Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಐಸಿಡಬ್ಲ್ಯೂ: ಕಣ್ಮನ ಸೆಳೆದ ವರುಣ್‌ರವರ ವಸ್ತ್ರ ವಿನ್ಯಾಸ
ವರುಣ್ ಬಾಹ್ಲ್‌ರವರು ಎಐಸಿಡಬ್ಲ್ಯೂ 2015 ರಲ್ಲಿ ತಮ್ಮ ಅದ್ಭುತವಾದ ವಧುವಿನ ವಸ್ತ್ರ ವಿನ್ಯಾಸಗಳನ್ನು ಪ್ರಸ್ತುತಪಡಿಸಿದರು. ವಿಭಿನ್ನ ಶೈಲಿಯ ವಸ್ತ್ರ ವಿನ್ಯಾಸ, ಝಗಮಗಿಸುವ ದಿರಿಸುಗಳು, ಹೀಗೆ ನೋಡುಗರಿಗಂತೂ ರಸದೌತಣವನ್ನೇ ಉಣಬಡಿಸಿತು. ಶರಾರಗಳಿಂದ ಹಿಡಿದು, ರೆಡ್ ಕಾರ್ಪೆಟ್ ದಿರಿಸು ಮತ್ತು ಮನಮೋಹಕವಾದ ಗೌನ್‌ಗಳಿಂದ ಕೂಡಿದ ಈ ಸಂಗ್ರಹವು ನೋಡಲು ಎರಡು ಕಣ್ಣುಗಳೇ ಸಾಲದು ಎನ್ನುವಂತಿತ್ತು!
ಈ ಸಂದರ್ಭದಲ್ಲಿ ವರುಣ್ ಬಾಹ್ಲ್‌ರವರು "ದಿರಿಸುಗಳು ಎಂದಿಗು ನನಗೆ ತುಂಬಾ ಇಷ್ಟವಾಗುವ ಅಂಶಗಳಿವೆ, ಪ್ರತಿ ಋತುವಿಗೂ ಸಹ ನಾನು ಅದಕ್ಕೆ ಅನುಗುಣವಾದ ಮತ್ತು ಅನುಪಮವಾದ ವಿಶೇಷ ಸಂಗ್ರಹಗಳನ್ನು ಪ್ರಸ್ತುತಪಡಿಸುತ್ತೇನೆ. ಅದು ನನ್ನ ಸೌಂದರ್ಯ, ವಿನ್ಯಾಸಗಳ ಸೂಕ್ಷ್ಮತೆಯನ್ನು ಪ್ರತಿನಿಧಿಸುತ್ತದೆ" ಎಂದು ಹೇಳಿದ್ದಾರೆ. ಎಐಸಿಡಬ್ಲ್ಯೂ: ಬಿಟ್ಟ ಕಣ್ಣು ಬಿಟ್ಟಂತೆ ಮಾಡಿದ ಸೀರೆ ಕಲೆಕ್ಷನ್
ಈ ವಿನ್ಯಾಸಕಾರರ ವಿನ್ಯಾಸಗಳು ನೋಡುಗರ ಮನಸೂರೆಗೊಂಡವು. ಐವರಿ, ತಿಳಿ ಗುಲಾಬಿ, ತಿಳಿ ನೀಲಿ, ಹಳೆಯ ಗುಲಾಬಿ ಮತ್ತು ಬೋಲ್ಡ್ ಹ್ಯೂಸ್, ಕಪ್ಪು, ಬುರ್ಗುಂಡಿ ಮತ್ತು ಇತ್ಯಾದಿಗಳು ಎಲ್ಲವೂ ವಿನ್ಯಾಸಕರ ಕೌಶಲ್ಯವನ್ನು ನೋಡುಗರ ಮುಂದೆ ಅನಾವರಣಗೊಳಿಸಿದವು.
ಇವರ ಸಂಗ್ರಹವು ವಧುವಿನ ವಿನ್ಯಾಸಗಳಲ್ಲಿ ಫ್ಲೋರಲ್ ಪ್ರಿಂಟ್ ಮತ್ತು ಮೋಟಿಫ್‌ಗಳನ್ನು ಹೊಂದಿದ್ದವು. ಒಟ್ಟಾರೆ ವರುಣ್ ಬಾಹ್ಲ್‌ರವರ ಸಂಗ್ರಹವು ನಿಜಕ್ಕೂ ವಧುವಿಗೆ ಅತ್ಯಂತ ಪರ್ಫೆಕ್ಟ್ ಆಗಿ ಹೊಂದಾಣಿಕೆಯಾಗುವ ಉಡುಗೆಯಾಗಿ ಕಂಡು ಬಂದಿತ್ತು. ಬನ್ನಿ ಎಐಸಿಡಬ್ಲ್ಯೂ 2015: ವರುಣ್ ಬಾಹ್ಲ್‌ರವರ ವಧುವಿನ ವಸ್ತ್ರ ಹೇಗಿತ್ತು ಎಂದು ನೋಡೋಣ.... ಮೋಡಿ ಮಾಡಿದ ರಾಹುಲ್ ಮಿಶ್ರಾರವರ ಟ್ರೀ ಆಫ್ ಲೈಫ್

ಕೆಂಪು ಉಡುಗೆ
ಕೆಂಪನೆಯ ಬಣ್ಣದ ಈ ಉಡುಗೆಯು ವಧುವಿಗೆ ಹೇಳಿ ಮಾಡಿಸಿದ ವಸ್ತ್ರವಾಗಿದೆ. ಈ ಉಡುಗೆಯು ನಿಮ್ಮ ಜೀವನದ ಅತ್ಯಂತ ವರ್ಣಮಯಗೊಳಿಸುವುದರಲ್ಲಿ ಸಂಶಯವೇ ಇಲ್ಲ!

ಸೀರೆ
ಸೀರೆಗಳಿಲ್ಲದೆ ಅದೆಂತಹ ಮದುವೆ. ಬಿಳಿ ಮತ್ತು ಕೆಂಪು ಬಣ್ಣದ ಎಂಬ್ರಾಯಿಡರಿ ಮಾಡಲಾದ ಸೀರೆಗಳು ಹೇಗಿರುತ್ತವೆ? ಅದನ್ನು ಇಂತಹ ಶೋನಲ್ಲಿಯೇ ನೋಡಬೇಕು.

ಫ್ಲೋರಲ್ ಪ್ರಿಂಟ್‌ಗಳು
ಫ್ಲೋರಲ್ ಪ್ರಿಂಟ್ ಈ ಋತುವಿಗೆ ಹೇಳಿ ಮಾಡಿಸಿದ ಪ್ರಿಂಟ್‌ಗಳಾಗಿರುತ್ತವೆ. ಹೊಳೆಯುವ ಬಣ್ಣಗಳ ವಿಭಿನ್ನ ಪ್ರಿಂಟ್‌ಗಳನ್ನು ಬಳಸಿಕೊಳ್ಳಲು ಹಿಂದೇಟು ಹಾಕಬೇಡಿ.

ಫ್ಲೋರಲ್ ಮೋಟಿಫ್‌ಗಳು
ನಿಮ್ಮ ವಿವಾಹದ ದಿನದ ಲೆಹೆಂಗಾಗೆ ಫ್ಲೋರಲ್ ಸ್ಪರ್ಶವನ್ನು ನೀಡಬೇಕು ಎಂದು ಬಯಸಿದಲ್ಲಿ, ಅದನ್ನು ನೀಡಿ. ಚಿನ್ನದ ಎಂಬ್ರಾಯಿಡರಿಯಲ್ಲಿ ಫ್ಲೋರಲ್ ಮೋಟಿಫ್‌ಗಳನ್ನು ಒಮ್ಮೆ ಪ್ರಯತ್ನಿಸಿ.

ಸರಳವಾಗಿರಿಸಿ
ನಿಮಗೆ ಬೇಕಾದಲ್ಲಿ ಉಡುಗೆಯು ಸರಳವಾಗಿರಲು, ಪ್ಲೋರಲ್ ಪ್ರಿಂಟ್ ಮಾಡಲಾದ ಪ್ಲೇನ್ ಲೆಹೆಂಗಾವು ಈ ಸಮಾರಂಭಕ್ಕೆ ಸೂಕ್ತವಾದ ಆಯ್ಕೆಯಾಗಿರುತ್ತದೆ.

ಜಾಕೆಟ್‌ಗಳು
ಗಂಡಸರು ಸಹ ತಮ್ಮ ಲುಕ್ ಜೊತೆಗೆ ಪ್ರಯೋಗಗಳನ್ನು ಮಾಡಬಹುದು. ಇದಕ್ಕಾಗಿ ಅವರು ಹೊಳೆಯುವ ಬಣ್ಣದ ಪ್ರಿಂಟೆಡ್ ಜಾಕೆಟ್‌ಗಳನ್ನು ಒಮ್ಮೆ ಪ್ರಯತ್ನಿಸಬಾರದು.



Click it and Unblock the Notifications