Latest Updates
-
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್! -
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು! -
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ
ಬಿಳಿ ಮ್ಯಾಕ್ಸಿ ನಿಲುವಂಗಿಯಲ್ಲಿ ಮನಕದ್ದ ಸುಂದರಿ ಯಾಮಿ ಗೌತಮ್
ಬಿಳಿ ಮ್ಯಾಕ್ಸಿ ಧಿರಿಸು ತೊಟ್ಟು ರಾಂಪ್ ಮೇಲೆ ಹೆಜ್ಜೆ ಹಾಕಿದ ಸುಂದರಿ ಯಾಮಿ ಗೌತಮ್ ಅಪ್ಸೆರೆಯೇ ಧರೆಗಿಳಿದಂತೆ ಕಂಡುಬಂದಿದ್ದರು. ವಿಶೇಷ ಪ್ರದರ್ಶನಕ್ಕಾಗಿ ರಾಂಪ್ ಮೇಲೆ ಹೆಜ್ಜೆ ಹಾಕಿದ ನಟಿ ಯಾಮಿ, ಜಬಾಂಗ್ ಆನ್‌ಲೈನ್ ಪ್ರದರ್ಶನದ ಮುಖ್ಯ ರೂಪದರ್ಶಿಯಾಗಿ ಕಣ್ಮನಸೆಳೆದರು. ಬಾಲಿವುಡ್‌ನ ಯುವ ಕಣ್ಮಣಿಯಾಗಿರುವ ಯಾಮಿ ಗೌತಮ್ ಜಂಬಾಗ್ ಆನ್‌ಲೈನ್ ಪ್ರದರ್ಶನದಲ್ಲಿ ಮುದ್ದಾಗಿ ಕಾಣುತ್ತಿದ್ದರು.
ಫ್ಲೋರಲ್ ಪಟ್ಟಿಗಳಿದ್ದ ಬಿಳಿ ಮ್ಯಾಕ್ಸಿ ನಿಲುವಂಗಿಯನ್ನು ತೊಟ್ಟಿದ್ದ ಯಾಮಿ ಬೋಟ್ ನೆಕ್ ಕಾಲರ್ ಅನ್ನು ಹೊಂದಿದ್ದ ಫ್ಲೋರಲ್ ಎಂಬ್ರಾಯ್ಡರಿ ಉಡುಗೆಯಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು. ಈ ಫ್ಲೋರಲ್ ಪ್ರಿಂಟ್‌ಗಳಲ್ಲಿ ನಿಯೋನ್ ಶೇಡ್‌ಗಳನ್ನು ಕೂಡ ಕಾಣಬಹುದಾಗಿದೆ. ಆಕೆಯ ಕೂದಲಿನ ಶೈಲಿ ಹೆಚ್ಚು ಆಕರ್ಷಕವಾಗಿ ಮನಸೆಳೆಯುವಂತಿತ್ತು.
ಫ್ರೆಂಚ್ ಬ್ರೈಡ್ ವಿನ್ಯಾಸಲ್ಲಿ ತಮ್ಮ ಕೇಶ ಸೌಂದರ್ಯವನ್ನು ಅಣಿಗೊಳಿಸಿದ್ದ ಯಾಮಿಯ ಲುಕ್ ಅನ್ನು ನಾವು ತುಂಬಾ ಇಷ್ಟಪಟ್ಟೆವು. ಯಾಮಿಯ ಇನ್ನಷ್ಟು ಮುದ್ದಿನ ಆಕರ್ಷಕ ಲುಕ್‌ಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನೀಡುತ್ತಿದ್ದು ಅದರತ್ತ ನೋಟ ಹರಿಸಿ.
ಅನಾರ್ಕಲಿ ಧಿರಿಸಿನಲ್ಲಿ ಮುದ್ದು ಮುದ್ದು ವಿದ್ಯಾ ಬಾಲನ್!

ಮ್ಯಾಕ್ಸಿ ಗೌನ್
ಜಬಾಂಗ್ ಆನ್‌ಲೈನ್ ಪ್ರದರ್ಶನಕ್ಕಾಗಿ ಬಿಳಿ ಮ್ಯಾಕ್ಸಿ ಗೌನ್ ತೊಟ್ಟು ಯಾಮಿ ಗೌತಮ್ ರಾಂಪ್ ಮೇಲೆ ಹೆಜ್ಜೆ ಹಾಕಿದರು.

ಬಿಳಿ ಉಡುಗೆಯಲ್ಲಿ
ಮ್ಯಾಕ್ಸಿ ಉಡುಗೆಯು ಬಿಳಿ ಬಣ್ಣದಿಂದ ಕೂಡಿದ್ದು ಫ್ಲೋರಲ್ ಡೀಟೈಲ್ಸ್ ಅನ್ನು ಹೊಂದಿ ಆಕರ್ಷಕವಾಗಿ ಕಂಡುಬಂದಿದೆ. ದಂತದ ಬಣ್ಣಕ್ಕೆ ಈ ಮ್ಯಾಕ್ಸಿ ಉಡುಗೆಯನ್ನು ಹೋಲಿಸಬಹುದಾಗಿದೆ.

ಫ್ಲೋರಲ್ ಡೀಟೈಲ್ಸ್
ಯಾಮಿ ಗೌತಮ್‌ರ ಮ್ಯಾಕ್ಸಿ ಉಡುಗೆಯು ಫ್ಲೋರಲ್ ಡೀಟೈಲ್ಸ್ ಅನ್ನು ಹೊಂದಿದೆ. ಎಲೆಗಳ ಮತ್ತು ಹೂವುಗಳ ಮಾದರಿಯಲ್ಲಿ ಧಿರಿಸಿನಲ್ಲಿ ತುಂಬಿಕೊಂಡಿರುವ ಫ್ಲೋರಲ್ ಡೀಟೈಲ್ಸ್ ನಿಯೋನ್ ಶೇಡ್‌ಗಳಲ್ಲಿತ್ತು.

ಹಿಂಭಾಗ ನೋಟ
ಆಕರ್ಷಕ ಬಿಳಿ ಗೌನ್ ಹಿಂಭಾದಲ್ಲಿ ಸರಳ ಮನಸೆಳೆಯುವ ನೋಟವನ್ನು ಹೊಂದಿದೆ.

ಫ್ರೆಂಚ್ ಬ್ರೈಡ್
ರಾಂಪ್ ಮೇಲೆ ಹೆಜ್ಜೆ ಹಾಕಿದ ಯಾಮಿ ತಮ್ಮ ಕೂದಲನ್ನು ಫ್ರೆಂಚ್ ಬ್ರೈಡ್ ಮಾದರಿಯಲ್ಲಿ ಹೆಣೆದಿದ್ದು ಇದು ಆಕರ್ಷಕವಾಗಿ ಕಾಣುತ್ತಿತ್ತು.

ರಾಂಪ್ ಲುಕ್
ಜಬಾಂಗ್ ಆನ್‌ಲೈನ್ ಶೋ 2014 ರ ಮುಖ್ಯ ಶೋಸ್ಟಾಪರ್ ಆಗಿ ಯಾಮಿ ಗೌತಮ್ ಹೆಜ್ಜೆ ಹಾಕಿದ ರೀತಿ ಮಾತ್ರ ಆಕರ್ಷಕವಾಗಿತ್ತು.



Click it and Unblock the Notifications