Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವೈಟ್ ಪ್ರಿಂಟೆಡ್ ಸೀರೆಯಲ್ಲಿ ಕಣ್ಮನ ಸೆಳೆದ ವಿದ್ಯಾ
ಮೆಲ್‌ಬೋರ್ನ್‌ನಲ್ಲಿ ನಡೆದ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ವಿದ್ಯಾ ಸಖತ್ ಹಾಟ್ ಆಗಿ ಕಂಡುಬಂದರು. ಇತ್ತೀಚೆಗೆ ವಿದ್ಯಾ ಬಾಲನ್ ಅಂತೂ ಸೀರೆಯಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದ್ದಾರೆ. ತಮ್ಮ ಅದ್ಭುತ ರೂಪ ಲಾವಣ್ಯದಲ್ಲಿ ಅವರು ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದಾರೆ. ಈ ಬಾರಿ ಹೊಸ ಪ್ರಯೋಗವೆಂಬಂತೆ ವಿದ್ಯಾ ತನ್ನ ಮೆಚ್ಚಿನ ಸಬ್ಯಸಾಚಿ ಸೀರೆಯನ್ನು ಕೈ ಬಿಟ್ಟು ಬಣ್ಣ ಬಣ್ಣದ ಪ್ರಿಂಟೆಡ್ ಸೀರೆ ಮನಸೋತಿದ್ದಾರೆ. ಈ ಪ್ರಿಂಟೆಡ್ ಸೀರೆ ವಿದ್ಯಾಗೆ ಚೆನ್ನಾಗಿ ಒಪ್ಪುತ್ತಿದ್ದು ಆಕೆಯ ರೂಪ ಲಾವಣ್ಯಕ್ಕೆ ಕನ್ನಡಿ ಹಿಡಿದಂತಿದೆ.
ವಿದ್ಯಾಳ ಮೈ ಬಣ್ಣಕ್ಕೆ ಚೆನ್ನಾಗಿ ಕಾಣುತ್ತಿದೆ. ಮೊಣಕೈ ಬ್ಲೌಸ್, ಸೆರಗನ್ನು ಸಿಂಗಲ್ ಪಿನ್ ಮಾಡಿರುವ ರೀತಿ ಇವುಗಳಿಂದ ಡ್ರೆಸ್ಸಿಂಗ್ ತುಂಬಾ ಚೆನ್ನಾಗಿದೆ. ಹೊಸ ವಿನ್ಯಾಸದ ಧಿರಿಸುಗಳನ್ನು ಧರಿಸುವ ಆಕೆಯ ಪ್ರಯತ್ನ ಸೋಲನ್ನೇ ಕಂಡಿದೆ. ಆದರೆ ಸೀರೆಯಲ್ಲಿ ವಿದ್ಯಾರನ್ನು ಸೋಲಿಸುವವರು ಯಾರೂ ಇಲ್ಲ ಎಂದೇ ಹೇಳಬಹುದು. ಬಿಳಿ ಬಣ್ಣದ ದೆಬಾಶ್ರೀ ಸಮಂತ ಸೀರೆಯಲ್ಲಿ ವಿದ್ಯಾರ ಗೌನ್ ಧಿರಿಸಿಗೆ ಮಾರ್ಪಾಟನ್ನು ಮಾಡಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: 2014 ರ ಪದ್ಮಶ್ರೀ ಪ್ರಶಸ್ತಿ ಪಡೆದ ವಿದ್ಯಾ ಬಾಲನ್

ಈ ಸಿಲ್ಕ್ ಸೀರೆಯ ವಿನ್ಯಾಸ ತುಂಬಾ ಸರಳವಾಗಿದೆ. ಸೀರೆಯ ಮುಖ್ಯ ಬಣ್ಣ ತಿಳಿ ಬಿಳಿ ಹಾಗೂ ಕೇಸರಿ ಅಂಚನ್ನು ಸೀರೆ ಹೊಂದಿದೆ. ಸೆರಗನ್ನು ಪ್ಲೇಟ್ಸ್‌ಗಳಲ್ಲಿ ಹಾಕಿಕೊಂಡಿರು ವಿದ್ಯಾ ಫಾರ್ಮಲ್ ಲುಕ್ ಅನ್ನು ಚೂಸ್ ಮಾಡಿಕೊಂಡಿದ್ದಾರೆ.
ವಿದ್ಯಾರಿಗೆ ಚೆನ್ನಾಗಿ ಒಪ್ಪು ಸೀರೆಯನ್ನು ಆಯ್ಕೆಮಾಡಿಕೊಂಡದ್ದೇ ನಮಗೆ ಸಂತೋಷದ ವಿಷಯವಾಗಿದೆ. ಸೀರೆಗಳಲ್ಲಿ ವಿದ್ಯಾ ಮಾಡುವ ಪ್ರಯೋಗಗಳು, ಸೀರೆಯಲ್ಲಿನ ಆಕೆಯ ಸ್ಟೈಲ್‌ಸೆನ್ಸ್ ನಮಗೆ ತುಂಬಾ ಇಷ್ಟವಾದುದು. ಇನ್ನಷ್ಟು ಅದ್ಭುತ ಸೀರೆಗಳಲ್ಲಿ ವಿದ್ಯಾರನ್ನು ಕಾಣುವ ಬಯಕೆ ನಮ್ಮದಾಗಿದೆ.
ವಿದ್ಯಾ ಬಾಲನ್ ಹೆಸರೆತ್ತಿದರೆ ನೆನಪಾಗುವುದು ಸೀರೆ ಏಕೆಂದರೆ ಈ ನಟಿ ಹೆಚ್ಚು ಕಂಡುಬರುವುದೇ ಸೀರೆಗಳಲ್ಲಿ. ಅಲ್ಲದೆ ತಮ್ಮ ಸೀರೆಗೆ ತಕ್ಕಂತೆ ಮೇಕಪ್ ಮಾಡಿಕೊಂಡಿರುವ ವಿದ್ಯಾ ಚಿನ್ನದ ಆಭರಣ, ಕೆಂಪು ತುಟಿ ಮತ್ತು ಬಾಚಿದ ತುರುಬು ಕೇಶ ವಿನ್ಯಾಸ ಹೀಗೆ ವಿಶಿಷ್ಟವಾಗಿ ವಿದ್ಯಾ ಬಾಲನ್ ಕಂಡುಬಂದರು. ಇಂತಹ ಸರಳ ಮೇಕಪ್ ಭಾರತೀಯ ನಟಿಯನ್ನು ಅದ್ಭುತ ಸುಂದರಿಯನ್ನಾಗಿಸಿದೆ. ಈ ದೇಸೀ ಸ್ಟೈಲ್‌ಗೆ ನೀವು ಮರಳಾಗಿದ್ದೀರಾ?



Click it and Unblock the Notifications
