Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಲ್ಪನಾ, ನೀರಜಾರವರ ಮೋಡಿ ಮಾಡಿದ ವಸ್ತ್ರ ವಿನ್ಯಾಸ
ವಿಲ್ಸ್ ಲೈಫ್‌ಸ್ಟೈಲ್ ಫ್ಯಾಷನ್ ವೀಕ್ 2015 ರ ಮೊದಲ ದಿನವನ್ನು ಆಲ್ಪನಾ ಮತ್ತು ನೀರಜ್ ಉತ್ತಮವಾಗಿ ಆರಂಭಿಸಿದ್ದಾರೆ. ಈ ವರ್ಷದ ಫ್ಯಾಷನ್ ಶೋ ನಿಜಕ್ಕೂ ಅದ್ಭುತವಾಗಿ ಆರಂಭಗೊಂಡಿದ್ದು ಈ ವಿನ್ಯಾಸಗಾರರ ಸಂಗ್ರಹ ನಿಜಕ್ಕೂ ಕಣ್ಮನ ಸೆಳೆಯುವಂತಿದ್ದವು. ಮೊದಲ ದಿನದಂದು ಅಲ್ಪನಾ ಮತ್ತು ನೀರಜ್ ಜಪಾನ್‌ನ ಕಣ್ಮನಸೆಳೆಯುವ ದಿರಿಸನ್ನು ಪ್ರದರ್ಶಿಸಿ ನಿಜಕ್ಕೂ ನಮ್ಮಲ್ಲಿ ಫ್ಯಾಷನ್ ನೋಟವನ್ನು ಹೆಚ್ಚಿಸಿದ್ದಾರೆ.
ಇನ್ನು ರಾಂಪ್ ಮೇಲೆ ನಡೆದ ಫ್ಯಾಷನ್ ನಡಿಗೆಯಂತೂ ದಿರಿಸಿನ ಮೋಹಕತೆಯನ್ನು ಹೆಚ್ಚಿಸಿದೆ ಎಂದೇ ಹೇಳಬಹುದು. ಗೌನ್‌ಗಳಲ್ಲಿ ಬಳಸಲಾದ ಬೋಲ್ಡ್ ಬಣ್ಣಗಳು ಮತ್ತು ಅತ್ಯಾಕರ್ಷಕ ವಿನ್ಯಾಸ ಮೋಹಕಪಡಿಸುವಂತಿದ್ದು ಅಲ್ಪನಾ ಮತ್ತು ನೀರಜಾರವರ ಸಂಗ್ರಹಕ್ಕೆ ನಿಜಕ್ಕೂ ಮನಸೋಲುವಂತೆ ಮಾಡಿದೆ. ಜಪಾನೀ ಜೀವನವನ್ನು ನಿಜಕ್ಕೂ ವೇದಿಕೆಯಲ್ಲಿ ಇವರು ಬಿಚ್ಚಿಟ್ಟಿದ್ದು ಮನಸೋಲುವಂತಿತ್ತು.

ಇನ್ನು ದಿರಿಸಿನಲ್ಲಿನ ವಿನ್ಯಾಸಗಳು ನಿಜಕ್ಕೂ ಕಣ್ಮನ ಸೆಳೆಯುವಂತಿದ್ದು ದಿರಿಸುಗಳು ಹೆಚ್ಚಿನ ಫ್ರಿಲ್‌ಗಳನ್ನು ಒಳಗೊಂಡಿದ್ದು ಇನ್ನಷ್ಟು ಮೋಹಕವಾಗಿದ್ದವು.
ಇನ್ನು ಲೇಯರ್‌ಗಳು ವಿವಿಧ ಬಣ್ಣಗಳನ್ನು ಒಳಗೊಂಡು ವಿನ್ಯಾಸಗಾರರ ಕೈಚಳಕವನ್ನು ಪ್ರದರ್ಶಿಸಿದ ರೀತಿ ನಿಜಕ್ಕೂ ಮನಮುಟ್ಟುವಂತಿತ್ತು. ಕೂಲ್ ಸಮ್ಮರ್ ಲುಕ್ ಗೆ ಫ್ಯಾಷನಬಲ್ ಸ್ಯಾರಿ
ಅಲ್ಪನಾ ಮತ್ತು ನೀರಜಾರವರ ದಿರಿಸು ಸಂಗ್ರಹವು ಒಂದಕ್ಕಿಂತ ಭಿನ್ನವಾಗಿದ್ದು ಬೇರೆ ಬೇರೆ ವಿನ್ಯಾಸಗಳಿಂದ ಸುಂದರವಾಗಿದ್ದವು.
ಕೆಲವು ದಿರಿಸುಗಳು ಸುಂದರ ವಿನ್ಯಾಸವನ್ನು ಹೊಂದಿ ಕಣ್ಸೆಳೆಯುವಂತಿತ್ತು ಎಂಬುದು ಮಾತ್ರ ಇಲ್ಲಿ ಮನಸೆಳೆಯುವ ಅಂಶವಾಗಿದೆ. ಅಂತೂ ಜಪಾನೀ ಸ್ಟೈಲ್ ಅನ್ನು ಹೊರತರುವಲ್ಲಿ ಇವರು ಮಾಡಿರುವ ಕೆಲಸವಂತೂ ಅತ್ಯದ್ಭುತವಾಗಿದೆ.
ಇನ್ನು ದಿರಿಸಿನ ಬಟ್ಟೆ ಕೂಡ ವಿಭಿನ್ನ ಶೈಲಿಯಲ್ಲಿರುವ ಮೃದು ತೆಳು ಬಟ್ಟೆಯಾಗಿದ್ದು ಉಡುಪಿನ ಅಂದವನ್ನು ಹೆಚ್ಚಿಸುವಂತಿತ್ತು. ಉಡುಪುಗಳನ್ನು ಪ್ರದರ್ಶಿಸಿದ ರೂಪದರ್ಶಿಯರು ನಿಜಕ್ಕೂ ಸುಂದರ ಬೊಂಬೆಗಳಂತೆ ಕಂಡುಬರುತ್ತಿದ್ದು ತಮ್ಮ ಬೆಡಗು ವಯ್ಯಾರವನ್ನು ಕಣ್ಣ ಮುಂದೆ ತಂದಿದ್ದಾರೆ.
ಅಂತೂ ಅಲ್ಪನಾ ಮತ್ತು ನೀರಜಾರವರ ವಸ್ತ್ರ ವಿನ್ಯಾಸ ಸಂಗ್ರಹ ನಿಜಕ್ಕೂ ಮನಮೋಹಕವಾಗಿದ್ದು ಬೆರಗನ್ನು ಉಂಟು ಮಾಡಿತ್ತು ಎಂದೇ ಹೇಳಬಹುದು.



Click it and Unblock the Notifications





