Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಎಐಸಿಡಬ್ಲ್ಯೂ: ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ಸೀರೆ ಕಲೆಕ್ಷನ್
ಭಾರತೀಯ ಮಹಿಳೆಯರು ಅತಿಹೆಚ್ಚು ಇಷ್ಟಪಡುವ ಉಡುಗೆ ಎಂದರೆ ಸೀರೆಯಾಗಿದೆ. ಈ ಅಗತ್ಯತೆಯನ್ನು ಮನಗಂಡ ವಸ್ತ್ರ ವಿನ್ಯಾಸಕಾರರು ಸೀರೆಯ ವಿನ್ಯಾಸದಲ್ಲಿ ಹೆಚ್ಚಿನ ಅಸ್ಥೆ ವಹಿಸುತ್ತಾರೆ. ಈ ಅಸ್ಥೆಯನ್ನು ಇಂದಿನ ಅಮೆಜಾನ್ ಇಂಡಿಯಾ ಕೌಚರ್ ವೀಕ್ 2015 ವಸ್ತ್ರ ವಿನ್ಯಾಸಕಾರರ ಸಂಗ್ರಹ ದಿನದಲ್ಲಿ ಪ್ರಮುಖವಾಗಿ ಕಾಣಲಾಯ್ತು.
ಸೀರೆ ವಿನ್ಯಾಸ ಜಗತ್ತಿನಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರುಗಳಾದ ಗೌರವ್ ಗುಪ್ತಾ ಮತ್ತು ರಾಹುಲ್ ಮಿಶ್ರಾ ತಮ್ಮ ವಿನ್ಯಾಸಗಳಲ್ಲಿ ಅತ್ಯುತ್ತಮವಾದುದನ್ನು ಇಂದು ಪ್ರದರ್ಶಿಸಿದರು. ಈ ಪ್ರದರ್ಶನಕ್ಕೆ ಮಹಿಳೆಯರು ಮುಗಿಬಿದ್ದು ಸಂದರ್ಶಿಸಿ ಹೊಸ ವಿನ್ಯಾಸಗಳ ದರ್ಶನ ಪಡೆದರು. ಮೋಡಿ ಮಾಡಿದ ರಾಹುಲ್ ಮಿಶ್ರಾರವರ ಟ್ರೀ ಆಫ್ ಲೈಫ್
ಮೊತ್ತ ಮೊದಲ ಈ ಸೀರೆಗಳನ್ನು ಕಂಡಾಗ ಕೊಂಚ ಆಭಾಸವಾದಂತೆ ಅನ್ನಿಸಿದರೂ ಇದುವರೆಗೆ ನೋಡಿದ್ದ ವಿನ್ಯಾಸಗಳಿಗಿಂತ ಈ ವಿನ್ಯಾಸಗಳು ಭಿನ್ನವಾಗಿಯೂ ಸುಂದರವಾಗಿಯೂ ಇರುವುದರಿಂದ ಶೀಘ್ರವೇ ಎಲ್ಲರ ಮೆಚ್ಚುಗೆ ಪಡೆದಿದೆ. ಈ ಭಿನ್ನ ವಿನ್ಯಾಸಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದೆ..

ಎಡಭುಜದ ಕೇಕ್ ಆಕೃತಿಯ ಅಲಂಕಾರ
ಸೀರೆಯ ಅಂದದ ಮುಖ್ಯಭಾಗವಿರುವುದೇ ಸೆರಗಿನಲ್ಲಿ. 2015ರ ಗೌರವ್ ಗುಪ್ತಾ ಮತ್ತು ರಾಹುಲ್ ಮಿಶ್ರಾರ ನೂತನ ವಿನ್ಯಾಸದಲ್ಲಿ ಸೆರಗಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೇಹದ ಇತರ ಭಾಗವನ್ನು ಸರಳಗೊಳಿಸಿ ಬಲಭುಜವನ್ನು ತೆರೆದಿಟ್ಟು ಎಡಭುಜದ ಮೇಲೆ ಕೇಕ್ ಆಕೃತಿಯಲ್ಲಿ ಸೆರಗನ್ನು ಮೂಡಿಸಿರುವುದು ಭಿನ್ನವಾಗ ನೋಟವನ್ನು ನೀಡುತ್ತದೆ.

ಪದರಪದರವಾಗಿರುವ ಸೀರೆ
ರಾಜೀವ್ ಗುಪ್ತಾರ ಈ ಸೀರೆ ದೂರದಿಂದ ಸೀರೆ ಎಂದೇ ಅನ್ನಿಸುವುದಿಲ್ಲ. ಏಕೆಂದರೆ ಕೆಳಭಾಗದ ಸೀರೆ ಮೂರು ಪದರಗಳಲ್ಲಿದ್ದು ಇದರ ಮೇಲಿನ ಸೂಕ್ಷ್ಮ ಕುಸುರಿ ಮನಸೆಳೆಯುತ್ತದೆ. ಇದರ ತೋಳುರಹಿರ ಗ್ರೀಸಿಯನ್ ಮಾದರಿಯ ಕುಪ್ಪುಸ ಸಹಾ ಎಡಬದಿಗೆ ಅಗಲವಾದ ಪಟ್ಟಿ ಮತ್ತು ಬಲಬದಿಗೆ ತೆಳುವಾದ ಪಟ್ಟಿಯಿಂದ ಮನಸೆಳೆಯುತ್ತದೆ.

ಕೈ ಮಗ್ಗದ ರೇಶ್ಮೆ ಸೀರೆ
ಕೈಮಗ್ಗದಿಂದ ನೇಯಲಾದ ರೇಶ್ಮೆಯ ಈ ಸೀರೆ ಸಾಂಪ್ರಾದಾಯಿಕ ರೂಪದಲ್ಲಿದ್ದರೂ ಮೈತುಂಬಾ ಆವರಿಸಿದಂತಿದ್ದು ಪಿಸ್ತಾಹಸಿರು ಬಣ್ಣದ ಪೂರ್ಣ ತೋಳಿನ ರವಿಕೆಯಲ್ಲಿ ಒಂದು ಪಟ್ಟಿ ಮುಂಭಾಗದಲ್ಲಿ ಕಟ್ಟಿದಂತಿದ್ದುದು ಹಿಂದೆಂದೂ ನೋಡಿರದ, ಊಹಿಸಲೂ ಆಗದ ಅಧ್ಬುತ ಕಲೆಗಾರಿಕೆಯನ್ನು ತೆರೆದಿಡುತ್ತದೆ.

ಕೋಟು ರೂಪದ ಸೀರೆ
ಯಾರೂ ಈ ಮೊದಲು ಊಹಿಸದೇ ಇದ್ದ ಸೀರೆಯ ಈ ರೂಪ ನಿಮ್ಮನ್ನು ಚಕಿತಗೊಳಿಸುತ್ತದೆ. ಕೆಳಭಾಗದಲ್ಲಿ ಸೇರೆಯ ಸಾಂಪ್ರಾದಾಯಿಕ ರೂಪ ಪಡೆದಿದ್ದರೂ ಕುಪ್ಪುಸ ಮಾತ್ರ ಅರೆಪಾದರ್ಶಕವಾಗಿದ್ದು ಕೋಟಿನ ಗುಂಡಿಗಳನ್ನು ಹೊಂದಿದೆ. ವಾಸ್ತವವಾಗಿ ಸೇರೆಯ ಸೆರಗಿಗೇ ಗುಂಡಿಗಳನ್ನು ನೀಡಿ ಬಲಗೈ ಮೇಲೆ ಕೋಟಿನ ಬಲಕೈತೋಳಿನ ರೂಪ ಪಡೆಯುವಂತೆ ಮಾಡಿರುವ ಈ ವಿನ್ಯಾಸ ಸೀರೆಯ ಅಪಾರ ಸಾಧ್ಯತೆಗಳನ್ನು ಪರಿಚಯಿಸುತ್ತದೆ.

ಟ್ರೆಂಚ್ ಕೋಟ್ ಸೀರೆ
ಚೀನೀ ಮಾದರಿಯ ಉಡುಗೆ ತೊಟ್ಟಿರುವಂತೆ ದೂರದಿಂದ ಕಂಡರೂ ವಾಸ್ತವಾಗಿ ಇದೊಂದು ಸೀರೆಯೇ ಆಗಿದೆ. ಎಡಭುಜವನ್ನು ಸೀರೆಯ ಸೆರಗು ಆವರಿಸಿದ್ದರೂ ಬಲಭುಜದಿಂದ ಎಡ ಸೊಂಟದವರೆಗೆ ಕೋಟಿನ ದೊಡ್ಡ ಕಾಲರ್ ಅರ್ಧಭಾಗವನ್ನು ತೊಟ್ಟಿರುವಂತೆ ಪ್ರದರ್ಶಿಸುವ ಈ ಸೀರೆ ನಿಮ್ಮನ್ನು ದಿಗ್ಭಮೆಗೊಳಿಸುವುದು ಖಂಡಿತಾ. ಎಂದಿಗೂ ಸೀರೆಯಲ್ಲಿ ಲಾಡಿಯನ್ನು ಸಹಿಸದ ಭಾರತೀಯ ಮಹಿಳೆಯರಿಗೆ ಎಡಸೊಂಟದ ಬಳಿ ಇರುವ ಪಟ್ಟಿಯ ಗಂಟು ಹೇಗೆ ಇಷ್ಟವಾಗುತ್ತದೆಯೋ ಕಾದು ನೋಡಬೇಕಾಗಿದೆ.



Click it and Unblock the Notifications











