Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಎಐಸಿಡಬ್ಲ್ಯೂ: ದೇವಲೋಕದ ಅಪ್ಸರೆಯಂತೆ ಕಣ್ಮನ ಸೆಳೆದ ಶಿಲ್ಪಾ ಶೆಟ್ಟಿ
ಅಮೆಜಾನ್ ಇಂಡಿಯಾ ಕೌಚರ್ ವೀಕ್ 2015 ಸಂಗ್ರಹ ವಾರದ ನಾಲ್ಕನೇಯ ದಿನವೂ ಹಲವು ಹೊಸ ವಿನ್ಯಾಸಗಳು ಪ್ರದರ್ಶಿಸಲ್ಪಟ್ಟು ವಾತಾವರಣದಲ್ಲಿ ಕುತೂಹಲ ಮೂಡಿಸಿದವು. ಇದರಲ್ಲಿ ಅತಿಹೆಚ್ಚಿನ ಗಮನ ಸೆಳೆದ ಅಂಶವೆಂದರೆ ವಿನ್ಯಾಸಕಾರರಾದ ರಿಂಪಲ್ ಮತ್ತು ಹರ್ಪ್ರೀತ್ ನರೂಲಾ ರವರ ವಸ್ತ್ರ ವಿನ್ಯಾಸಗಳನ್ನು ಪ್ರದರ್ಶಿಸಲು ಖ್ಯಾತ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಆಗಮಿಸಿದ್ದುದು.
ಬಂಗಾರದ ಬಣ್ಣ ದಟ್ಟನೆಯ ಖಾಕಿ ಬಣ್ಣದೊಂದಿಗೆ ಮಿಳಿತವಾದ ಲೆಹೆಂಗಾ ಮತ್ತು ಸುನಾರ್ ಜ್ಯೂವೆಲ್ಸ್‌ನ ಆಭರಣಗಳನ್ನು ತೊಟ್ಟು ಬಂದಿದ್ದ ಅವರು ಸಾಕ್ಷಾತ್ ಓರ್ವ ಮಹಾರಾಣಿಯಂತೆ ಕಂಡುಬಂದರು. ಈ ವಸ್ತ್ರಕ್ಕೆ ಪೂರಕವಾದ ಭಾರೀ ಜದಾವ್ ಸರ ಆಕರ್ಷಣೆಯ ಕೇಂದ್ರವಾಗಿತ್ತು.

ಭಾರೀ ಕುಸುರಿ ಕೆಲಸ ಮತ್ತು ಇಡಿಯ ಕೆಳಭಾಗವನ್ನು ಆವರಿಸಿದ ಕೈಕೆಲಸದ ಲೆಹೆಂಗಾ ಭಾರವೂ ಆಗಿತ್ತೆಂದು ಅವರ ನಡಿಗೆಯೇ ತಿಳಿಸುತ್ತಿತ್ತು. ಇದೇ ಕಾರಣದಿಂದ ಅವರು ಹೆಚ್ಚಿನ ಇತರ ಆಭರಣಗಳನ್ನು ಧರಿಸದಿದ್ದುದು ಕೊಂಚ ಗಮನಿಸಿದರೆ ತಿಳಿದುಬರುವಂತಿತ್ತು.
ಈ ವಸ್ತ್ರದ ಪ್ರಮುಖ ಆಕರ್ಷಣೆಯಾದ ಲೆಹೆಂಗಾ ಕೈಕೆಲಸದ ಕುಸುರಿಯಿಂದ ಹೊಳೆಯುತ್ತಿದ್ದು ಸೊಂಟದ ಭಾಗದಲ್ಲಿ ಚಿಕ್ಕದಾದ ವಿನ್ಯಾಸ ಕೆಳಬರುತ್ತಿದ್ದಂತೆ ದೊಡ್ಡದಾಗುತ್ತಾ ಜಲಪಾತದ ನೀರು ಬೀಳುವಂತೆ ಗೋಚರಿಸುತ್ತಿತ್ತು. ಇದಕ್ಕೆ ಉಪಯೋಗಿಸಿದ ಚಿನ್ನದ ಬಣ್ಣದ ಜರಿ ಇಡಿಯ ಲೆಹೆಂಗಾವನ್ನೇ ಸುತ್ತುವರೆದಿದ್ದು ಅಧ್ಬುತ ಕಲಾವಂತಿಕೆಯ ಉದಾಹರಣೆಯಾಗಿತ್ತು. ಪಾದಗಳ ಬಳಿ ದ್ವಾರದ ಹೆಬ್ಬಾಗಿಲಿನ ವಿನ್ಯಾಸ ಮಡಿಕೆಗಳ ನಡುವೆಯೂ ಪ್ರಮುಖವಾಗಿ ಗೋಚರಿಸುತ್ತಿತ್ತು.
ಶಿಲ್ಪಾರವರು ತೊಟ್ಟಿದ ಈ ಮದುಮಗಳ ಲೆಹೆಂಗಾಕ್ಕೆ ಪೂರಕವಾಗಿ ಅವರ ತೋಳಿಲ್ಲದ ಕುಪ್ಪಸದಲ್ಲಿಯೂ ಅದ್ಭುತವಾದ ಕುಸುರಿಕಲೆ ರಾರಾಜಿಸುತ್ತಿತ್ತು. ಇದಕ್ಕೆ ಹೊಂದುವಂತಹ ಒಂದೇ ಭಾರೀ ಚಿನ್ನದ ಬಣ್ಣದ ಸರವನ್ನು ಪ್ರದರ್ಶಿಸಲು ಅವರು ತಮ್ಮ ದುಪಟ್ಟಾವನ್ನು ಭುಜಕ್ಕೆ ಸರಿಸಿದ್ದರು. ಬದಿಗೆ ಸರಿಸಿದ್ದರೂ ಇನ್ನೂ ಸೂಕ್ಷ್ಮ ಕುಸುರಿಕಲೆಯಿಂದ ತುಂಬಿದ್ದ ದುಪಟ್ಟಾ ಸಹಾ ಕಲಾವಂತಿಕೆಯ ಇನ್ನೊಂದು ರೂಪಕವಾಗಿತ್ತು.
ಹಿಂದಿನ ರಾಜಮಹಾರಾಜರು ಧರಿಸುತ್ತಿದ್ದ ಭಾರೀ ಕುಸುರಿ ಕೆಲಸದ ತೊಡುಗೆಗಳನ್ನು ನೆನಪಿಗೆ ತಂದ ರಾಜ್, ರಿಂಪಲ್ ಮತ್ತು ಹರ್ಪ್ರೀತ್ ರವರ ಮಹಾರಾಜ ಅಂಡ್ ಕೋ ವಿನ್ಯಾಸದ ಉಡುಗೆಗಳು ಭಾರತೀಯ ಗತವೈಭವವನ್ನು ಮತ್ತೊಮ್ಮೆ ಮೇಳೈಸಿತ್ತು.
ಈ ಪ್ರದರ್ಶನದಲ್ಲಿ ಕೇವಲ ಉಡುಪುಗಳು ಮಾತ್ರವಲ್ಲದೇ ಹರಳುಗಳನ್ನು ಅಳವಡಿಸಿದ್ದ ನಿಲುವಂಗಿ, ಅಪರೂಪದ ವಿನ್ಯಾಸದ ಹೊರ ಉಡುಪು, ಜ್ಯಾಕೆಟ್, ಭವ್ಯ ಸಡಿಲವಾದ ಮೇಲಂಗಿಗಳೂ ಪ್ರದರ್ಶನದಲ್ಲಿ ಕಣ್ಣಿಗೆ ಮುದ ನೀಡಿದವು.



Click it and Unblock the Notifications

