Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಐಬಿಎಫ್‌ಡಬ್ಲ್ಯೂ: ನವವಧುವಿನಂತೆ ಕಣ್ಮನ ಸೆಳೆದ ಅಕ್ಷರ ಹಾಸನ್!
ಇಂದಿನ ದಿನಗಳಲ್ಲಿ ವಧುವಿನ ವಸ್ತ್ರಗಳ ಪ್ರದರ್ಶನದ ಇಂಡಿಯನ್ ಬ್ರೈಡಲ್ ಫ್ಯಾಷನ್ ವೀಕ್ 2015(India Bridal Fashion Week 2015) ನಡೆಯುತ್ತಿದೆ. ಈ ಪ್ರದರ್ಶನದಲ್ಲಿ ಖ್ಯಾತ ವಧುವಿನ ವಸ್ತ್ರದ ವಿನ್ಯಾಸಗಾರ್ತಿ ರೀನಾ ಡಾಕಾ ತಮ್ಮ ನೂತನ ಸಂಗ್ರಹದಿಂದ ಆಯ್ದ ಅತ್ಯುತ್ತಮ ವಸ್ತ್ರಗಳನ್ನು ತೊಡಿಸಿ ಬಾಲಿವುಡ್ ನಟಿ ಅಕ್ಷರಾ ಹಾಸನ್ ರನ್ನು ನವವಧುವಂತೆ ಸಿಂಗರಿಸಿದರು. ಇವರ ಸಂಗ್ರಹದಲ್ಲಿ ಪ್ರಮುಖವಾಗಿ ನಿಸರ್ಗದ ಅಂಶವಿದ್ದು ಎಲೆ ಮತ್ತು ಹೂವುಗಳಿರುವುದು ವಿಶಿಷ್ಟವಾಗಿದೆ.
ಇಂದು ಅವರ ವಿನ್ಯಾಸಗಳಲ್ಲಿ ಹೂದಳ ಮತ್ತು ಜರಿಗಿಡದ ಎಲೆಗಳ ವಿನ್ಯಾಸವಿದ್ದುದು ಕಂಡುಬಂದಿತು. ಈ ವಿನ್ಯಾಸವನ್ನು ತೊಟ್ಟ ಅಕ್ಷರಾ ಅತ್ಯಂತ ಸೌಂದರ್ಯವತಿಯಾಗಿಯೂ, ಅಪ್ಪಟ ಯುವತಿಯಂತೆಯೂ ಈಗತಾನೇ ನಿಸರ್ಗದಿಂದ ಮಿಂದೆದ್ದು ಬಂದ ಅಪ್ಸರೆಯಂತೆಯೂ ಕಂಗೊಳಿಸಿದರು. ಇವರ ಎಲ್ಲಾ ವಿನ್ಯಾಸಗಳಲ್ಲಿ ಉಪಯೋಗಿಸಲಾಗಿರುವ ಹೂ ಮತ್ತು ದಳಗಳು ನಿಸರ್ಗದ ಹೂಗಳ ಅಳತೆಗೆ ತಕ್ಕಂತಿರುವುದೇ ನಿಸರ್ಗಕ್ಕೆ ಇಷ್ಟು ಹತ್ತಿರವಾಗಿರಲು ಕಾರಣವಾಗಿದೆ. ಐಬಿಎಫ್‌ಡಬ್ಲ್ಯೂ:ಅಶಿಮಾ-ಲೀನಾ ಕೈಚಳಕಕ್ಕೆ ಭೇಷ್ ಎನ್ನಲೇಬೇಕು
ಈ ವಿನ್ಯಾಸಗಳನ್ನು ತೊಟ್ಟ ರೂಪದರ್ಶಿಯರು ವೇದಿಕೆ ಮೇಲೆ ಒಯ್ಯಾರದಿಂದ ನಡೆಯುತ್ತಿದ್ದಂತೆ ನಿಸರ್ಗದ ಹೂಗಳೇ ಮನುಷ್ಯರೂಪ ತಾಳಿ ವಧುವಿನ ರೂಪದಲ್ಲಿ ಮುಂದೆ ನಿಂತಂತಾಗುತ್ತದೆ ಎಂದು ರೀನಾ ಹೆಮ್ಮೆಯಿಂದ ನುಡಿಯುತ್ತಾರೆ. ಇದಕ್ಕೆ ಪುಟವಿಟ್ಟಂತೆ ಲಕ್ನೋದ ಎಂಬ್ರಾಯಿಡರಿ ಮತ್ತು ಆಸ್ಟ್ರಿಯಾದ ಹರಳುಗಳ ಕುಸುರಿ ಕೆಲಸ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬನ್ನಿ ಈ ಭವ್ಯ ಉಡುಗೆಗಳ ದರ್ಶನ ಮಾಡೋಣ...

ವಧುವಿಗಾಗಿ ವಿವಿಧ ವಸ್ತ್ರಗಳು
ಇಂದಿನ ಪ್ರದರ್ಶನದಲ್ಲಿ ಹಲವಾರು ನೂತನ ವಿನ್ಯಾಸಗಳನ್ನು ನೋಡಲು ಸಾಧ್ಯವಾಯಿತು. ಒಂದಕ್ಕಿಂತ ಒಂದು ಸುಂದರವಾಗಿದ್ದು ರೀನಾ ಡಾಕಾರವರ ಪ್ರತಿಭೆಯನ್ನು ಮೆರೆಯುತ್ತಿತ್ತು.

ಬಿಳಿ ಹಾಗೂ ಗುಲಾಬಿ ಬಣ್ಣದ ರವಿಕೆ
ದೇಹದ ಕೆಳಭಾಗವನ್ನು ಆವರಿಸಿದ ತೆಳುಗುಲಾಬಿ ಬಣ್ಣದ ಲೆಹೆಂಗಾವನ್ನು ಬಿಳಿ ಮತ್ತು ಗುಲಾಬಿ ಹೂಗಳು ಆಕ್ರಮಿಸಿದ್ದರೆ ರವಿಕೆ ಮಾತ್ರ ತೆಳುಹಳದಿ ಬಣ್ಣದಿಂದ ಕೂಡಿದ್ದು ಪಾರದರ್ಶಕವಾಗಿರುವಂತೆ ಕಾಣಿಸುವ ಜಾಣ್ಮೆ ರೀನಾರದ್ದಾಗಿದೆ.

ತೋಟದಲ್ಲಿರುವ ವಧು!
ಅಪ್ಪಟ ಕೆಂಪು ಬಣ್ಣದ ಉಡುಗೆಯ ಮೇಲೆ ವಿವಿಧ ಬಣ್ಣಗಳ ಹೂ ಮತ್ತು ಎಲೆಗಳಿರುವಂತೆ ವಿನ್ಯಾಸಗೊಳಿಸಿದ ಈ ವಸ್ತ್ರ ತೊಟ್ಟು ಬಂದ ರೂಪದರ್ಶಿ ನವವಧು ಈಗ ತೋಟದಲ್ಲಿ ನಿಂತಿರುವ ಭಾವನೆಯನ್ನು ಹುಟ್ಟಿಸುವಂತಿತ್ತು.

ಹಳದಿ-ಗುಲಾಬಿ ಆಕರ್ಷಣೆ
ಸಾಮಾನ್ಯವಾಗಿ ಹಳದಿ ಮತ್ತು ಗುಲಾಬಿ ಬಣ್ಣಗಳನ್ನು ವಿನ್ಯಾಸಗಾರರು ಜೊತೆಯಲ್ಲಿ ಬಳಸುವುದಿಲ್ಲ. ಏಕೆಂದರೆ ಇವು ಜೊತೆಯಾಗಿದ್ದರೆ ಕೊಂಚ ಮಬ್ಬಾಗಿ ಕಾಣುತ್ತವೆ. ಆದರೆ ರೀನಾರವರು ಗುಲಾಬಿಗೆ ಹೆಚ್ಚು ನೆರಿಗೆ ನೀಡಿ ಕೊಂಚ ಗಾಢವಾಗಿಸಿ ತಿಳಿಹಳದಿ ಬಣ್ಣಗಳ ಹೂವುಗಳನ್ನು ಪ್ರಖರವಾಗಿಸುವ ಮೂಲಕ ಅಧ್ಬುತವಾದ ಕಲಾವಂತಿಕೆಯನ್ನು ಪ್ರದರ್ಶಿಸಿದ್ದಾರೆ.

ಚುಮಕಿಬೊಟ್ಟಿನ ರವಿಕೆ
ತಿಳಿಹಳದಿಬಣ್ಣದ ಅರೆಪಾರದರ್ಶಕ ಸೀರೆಯ ಮೈಯಲ್ಲಿ ಚುಮುಕಿಬೊಟ್ಟುಗಳನ್ನು ಕಲಾವಂತಿಕೆಯಿಂದ ನೇಯ್ದಿದ್ದರೂ ಅಂಗೈಯಗಲವಿರುವ ರವಿಕೆಯಲ್ಲಿ ಮಾತ್ರ ಒಂದು ಚಿಕ್ಕ ಚುಕ್ಕೆಗೂ ಅವಕಾಶವಿಲ್ಲದಂತೆ ಚುಮಕಿಬೊಟ್ಟುಗಳನ್ನು ಉಪಯೋಗಿಸಿ ವಧುವನ್ನು ಪ್ರದರ್ಶಿಸಿದ ರೀನಾರ ವಿನ್ಯಾಸ ಗಮನ ಸೆಳೆಯಿತು.

ತೋಟದಲ್ಲಿರುವ ಸೌಂದರ್ಯ!
ಚಿನ್ನದ ಬಣ್ಣದ ಲೆಹೆಂಗಾದಲ್ಲಿ ಕೆಂಪು ಬಣ್ಣದ ಹೂವುಗಳಿದ್ದರೆ ರವಿಕೆಯಲ್ಲಿ ಮಾತ್ರ ಭಾರೀ ಪ್ರಮಾಣದಲ್ಲಿ ಕೆಂಪು ಹೂವುಗಳನ್ನು ಅಳವಡಿಸಿ, ದುಪಟ್ಟಾ ಮತ್ತು ತಲೆಯ ಕಿರೀಟದಲ್ಲಿಯೂ ಕೆಂಪು ಹೂವುಗಳನ್ನು ಅಳವಡಿಸುವ ಮೂಲಕ ದೂರದಿಂದ ಥಟ್ಟನೇ ನೋಡಿದರೆ ತೋಟದಲ್ಲಿರುವ ಸೌಂದರ್ಯ ಇಲ್ಲಿ ಸಾಕ್ಷಾತ್ಕಾರವಾಗಿರುವಂತೆ ಭಾಸವಾಗುತ್ತದೆ.



Click it and Unblock the Notifications