳೆಯನ್ನು ನೀಡಿದ್ದವು. ತುಟಿಗಳಿಗೆ ಪೀಚ್ ನ್ಯೂಡ್ ಲಿಪ್‌ಸ್ಟಿಕ್ ಮತ್ತು ಬೆರಳುಗಳಿಗೆ ಕೆಂಪು ನೇಲ್ ಪಾಲಿಶ್ ಈಕೆ ಧರಿಸಿದ್ದಳು. ಹೀಗೆ ಈಕೆ ಸಂಪೂರ್ಣವಾಗಿ ಸೌಂದರ್ಯದ ಖನಿಯಾಗಿ ಕಾಣಿಸಿಕೊಂಡಳು.



Click it and Unblock the Notifications


