Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಐಬಿಎಫ್‌ಡಬ್ಲ್ಯೂ:ಅಶಿಮಾ-ಲೀನಾ ಕೈಚಳಕಕ್ಕೆ ಭೇಷ್ ಎನ್ನಲೇಬೇಕು
ಆಭರಣಗಳ ಪ್ರದರ್ಶನ ಮುಗಿಯುತ್ತಿದ್ದಂತೆಯೇ ವಧುವಿನ ಉಡುಗೆಗಳ ಪ್ರದರ್ಶನವಾದ IBFW 2015 (India Bridal Fashion Week 2015) ಪ್ರದರ್ಶನ ಪ್ರಾರಂಭಗೊಂಡಿದೆ. ಎರಡನೆಯ ದಿನದಲ್ಲಿ ಪ್ರಮುಖವಾಗಿ ಪ್ರದರ್ಶಿಸಲ್ಪಟ್ಟ 'ದಕ್ಷಣ' ವಿನ್ಯಾಸದ ವಧುವಿನ ಉಡುಗೆಗಳ ಸಂಗ್ರಹ ನೆರೆದವರನ್ನು ನಿಬ್ಬೆರಗಾಗಿಸಿತು.
ಖ್ಯಾತ ಉಡುಪು ವಿನ್ಯಾಸಗಾರ ಜೋಡಿ ಅಶಿಮಾ-ಲೀನಾ ಯವರು ಪ್ರಸ್ತುತಪಡಿಸಿದ ನೂತನ ವಿನ್ಯಾಸಗಳನ್ನು ವಿವಿಧ ರೂಪದರ್ಶಿಗಳು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು. ಸುಗಮವಾದ ಹಿನ್ನೆಲೆ ಸಂಗೀತ ಮತ್ತು ಪೂರಕ ನೃತ್ಯಗಳು ಕಾರ್ಯಕ್ರಮಕ್ಕೆ ಕಳೆ ನೀಡಿದವು. ಎರಡನೆಯ ದಿನದ ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆಯೇ ಅಶಿಮಾ-ಲೀನಾರವರ ಉಡುಪುಗಳು ಭಾರತೀಯ ಸಂಸ್ಕೃತಿ ಮತ್ತು ಅಪ್ಪಟವಾದ ಸೌಂದರ್ಯವನ್ನು ಪ್ರಸ್ತುತಪಡಿಸುತ್ತಾ ಇಂದಿನ ದಿನ ವಿಶಿಷ್ಟವಾಗಲಿದೆ ಎಂದು ಪ್ರಕಟಿಸಿತು.
ಈ ವಸ್ತ್ರಗಳೊಂದಿಗೆ ಭಾರೀ ಆಭರಣ, ಮಣಿಗಳನ್ನು ಅಂಚುಗಳಲ್ಲಿ ಹೆಣೆದ ಸೆರಗು ಅತ್ಯಂತ ಭವ್ಯವಾಗಿತ್ತು. ಇಡಿಯ ಮೈಯನ್ನು ಆವರಿಸುವ ಅಬ್ಬರದ ನೀಳುಡುಗೆ (Bandhgalas) ಅಪ್ಪಟ ಕೇಸರಿ ಬಣ್ಣದ್ದಾಗಿದ್ದು ಅದರಲ್ಲಿ ಚಿನ್ನದ ಬಣ್ಣದ ಜರಿಯ ಕುಸುರಿ ಅತ್ಯಂತ ಸುಂದರವಾಗಿತ್ತು. ಐಬಿಎಫ್‌ಡಬ್ಲ್ಯೂ: ಕಣ್ಮನ ಸೆಳೆದ ಮುದ್ದಿನ ರಾಣಿ ಸೋನಮ್ ಕಪೂರ್!
ಇದೇ ಮಾದರಿಯ ಸೀರೆಗಳು, ಅನಾರ್ಕಲಿ ಉಡುಪು ಮತ್ತು ಲೆಹೆಂಗಾಗಳೂ ವಿವಿಧ ರೂಪದರ್ಶಿಗಳ ಮೂಲಕ ಪ್ರದರ್ಶನಗೊಂಡು ಮನಸೂರೆಗೊಂಡವು. ಉತ್ತರ ಭಾರತಕ್ಕೆ ನಾವೇನು ಕಡಿಮೆ ಎಂಬಂತೆ ದಕ್ಷಿಣ ಭಾರತೀಯ ಉಡುಗೆಗಳನ್ನೂ ರೂಪದರ್ಶಿಗಳು ಪ್ರದರ್ಶಿಸಿದರು. ಭಾರೀ ಕಾಂಜೀವರಂ ಸೀರೆ, ಅದ್ಭುತವಾದ ಕಲಾವಂತಿಕೆಯ ಚಿನ್ನದ ಆಭರಣಗಳು ಕಾರ್ಯಕ್ರಮದಲ್ಲಿ ಮೇಳೈಸಿದವು. ಇಂದಿನ ದಿನ ಮನಸೂರೆಗೊಂಡ ಅಶಿಮಾ-ಲೀನಾರವರ ಸುಂದರ ಉಡುಗೆಗಳನ್ನು ನೋಡೋಣ ಬನ್ನಿ...

ವಿವಿಧ ಬಣ್ಣಗಳಿಂದ ಮೇಳೈಸಿದ ಸಂಗ್ರಹ
ಆಶಿಮಾ-ಲೀನಾರವರ ವಿನ್ಯಾಸದ 'ದಕ್ಷಣ' ಸಂಗ್ರಹದಲ್ಲಿ ವಿವಿಧ ಬಣ್ಣಗಳಲ್ಲಿ ಅತಿ ನಯವಂತಿಕೆಯಿಂದ ಬಳಸಲಾಗಿತ್ತು. ದಂತ, ಕೆಂಪು, ಹಸಿರು, ಹಳದಿ, ಕೇಸರಿ ಮತ್ತಿತರ ಬಣ್ಣಗಳ ಉಡುಪುಗಳು ನಯನಮನೋಹರವಾಗಿದ್ದವು.

ವಧುವಿನ ಉಡುಗೊರೆ
ಆಶಿಮಾ-ಲೀನಾರವರ ವಿನ್ಯಾಸದ ವಧುವಿನ ವಿಶಿಷ್ಟ ಉಡುಗೆಗಳು ಎರಡನೆಯ ದಿನದಂದು ಹೆಚ್ಚಿನ ಗಮನ ಸೆಳೆದವು.

ಮನಸೂರೆಗೊಂಡ ಕಾಂಜೀವರಂ ಸೀರೆ
ಲೆಹೆಂಗಾಗಳಿಗೆ ಪ್ರತಿಸ್ಪರ್ಧಿಯಂತೆ ಪ್ರದರ್ಶಿಸಲ್ಪಟ್ಟ ಚಿನ್ನದ ಜರಿಯ ಕುಸುರಿಯುಳ್ಳ ಕೆಂಪು ಕಾಂಜೀವರಂ ಸೀರೆಯೊಂದಿಗೆ ಹಸಿರು ರವಿಕೆ ಭೂತಾಯಿಯನ್ನು ನೆನೆಸುತ್ತಿತ್ತು.

ಹಸಿರು ಮತ್ತು ಕೆಂಪು ಬಣ್ಣಗಳು ಇಷ್ಟು ಸುಂದರವಾಗಬಹುದೇ
ಸಾಮಾನ್ಯವಾಗಿ ಪ್ರಖರವಾದ ಹಸಿರು ಮತ್ತು ಕೆಂಪು ಬಣ್ಣಗಳನ್ನು ವಧುವಿನ ಉಡುಪುಗಳಿಗೆ ಉಪಯೋಗಿಸಬೇಕಾದರೆ ಅಪ್ರತಿಮ ಕಲಾವಂತಿಕೆ ಅಗತ್ಯ. ಕೆಂಪು ಸೀರೆ ಹಸಿರು ರವಿಕೆ ಅಥವಾ ಹಸಿರು ಲೆಹೆಂಗಾ ಮತ್ತು ಕೆಂಪು ದಾವಣಿ ನೋಡುವವರ ಊಹೆಗಳನ್ನೆಲ್ಲಾ ತಲೆಕೆಳಗಾಗಿಸಿದವು.

ನೃತ್ಯ ಮತ್ತು ಸಂಗೀತ
ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತ ಮತ್ತು ನೃತ್ಯಗಳನ್ನೂ ಅಳವಡಿಸಿದ್ದು ಆಗಮಿಸಿದವರ ಭರಪೂರಿ ಮನರಂಜನೆಗೆ ಕಾರಣವಾಯಿತು.

ಭಾರೀ ಆಭರಣಗಳು
ವಧುವಿನ ಉಡುಪುಗಳ ಜೊತೆಗೇ ಭಾರಿ ಆಭರಣಗಳು ಸಹಾ ಪ್ರದರ್ಶನಗೊಂಡವು. ಈ ವಿನ್ಯಾಸಗಳಲ್ಲಿ ಸೀರೆಯ ಸೆರಗಿನ ಅಂಚು ಮತ್ತು ರವಿಕೆಯ ಮುಂಭಾಗದ ಅಂಚುಗಳಲ್ಲಿ ವಿವಿಧ ಮಣಿ ಮತ್ತು ಸೂಕ್ಷ್ಮ ಆಭರಣಗಳನ್ನು ಕುಸುರಿಮಾಡಲಾಗಿದ್ದು ಜೊತೆಗಿದ್ದ ಅದೇ ಮಾದರಿಯ ಭಾರೀ ಆಭರಣಗಳಿಗೆ ಜೊತೆ ನೀಡಿತು. ರೂಪದರ್ಶಿ ಧರಿಸಿದ್ದ ಭಾರೀ ಕಿವಿಯೋಲೆ, ಸರ, ಜುಮುಕಿ ಮೊದಲಾದವು ವಧುವಿನ ರೂಪವನ್ನು ಪೂರ್ಣಗೊಳಿಸಿತ್ತು.



Click it and Unblock the Notifications